ಮನೆ ಜ್ಯೋತಿಷ್ಯ ತೂಕ ಕಡಿಮೆ ಮಾಡುವುದು

ತೂಕ ಕಡಿಮೆ ಮಾಡುವುದು

0

    ದೇಹದ ಕೊಬ್ಬಿನಿಂದ ಬರುವ ಕ್ಯಾನ್ಸರ್,ವ್ಯಾದಿ, ದೊಡ್ಡ ಕರಳು, ಗರ್ಭಕೋಶ,ಮೂತ್ರ ಚೀಲ ಮತ್ತು ಸ್ತನಗಳಲ್ಲಿ ಬರುತ್ತದೆ.ಇದಕ್ಕೆ ವ್ಯಾಯಾಮ ಮತ್ತು ಕಡಿಮೆ ಕ್ಯಾಲೋರಿ ಆಹಾರ ತೆಗೆದುಕೊಳ್ಳಬೇಕು. ನಡಿಗೆಯೂ ಸಹ ಅತ್ಯುತ್ತಮ ಔಷಧಿ, ವ್ಯಾಯಾಮವು ಬಹಳವಾಗಿ ರೂಢಿಸಿಕೊಳ್ಳಿ  ಅಂದರೆ ನೃತ್ಯ, ಈಜು,ಕ್ರೀಡೆಗಳಲ್ಲಿ, ಪಾಲ್ಗೊಳ್ಳ. ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಅದು ನಿಮಗೆ ಸಮಯ ರಕ್ಷಣೆಯನ್ನು ನೀಡುತ್ತದೆ.

Join Our Whatsapp Group

ನಿತ್ಯ ಜೀವನದಲ್ಲಿ

ವಿಜ್ಞಾನಿಗಳು ಕ್ಯಾನ್ಸರ್ ಎಂಬ ವ್ಯಾದಿಯನ್ನು ಬಹಳ ಜಾಗರೂಕತೆಯಿಂದ ನಮ್ಮ ಜೀವನದಲ್ಲಿ ಬರದಂತೆ ನೋಡಿಕೊಳ್ಳಲು ಅನೇಕ ರೀತಿಯ ಜೀವನ ವಿಧಾನವನ್ನು ತಿಳಿಸಿದ್ದಾರೆ. ಹಲವು ಹವ್ಯಾಸಗಳಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಾಗದವರಿಗೆ ಮುಂದೆ ಜೀವನದಲ್ಲಿ ಕಾದಿದೆ ಘೊರ ವಿಪ್ಪತ್ತು ಉತ್ತಮ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಜೀವನ ನಡೆಸಿದರೆ ಕ್ಯಾನ್ಸರ್ ನಂತಹ ಮಹಾವ್ಯಾಧಿಯಿಂದ ಪಾರಾಗಬಹುದು.

ಕೊಬ್ಬಿನ ಹಾರವನಿಗೆ ಹೆಚ್ಚು ತೆಗೆದುಕೊಳ್ಳಬಾರದು

      ಇದರಿಂದ ತಮ್ಮ ಜೀವನದಲ್ಲಿ ಸ್ತನ ಕರುಳು ಮತ್ತು ಪುರುಷ ಜನೇಂದ್ರಿಯ ಗ್ರಂಥಿಯ ಕ್ಯಾನ್ಸರ್ ಬರುವ ಅವಕಾಶಗಳು ಇರುತ್ತದೆ ಕಡಿಮೆ ಕೊಬ್ಬಿನ ಕಡಿಮೆ ಕ್ಯಾಲೋರಿ, ಕಡಿಮೆ ಸಕ್ಕರೆ ಪ್ರಮಾಣದ ಆಹಾರ ಸೇವಿಸಿ. ಹಾಗೇ ಪ್ರತಿದಿನ ಒಂದು ಗಂಟೆಯಾದರೂ ವ್ಯಾಯಾಮ, ನಡಿಗೆ ಮಾಡುತ್ತಾ ಬರುವುದು.

