ಮನೆ ಪೌರಾಣಿಕ ಶ್ರೀಮನ್ನಾರಾಯಣ ಸಾಕ್ಷಾತ್ಕಾರ

ಶ್ರೀಮನ್ನಾರಾಯಣ ಸಾಕ್ಷಾತ್ಕಾರ

0

    ಬಲಿಗೆ ಬಾಣಾಸುರನು ಮೊದಲಾದ ನೂರು ಜನ ರಾಕ್ಷಸರು  ಹುಟ್ಟಿದರು. ಪ್ರಹ್ಲಾದನ ವಂಶವು ಪುತ್ರ ಪೌತ್ರ ಪೌಷ್ಕಲ್ಯದೊಂದಿಗೆ ಅನಂತಮುಖವಾಗಿ ವಿಸ್ತರಿಸಿತು. ಕ್ರಮೇಣ ನಿವಾತಕವಚರೆಂಬ ಮೂರು ಕೋಟಿ ರಾಕ್ಷಸರು ಜನಿಸಿದರು  ಹಿರಣ್ಯಕಶ್ಯಪನ ತಮ್ಮನಾದ ಹಿರಣ್ಯಾ ಕ್ಷನಿಗೆ ಝರ್ಶರಿ ಶಕುನಿ, ಭೂತಸಂತಾಪ , ಮಹಾನಗ, ಮಹಾಭಾಗ, ಕಾಲನಾಭರು ಜನಿಸಿದರು.

Join Our Whatsapp Group

ಕಶ್ಯಪನ ಪ್ರಜಾಪತಿಯ ಮೂರನೇ ಪತ್ನಿ ಧನುವಿಗೆ ವೈಶ್ವನರ, ದ್ವಿಹೂರ್ತ, ಶಂಕರ, ಶಂಕುಶಿರ,ಅಯೋಮುಖ, ಕಪಿಲ,ಸಂವರ, ಏಕಚಕ್ರ, ಮಹಾಭಾರನಾದ ತಾರಕ, ಸ್ವರ್ಭಾನು, ವೃಷಪರ್ವ, ಪುಲೋಮ, ವಿಪ್ರಚಿತ್ತಿ ಎಂಬುವರು 13 ಜನರು ಹುಟ್ಟಿದರು. ಇವರೆಲ್ಲರೂ ದಾನವ ಲೋಕದಲ್ಲಿ ಖ್ಯಾತಿಯನ್ನು ಗಳಿಸಿರುವವರು. ಸ್ವರ್ಭಾನುಗೆ ಪ್ರಭ ಜನಿಸಿದಳು. ಆಕೆಯ ನಂತರ ವೃಷರ್ವನಿಗೆ ಹುಟ್ಟಿದ ಮಗಳು ಶರ್ಮಿಷ್ಟಳನ್ನು ಯಯಾತಿಗೆ ಕೊಟ್ಟು ವಿವಾಹ ಮಾಡಿದರು. ವೃಷಪರ್ವನಿಗೆ ಮತ್ತೆ ಉಪದಾನವಿ, ಹಯಶಿರರೆಂಬ ಒಬ್ಬ ಮಗಳು  ಒಬ್ಬ ಮಗನು ಜನಿಸಿದನು  ವೈಶ್ಚಾನರನಿಗೆ ಇಬ್ಬರು ಪುತ್ರಿಯರು ಪುಲೋಮಾ, ಕಾಲಿಕ, ಅವರಿಬ್ಬರೂ ಮರೀಚಿಯ ಪತ್ನಿಯರೇ ನಂತರ ಅವರಿಗೆ ಅರವತ್ತು ಸಾವಿರ ಮಕ್ಕಳಾದರು. ತಾಯಿಯರಿಬ್ಬರ ಬಾಳಿಯಲ್ಲಿಯೂ ಸಮಾ ಪ್ರೀತಿಯಿಂದ ಬೆಳೆದ ಅವರಿಗೆ ಪೌಲೋಮರೆಂದೂ, ಕಾಲಕೇಯರೆಂದೂ ಹೆಸರು ಬಂದಿತು.