ಮನೆ ಮನೆ ಮದ್ದು ಪಿತ್ತ ದೋಷ

ಪಿತ್ತ ದೋಷ

0

1. ಒಂದು ಬಟ್ಟಲು ಜೀರಿಗೆ ಕಷಾಯಕ್ಕೆಒಂದು ಚಿಟಿಕೆ ಯಾಲಕ್ಕಿ ಪುಡಿ ಸೇರಿಸಿ,ಕುಡಿಯುವುದರಿಂದ ಪಿತ್ತ ದೋಷ ನಿವಾರಣೆ ಆಗುವುದು.

Join Our Whatsapp Group

2. ಹುಳಿ ಮಜ್ಜಿಗೆಯಲ್ಲಿ ಜೀರಿಗೆ ಪುಡಿ,ಉಪ್ಪು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆ ಆಗುವುದು.

3. ಒಂದು ಟೀ ಚಮಚ ಹುಣುಸೆ ಗೊಜ್ಜಿನಲ್ಲಿ ಅರ್ಧ ಟೀ ಚಮಚದಷ್ಟು ಜೀರಿಗೆ ಪುಡಿಯನ್ನು ಬೆರೆಸುವುದು,ಜೇನುತುಪ್ಪದೊಂದಿಗೆ ನಾಲ್ಕೈದು ದಿನಗಳವರೆಗೆ ಮಿತವಾಗಿ ಸೇವಿಸುತ್ತಿದ್ದರೆ ಪಿತ್ತಶಮನ ಆಗುವುದು.

4. ಊಟದ ನಂತರ ಒಂದು ಚೂರು ಶುಂಠಿ ಅಗಿದು, ಚಪ್ಪರಿಸುತ್ತಿದ್ದರೆ ಪಿತ್ತ ನಿವಾರಣೆ ಆಗುವುದು.

5. ಸಿಪ್ಪೆ ಸಹಿತ ಸೇವನ್ನು ತಿನ್ನುವುದರಿಂದ ಪಿತ್ತ ದೋಷಕ್ಕೆ ಅವಕಾಶ ಇರದು.ಯಕೃತ್ತಿನ ತೊಂದರೆಯಿಂದಲೂ ದೂರ ಆಗಬಹುದು.

6. ಮಾವಿನ ಹಣ್ಣನ್ನು ಮಿತಾಹಿತವಾಗಿ ತಿನ್ನುವುದರಿಂದ ಪಿತ್ತ ದೋಷದಿಂದ ಬರುವ ರೋಗಗಳು ಸುಲಭವಾಗಿ ನಿವಾರಣೆ ಆಗುವುವು

7. ಪರಂಗಿಹಣ್ಣಿನ ಸೇವನೆಯಿಂದ ಯಕೃತ್ ದೋಷಗಳು ನಿವಾರಣೆ ಹೊಂದುವುವು.

8. ದೊಡ್ಡಪತ್ರೆ ಸೊಪ್ಪನ್ನು ಮತ್ತು ಅರಿಶಿನ ಕೊನೆಯನ್ನು ನುಣ್ಣಗೆ ಅರೆದು ಹಚ್ಚಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಪಿತ್ತದೋಷ ನಿವಾರಣೆ ಆಗುವುದು.

9. ಜೀರಿಗೆ ಕಷಾಯಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ,ಸೇವಿಸುವುದರಿಂದ ಪಿತ್ತಸಂಕಟ ನಿವಾರಣೆ ಆಗುವುದು.

10. ನೇರಳೆಹಣ್ಣನ್ನು ಸಿಹಿ ಹುಳಿಯಿಂದ ಕೂಡಿದ ಒಗರು ಇರುವುದರಿಂದ ಇದರ ಸೇವನೆ ಪಿತ್ತದೋಷ ನಿವಾರಣೆಗೆ ಸಿದ್ಧೌಷಧಿ.

11. ಪಿತ್ತ ದೋಷ ನಿವಾರಣೆಗೆ ಹಲಸಿನಕಾಯಿಯನ್ನು ಅಡಿಗೆಯಲ್ಲಿ ಹುಳಿ, ಪಲ್ಯ ಮೊದಲಾದ ವ್ಯಜನಗಳಿಗೆ ಉಪಯೋಗಿಸುವುದು ಉತ್ತಮ.