ಹೆಚ್ಚು ಉಪ್ಪುರಹಿತ ಆಹಾರ ಸೇವಿಸಿ

     ನಮ್ಮ ದೇಶದಲ್ಲಿ ಹೊಟ್ಟೆ ಸಂಬಂಧ, ಗರ್ಭಕೋಶ ಸಂಬಂಧ, ಕ್ಯಾನ್ಸರ್ ಸಾಮಾನ್ಯವಾಗಿ ಈ ರೀತಿಯ ಕೊಬ್ಬಿನಾಂಶ ಮತ್ತು ಹೆಚ್ಚು ಸೇವನೆಯಿಂದ ಅಂಗಗಳಲ್ಲಿ ಕ್ಯಾನ್ಸರ್ ವ್ಯಾಧಿ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಸುಲಭವಾಗಿ ದೊರೆಯುವ ಉಪ್ಪಿನಕಾಯಿ, ಉಪ್ಪಿನಲ್ಲಿ ಬೇಯಿಸಿದ ಮಾಂಸ, ಮೀನುಗಳನ್ನು ಕಡಿಮೆ ಬಳಸಿ.

ಧೂಮಪಾನ ನಿಷೇಧಿಸಿ

    ಧೂಮಪಾನವು ಬಹಳವಾಗಿ ಕ್ಯಾನ್ಸರ್ ವ್ಯಾಧಿಯನ್ನು ತರುವ ಹವ್ಯಾಸವಾಗಿದೆ.ಇದರಿಂದ ಶ್ವಾಸಕೋಶ, ಮೂತ್ರ ಚೀಲ, ಗಂಟಲು, ಉಸಿರಾಟದ ತೊಂದರೆ ಆರಂಭವಾಗುತ್ತದೆ. ಇದನ್ನು ಮನೆಯಲ್ಲಿ ಸೇವಿಸಿದರೆ ಕುಟುಂಬದ ಸದಸ್ಯರಿಗೂ ತೊಂದರೆ.ಗರ್ಭವತಿ ಸ್ತ್ರೀಯರು ಧೂಮಪಾನ ಮಾಡಿದರೆ  ಗರ್ಭದಲ್ಲಿರುವ ಶಿಶುವಿಗೂ ತೊಂದರೆ ತಪ್ಪಿದ್ದಲ್ಲ.

ಹೊಗೆಸೊಪ್ಪು ಮತ್ತು ಪಾನ್ ಗಳು ಜಗಿಯುವುದರಿಂದ ಬಾಯಿ, ನಾಲಿಗೆ, ಗಂಟಲು, ಹಲ್ಲು, ಒಸಡು, ಜಠರ, ತಲೆ ಸಂಬಂಧ ಟ್ಯೂಮರ್ಗಳು ಬರುವ ಸಾಧ್ಯತೆ.

 ಮದ್ಯಪಾನ

     ಅಧಿಕ ಸೇವನೆಯಿಂದ ನಿಮ್ಮ ಲಿವರ್ ಕ್ಯಾನ್ಸರ್ ಅಲ್ಲದೆ ಕರಳು, ಬಾಯಿ, ಕತ್ತು, ಗಂಟಲು, ಕ್ಯಾನ್ಸರ್ ಆರಂಭವಾಗುತ್ತದೆ.

 ಕ್ಯಾನ್ಸರ್ ಗುಣಪಡಿಸುವುದು

ಸಾಮಾನ್ಯವಾಗಿ ಇದನ್ನು ಶಸ್ತ್ರ ಚಿಕಿತ್ಸೆ,ಕಿಮೋಥೆರೆಪಿ, ರೇಡಿಯೋ ಥೆರೆಪಿ,  ಇವುಗಳಿಂದ ಕ್ಯಾನ್ಸರ್ ಗುಣಪಡಿಸಬಹುದು.

 ಕ್ಯಾನ್ಸರ್ ವ್ಯಾಧಿ ಆರಂಭಿಕವಾದರೆ ಬಹಳ ಉಪಯೋಗವಾಗುವುದು.

 ಕಿಮೋಥೆರಪಿಯು  ರಾಸಾಯನಿಕ ಗೆಡ್ಡೆಗಳು ಕಾಣಿಸಿದಾಗ.

 ರೇಡಿಯೇಶನ್ ಥೆರಪಿಯ ಕೊಬಾಲ್ಟ್  ಮಿಷನ್ ನಿಂದ ರೆಡಿಯೇಷನ್ ಕಿರಣಗಳನ್ನು ಹಾಯಿಸಿ  ಕ್ಯಾನ್ಸರ್ ಕೋಶವನ್ನು ನಾಶಮಾಡಬಹುದು.