ಅತಿ ಭಯಾನಕ ರೂಪದಿಂದ ಕೂಡಿದ್ದು ಕ್ರೂರ ಚರ್ಯೆರಾಗಿದ್ದರಿಂದ ಅವರನ್ನು ನಿಷ್ಕರುಣೆಯರೆಂದೂ ಸಹ ಕರೆಯುತ್ತಾರೆ. ವಿಪ್ರಚಿತ್ತಿಗೆ ಸಿಂಹಿಕ ಗರ್ಭದಲ್ಲಿ ವ್ಯಂಶ, ಶಲ್ಯ, ನಭ, ವಾತಾಪಿ, ನಮುಚಿ, ಇಲ್ವಲ, ಖಸ್ರಿಮ, ಅಂಜಕ,ನರಕ,ಕಾಲನಾಭ ಸ್ವರ್ಭಾನು, ಎಂಬ 12 ಜನ ಮಕ್ಕಳು ಪ್ರಹಲಾದನ ಜನನದಿಂದ ಪವಿತ್ರೀಕೃತವಾದ ದೈತ್ಯ ವಂಶವು ವಿಗುಣಿ ಕೃತವಾಗಿ ಲಕ್ಷಾಂತರ ಪೀಳಿಗೆಗಳಿಗಾಗಿ ವಿಸ್ತರಿಸಿತು ಕಶ್ಯಪನ ಪ್ರಜಾಪತಿಯಿಂದ ತಾಮ್ರಳಿಗೆ ಆರು ಜನ ಹೆಣ್ಣು ಮಕ್ಕಳಾದರು ಶ್ಯುಕಿ, ಶ್ಯೇನಿ, ಸುಗ್ರೀವಿ, ಶುಚಿ, ಗೃದ್ರ, ಶುಕಿಗೆ ಪಕ್ಷಿ ಸಂತಾನವಾಯಿತು, ಕಾಗೆಗಳು, ಗಿಣಿಗಳು, ಗೊಂಬೆಗಳು, ಹುಟ್ಟಿದವು. ಶೇೖನಿಗೆ ಡೇಗ್ ಗಳು, ಪಾರಿವಾಳಗಳು ಹುಟ್ಟಿದವರು. ಭಾಸಿಗೆ ಬಾವಲಿಗಳು, ಸೂಚಿಗೆ ನೀರಿನಲ್ಲಿರುವ ಪಕ್ಷಿಗಳು ಸುಗ್ರೀವನಿಗೆ ಕುದುರೆಗಳು, ಕತ್ತೆಗಳು, ಕೋಳಿಗಳು, ಹುಟ್ಟಿದವು. ಕಶ್ಯಪನ ಹೆಂಡತಿ ಮಿನತಳಿಗೆ ಗುರುತ್ಮಂತನು, ಸುಪರ್ಣವನು ಜನಿಸಿದರು. ಇವರಲ್ಲಿ ಗರುಡನು ಪಕ್ಷಿ ಕುಲಕ್ಕೆ ರಾಜನಾಗಿ ಸರ್ಪ ಭೋಜನಾಗಿ ಜನಿಸಿದನು.ಸುರಸಳಿಗೆ ಸಾವಿರ ಸರ್ಪಸಂತಾನವುಂಟಾಯಿತು. ಅವರೆಲ್ಲರೂ ಅನೇಕ ಮುಖರೂ, ಆಕಾಶಗಮನರೂ ಆದರೂ ಕತ್ರಿಗಳಿಗೆ ಬಲಿಷ್ಠನಾದ ಬಹುಮುಖವುಳ್ಳ ಸಾವಿರ ಅನಿ ಲಾಸನರು ಜನಿಸಿದರು ಇವರಲ್ಲಿ ಶ್ರೇಷನು, ವಾಸಕಿ, ತಕ್ಷಕನು, ಶಂಖನು. ಶ್ವೇತನಾಗ, ಮಹಾಪದ್ಮ ಕಂಬಳ, ಅಶ್ವತರ, ಏಲಾಪುತ್ರ,ನಾಗ, ಕಾರ್ಕೋಟಕ, ಧನಂಜಯ,ಮುಂತಾದ ವಿಷನಾಗರು ಸುಪ್ರಸಿದ್ಧರು ಕದ್ರುವರ ಅವರ ಮಕ್ಕಳಲ್ಲಿ ಹಲವಾರು   ಗುರುತ್ಮಂತನಿಂದ ಸಾಯಿಸಲ್ಪಟ್ಟರು. ಕ್ರೋಧವಶಳಿಗೆ ಕ್ರೋಧಮುಖಗಳು, ನಿಶಿತವಾದ  ಹೋದ ಮುಖಗಳು ನಿಶಿತವಾದ ಕೋರೆಗಳುಳ್ಳ ಕ್ರೂರ ಜಂತು ಪ್ರಾಣಿಗಳು ಆವಿರ್ಭವಿಸಿತು. ಸುರಭಿಗೆ ಗೋವುಗಳು, ಮಹಿಷಗಳು  ಇಲಳಿಗೆ ಲತೆಗಳು ತೃಣ ಅಪ್ಸರೋಗಣ ಹುಟ್ಟಿದವು ಅರಿಷ್ಟಳಿಗೆ ಅತಿ ಸೌಂದರ್ಯವಂತರಾದ ಗಂಧರ್ವರು ಜನಿಸಿದರು.

