ಮನೆ ದೇವರ ನಾಮ ಗಣಪತಿ ಬಂದ ಹಬ್ಬವ ತಂದ

ಗಣಪತಿ ಬಂದ ಹಬ್ಬವ ತಂದ

0

ಬಾಲು : ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲು
ಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು ||
ಚಿನ್ನದ ಗೌರಿಯ ಮುದ್ದಿನ ಕಂದನು |
ಶಂಭೋಶಂಕರ ಸೃಷ್ಟಿಯ ರೂಪನು |
ಮೂಷಿಕ ವಾಹನನು ಮುಲೋಕದೊಡೆಯನು|
ಭಕ್ತರ ಹೃದಯದ ಶ್ರೀ ನಿಲಯನು |
ಹೂ ತೇರನೇರಿ ಬಂದ ಆ ಬಿಂಕ ಎಷ್ಟು ಚೆಂದ |
ಆಹಾ ಬಾಪುರೆ ಬಳ ಬಳಿ ತೇರ ನೇಳವ ನಡಿ |
ವೃಂದ : ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲು
ಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು.||

ಬಾಲು : ಬಾದ್ರಪದದ ದೇವನಿವ ಚೌತಿಯ ಚೆಲುವಯ್ಯನಿವ
ಚಂದ್ರನ ಗರ್ವಾನ ಕಳೆದವನು ಇವ |
ಇಲಿಯನೇರಿ ಬರುವನಿವ ಇಳಿಯ ಜನಕೆ ಸುಖ ತರುವ |
ಬೇಡುವ ವರ ನೀಡೂ ಹೃದಯ ಶಿವನಿವ |
ಧರಗೆ ಕೈಲಾಸ ತಂದಂಥ ಧೀರನು|
ಸಿದ್ಧಿಯ ಬುದ್ಧಿಯ ಕೊಡುವಂಥ ದೇವನು |
ಮನದ ದುಗುಡವ ಕಳೆವ ಮನೋನಾಥನು |
ಎಲ್ಲರೊಳಗೊಂದಾಗುವ ಏಕದಂಥನು |
ಬರುವ ಅಡೆ ತಡೆಗಳ ತಡೆದು ಜಯ ನೀಡುವಾ |
ನಮ್ ಅವಗುಣಗಳ ತಡೆದು ಕರುಣೆ ತೋರುವಾ |
ಆ ಗಣಪಗೆ ಶರಣೆಂದು ನಾವ್ ಕರವ ಮುಗಿದು ಬಂದು|
ಹೂ ರಥವನೆಳೆವ ಹೊಂದಾಗುತ |
ವೃಂದ ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲು
ಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು ||

ಬಾಲು ಸೊಂಡಿಲಲ್ಲಿ ಅಮೃತ ಕಲಶ ಕೈಗಳಲ್ಲಿ ಪಾಶಂಕುಶ |
ಶ್ರೀ ಪಾದದ ನಾಟ್ಯ ಭಂಗಿಯ ನೋಡು|
ಕಬ್ಬು ಕಡಬು ಕಜ್ಜಾಯ ಮೆಲ್ಲುವ ಮಹಾಕಾಯ |
ಭಕ್ತರನ್ನು ಕಾಯುವ ಕರುಣೆಯ ನೋಡು |

ವರುಷ ವರುಷವು ವರುಷದಿಂದ ಬರುವನು |
ಮೊದಲು ಪೂಜೆಯ ಎಲ್ಲರಿಂದ ಪಡೆವನು |
ಭಕ್ತರ ಭಾವಕೆ ನಲಿಯುತ ಒಲಿವನು |
ಅಂತರ ತೊರೆದೆ ಕಾತಿಡುತಿಹನು |
ವರ ಶುಭಕರ ಸಿರಿ ಗುಣಗಳ ಗಣಭೂಷಣ |
ಈ ಸುರನರ ಮನು ಮುನಿವಂದಿತ ಪಾದನ |
ಆ ಗಣೇಶನಿಗೆ ನಮಿಸಿ ಶುಭ ಚರಣದಿ ಇರಿಸಿ|
ಜಯ ಜಯವೆನುತ ರಥವನ್ನು ಎಳೆಯುವಾ || ಗಣಪತಿ ||