ಮನೆ ಮನೆ ಮದ್ದು ಬಿಕ್ಕಳಿಕೆ ಆದಾಗ

ಬಿಕ್ಕಳಿಕೆ ಆದಾಗ

0

1.  ಲವಂಗವನ್ನು ಹಲ್ಲುಗಳಿಂದ ಆಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ಕಡಿಮೆ ಆಗುವುದು.

Join Our Whatsapp Group

2. ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುವುದು.

 ಬಾಯಿ ದುರ್ವಾಸನೆ  ಆದಾಗ :-

1. ಗೋರಂಟಿ ಗಿಡದ ಚಿಗುರುಲೆಗಳನ್ನು ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ ಅಗಿದು,ರಸನ್ನು ಉಗುಳುತ್ತಿದ್ದರೆ ದುರ್ವಾಸನೆ ದೂರ ಆಗುವುದು.

2. ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು,ಅಂಗಗಳಿಗೆ ತಿಕ್ಕಿ ಸ್ನಾನ ಮಾಡುವುದರಿಂದ ಬೆವರಿನ ವಾಸನೆ ದೂರ ಆಗುವುದು.

3. ಅಡಿಕೆ ಪುಡಿಯನ್ನು ದಿನವೂ ಉಪಯೋಗಿಸುತ್ತಿದ್ದರೆ ಬಾಯಿಂದ ಬರುವ ದುರ್ಗಂಧ ದೂರ ಆಗುವುದು.

4. ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು ನಗುವುದರಿಂದ ಬಾಯಿ ದುರ್ವಾಸನೆಯಿಂದ ಕೂಡಿದ್ದರೆ ನಿವಾರಣೆ ಆಗುತ್ತದೆ. ಹೀಗೆಯೇ ಲವಂಗವನ್ನು ಬಾಯಲ್ಲಿ ಇಟ್ಟುಕೊಂಡಿರಬಹುದು.

5. ಓಮುಕಾಳುಗಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಬಾಯಿಯಿಂದ ಬರುವ ದುರ್ವಾಸನೆ ದೂರ ಆಗುವುದು.

6. ಎಲೆ ಅಡಿಕೆ ಜೊತೆಯಲ್ಲಿ ಲವಂಗವನ್ನು ಸೇರಿಸಿ ಜಿಗಿಯುವುದರಿಂದ ದುರ್ವಾಸನೆ ದೂರ ಆಗುವುದು.

7. ಊಟ ಆದ ನಂತರ ಸೋಂಪು ಕಾಳುಗಳನ್ನು ಅಗಿಯುತ್ತಿದ್ದರೆ ದುರ್ವಾಸನೆ ಕಡಿಮೆ ಆಗುವುದು.

8. ಬೆಲ್ಲ ಬೆಲೆದ ಹಣ್ಣಿನ ಪಾನಕವನ್ನು ಯಾಲಕ್ಕಿ ಪುಡಿಯೊಂದಿಗೆ ಸೇರಿಸಿ ಕುಡಿಯುವುದರಿಂದ ಬಾಯಿಯಿಂದ ಬರುವ ದುರ್ವಾಸನೆ ದೂರ ಆಗುವುದು.

9. ಗರಿಕೆ ಹುಲ್ಲನ್ನು ಆಗಿದು ಬಾಯಿ ಮುಕ್ಕಳಿಸುವುದರಿಂದಲೂ ದುರ್ವಾಸನೆ ದೂರ ಆಗುವುದು.

10. ಹಲ್ಲುಗಳನ್ನು ದಿನವೂ ಒಂದೆರಡು ಬಾರಿ ಉಜ್ಜಿ ಶುಚಿಗೊಳಿಸುವುದರಿಂದ ದುರ್ವಾಸನೆ ದೂರ ಆಗುವುದು.

11. ನಾಲಿಗೆಯನ್ನು ತಿಕ್ಕಿ ಆಗಾಗ ಬಾಯಿ ಮುಕ್ಕಳಿಸುತ್ತಿರುವುದರಿಂದಲೂ ದುರ್ವಾಸನೆ ದೂರ ಆಗುವುದು.