     ಕಶ್ಯಪ ಪ್ರಜಾಪತಿಗೆ ಈ ರೀತಿಯಾಗಿ ಸಾವಿರಾರು ಸಂಖ್ಯೆಯಲ್ಲಿ ಪುತ್ರ ಪೌತ್ರಾದಿಗಳಾಗಿ ವಂಶಾಭಿವೃದ್ಧಿ  ನಡೆಯಿತು. ಅವರೆಲ್ಲರೂ ಭೂಮಿಯ ಮೇಲೆ ನಾಲ್ಕು ದಿಕ್ಕುಗಳಿಗೂ ಪರ್ಯಟಿಸಿ ವಾಸವನ್ನು ಏರ್ಪಡಿಸಿಕೊಂಡರು. ಲೋಕದಲ್ಲಿ ಅವರಿಗೆ ಅವಶ್ಯಕವಾದ ಸ್ಥಾವರ ಜಂಗಮಂಗಳು ನೆಲೆಸಿ ಬೂತ ಸೃಷ್ಟಿ ಪರಿಪೂರ್ಣವಾಗಿ ಅಭಿವೃದ್ಧಿ  ಯಾಯಿತು. ಮೈತ್ರೇಯಾ ಪರಮ ಶಾಂತಿಗೆ ಕಾರಣನಾದವನು ಶ್ರೀಮನ್ನಾರಾಯಣನು. ತನ್ನ ರಾಜ ಸಗುಣದಿಂದ ಸ್ವರೋಚಿಷ ಮನ್ ಮನ್ವಂತರದಲ್ಲಿ  ಏರ್ಪಡಿಸಿದ ಸೃಷ್ಟಿ ವಿಲಾಸವನ್ನು ಸವಿಸ್ತಾರವಾಗಿ ವಿವರಿಸಿದನು.ಅದಿತಿನಂದನನಾದ ದೇವೇಂದ್ರನು ತನ್ನ ಮಹಾ ಪರಾಕ್ರಮದಿಂದ ಭೀಷ್ಮಣ ವಜ್ರ ಧಾರಣೆಯಿಂದ ದೈತ್ಯ ಸಂಘವನ್ನು ಪ್ರಾರಾಭವಗೊಳಿಸಿ ಸಾಯಿಸುತ್ತಾ ಬಂದನು.ತನ್ನ ಮಕ್ಕಳು ತನ್ನ ಕಣ್ಣ ಮುಂದೆಯೇ ಸಾಯುತ್ತಿರುವುದನ್ನು ಕಂಡು ಗರ್ಭಕೋಶದಿಂದ ನರಳುತ್ತಾ ದಿತೀದೇವಿಯು ಕಶ್ಯಪ ಪ್ರಜಾಪತಿಗೆ ಭಕ್ತಿಯಿಂದ ಸೇವಾ ವಿಧಿಗಳನ್ನು ನಿರ್ವಹಿಸುತ್ತಲೇ ಬಂದಳು. ಕೊನೆಗೆ ಸಂಪತ್ನಿಯರೂ ಕೂಡ ಆಕೆಯ ಪತಿಯ ಅನುರಾಗಕ್ಕೆ ಆಶ್ಚರ್ಯ ಚಕಿತರಾದರು. ಆನಂತರ ವೈವಸ್ವತ ಮನ್ವಂತರವು  ಆರಂಭವಾಯಿತು. ಕಶ್ಯಪ  ಪ್ರಜಾಪತಿ ತನ್ನ ಹೆಂಡತಿಯ ಭಕ್ತಿಯ ಅತಿಶಯವನ್ನು ಸೇವಾ ಭಾವನೆಯನ್ನು ವೀಕ್ಷಿಸಿ, ಪ್ರೀತಿ ಸ್ವಾಂತನಾಗಿ, “ನಿನ್ನ ಅಭೀಷ್ಟ ವರವನ್ನು ಕೇಳು “ಎಂದು ದಿತಿಯನ್ನು  ಆದೇಶಿಸಿದನು. ಆಗ ಆಕೆ   “ಸ್ವಾಮೀ! ಇಷ್ಟು ಸಾವಿರ ವರ್ಷಗಳಿಂದ ನನ್ನ ಪುತ್ರರನ್ನು ವಧಿಸಿ ತಡೆಯಲಾರದ ದುಃಖವನ್ನು ನನಗೆ ಉಂಟುಮಾಡಿದ ಆ ದೇವೇಂದ್ರನನ್ನು ಸಂಹರಿಸಿ ಶಚೀದೇವಿಯೊಂದಿಗೆ ಸೇರಿ ಇಂದ್ರ ಪದವಿಯನ್ನು ಅದೀಷ್ಠಿಸಬಲ್ಲಂತಹ  ಒಬ್ಬ ಮಹಾಬಲವಂತನನ್ನು ನನಗೆ ಮಗನಾಗಿ ಪ್ರಸಾಧಿಸಿರಿ” ಎಂದು ವಿನಮ್ರಳಾಗಿ ಬೇಡಿಕೊಂಡಳು. ಕಶ್ಯಪ ಪ್ರಜಾಪತಿ ಆಕೆ ಬೇಡಿದ ವರವನ್ನು ಅನುಗ್ರಹಿಸಿ ಆಕೆಯನ್ನು ಸಂಗಮಿಸಿ ನಿನ್ನ ಗರ್ಭದಲ್ಲಿ ಪ್ರವೇಶಿಸಿದ ಈ ಅಂಡವನ್ನು ನೀನು ನೂರು ವರ್ಷಗಳವರೆಗೂ ರಕ್ಷಿಸಿಕೊಳ್ಳಬೇಕು.ಗರ್ಭವತಿಯಾದ ಸಮಯದಲ್ಲಿ ನಿನ್ನ ಶರೀರದ ಅವಯವಗಳನ್ನು ಮಲಿನವಾಗಿಸದೇ ಅಮಿತ ಶುದ್ದಳಾಗಿ ಆಚಾರವತಿಯಾಗಿರಬೇಕು. ವ್ರತಭಂಗವಾದರೆ ನಿನ್ನ ಗರ್ಭವ ಅಂತರಿಸುತ್ತದೆ, ನಿನ್ನ ಗರ್ಭವು ಅಂತರಿಸುತ್ತದೆ ಎಂದು ಹೇಳಿ ತಪಸ್ಸಿಗಾಗಿ ಅರಣ್ಯದ ಕಡೆಗೆ ಹೊರಟನು.

    ಈ ರೀತಿಯಾಗಿ ಪುತ್ರ ದಾನವನ್ನು ಮಾಡಿ ಕಶ್ಯಪನನ್ನು ನಿಷ್ಕ ಮೀಸಿದ ಕೆಲವು  ದಿನಗಳಿಗೆ ದಿತಿಯು ಗರ್ಭ ಧರಿಸಿದಳು. ಈ ವಿಷಯವನ್ನು ಗ್ರಹಿಸಿದ ದೇವೇಂದ್ರನು ತನ್ನ ಪದವಿಯನ್ನು ಸ್ಥಿರವಾಗಿರಿಸಿಕೊಳ್ಳುವುದಕ್ಕಾಗಿ ಮಲತಾಯಿಯ ಸಂತಾನವನ್ನು ಸಾಯಿಸಬೇಕೆಂದು ನಿಶ್ಚಯಿಸಿದನು. ದಿತಿಯ ಮನೆಗೆ ಹೋಗಿ ತುಂಬಾ ವಿನಯದಿಂದ ನಮಸ್ಕರಿಸಿ ಪ್ರೀತಿ  ಅನುರಾಗದಿಂದ ನಟಿಸುತ್ತಾ ಬಂಧುತ್ವವನ್ನು ಬೆರೆಸಿದನು. ದಿತಿಯು ಅವನ ಮೋಸದ ಮಾತುಗಳನ್ನು ನಿಜವೇ ಎಂದು ನಂಬಿ, ದೇವೇಂದ್ರನನ್ನು ಆದರಣೆ ಮಾಡಿ ಮನೆಯಲ್ಲಿಯೇ ಇಟ್ಟುಕೊಂಡಳು. ಈ ರೀತಿಯಿರಲು 99 ವರ್ಷಗಳು ಕಳೆದುಹೋದವು. ಒಮ್ಮೆ ಒಂದು ದಿನ ಮಧ್ಯಾಹ್ನ ದಿತಿ ದೇವಿಯು  ಊಟ ಮಾಡಿ ಕೈಗಳನ್ನು ತೊಳೆದುಕೊಂಡ ಮೇಲೆ ಪಾಪ ಪ್ರಕ್ಷಾಳನೆಯನ್ನು ಮಾಡಿಸಿಕೊಳ್ಳುವುದು ಮರೆತಳು. ಕೂದಲನ್ನು ಬಿಟ್ಟುಕೊಂಡು ಭುಕ್ತಾ ಯಾಸದಿಂದ ನಿದ್ದೆಗೆ ಜಾರಿದ ಸಮಯವನ್ನು ಕಂಡು ದೇವೇಂದ್ರನು ಆಕೆಯ ಗರ್ಭದೊಳಕ್ಕೆ ಪ್ರವೇಶಿಸಿದನು. ಅನಾಚಾರ ದೋಷದಿಂದ ವ್ರತಭಂಗವಾದರೆ ಗರ್ಭ ವಿಚ್ಚಿನ್ನವಾಗುತ್ತದೆಂದು ಪಶ್ಯಪ ಪ್ರಜಾಪತಿ ಹೇಳಿದ ಮಾತು ನಿಜವಾಯಿತು. ದಿತಿ ಗರ್ಭಾಶಯದಲ್ಲಿ ಉಸಿರಾಡುತ್ತಿದ್ದ ಶಿಶುವು ಆಗಂತುಕನನ್ನು  ಕಂಡು ಗಟ್ಟಿಯಾಗಿ ರೋಧಿಸತೊಡಗಿತು. ಇಂದ್ರನು  ಅವನೊಂದಿಗೆ ಮಾರೋದಿಃ ಮಾರೋದೇ ಅಳಬೇಡ ಅಳಬೇಡ ಎಂದು ಸಮಾಧಾನ ಪಡಿಸುತ್ತಲೇ ವಜ್ರಾಯುಧವನ್ನು  ಎತ್ತಿಕೊಂಡು ಶಿಶುವನ್ನು ತುಂಡು ತುಂಡುಗಳಾಗಿ ಕತ್ತರಿಸಿ, ಆಗರ್ಭ ಶತ್ರುವಿನ ಮರಣಕ್ಕೆ ಸಂತೋಷಿಸುತ್ತಾ ಯಥಾ ಸ್ತಾನಕ್ಕೆ ಹೊರಟುಹೋದನು. ದಿತಿ ಗರ್ಭದಲ್ಲಿರುವ ಶಿಶು ಪಿಂಡಗಳು  ದೇವೇಂದ್ರನನ್ನು ಬಯಸಿದಂತೆ ಮರಣಿಸಲಿಲ್ಲ.ನೂರು ವರ್ಷಗಳು ತುಂಬುತ್ತಲೇ ಆಕೆ ೪೯ ಮಕ್ಕಳನ್ನು ಹೆತ್ತಳು ದೇವೇಂದ್ರನು ಮಾರೋದಿಃ  ಎಂದು ಹೇಳುದ್ದರಿಂದ ಅವರಿಗೆ ಮರಣದ್ಗಣವೆಂದು ಹೆಸರು ಬಂದಿತು. ಜನನಕ್ಕೂ ಮುಂಚೆಯೇ ಇಂದ್ರ ದರ್ಶನವನ್ನು ಮಾಡಿದ ಪುಣ್ಯದಿಂದ ಅವರು ಸಾತ್ವಿಕರಾಗಿ ದೇವತೆಗಳಿಗೆ ಸಹಾಯ ಮಾಡುತ್ತಾ ಬೆಳೆದರು. ಇಂದ್ರನ ಆಸ್ಥಾನದಲ್ಲಿಯೇ ಸ್ಥಾನವನ್ನು ಪಡೆದರು.