‘ಆಧೋಮುಖ’ವೆಂದರೆ ಮುಖವನ್ನು ಕೆಳಗಡೆಗೆ ತಿರುಗಿಸಿ ಡುವುದು ‘ವೃಕ್ಷ’ವೆಂದರೆ ಮರ. ಈ ಭಂಗಿಯ ನವೀನ ವ್ಯಾಯಾಮ ವಿದ್ಯೆಯಲ್ಲಿ ಪೂರ್ಣ ಭೋಜಸಮ ತೋಲನ ಎಂಬ ಹೆಸರನ್ನು ತಳೆದಿದೆ.
ಅಭ್ಯಾಸ ಕ್ರಮ
1. ಮೊದಲು ತಾಡಾಸನದಲ್ಲಿ ನಿಂತು ಬಳಿಕ ಮುಂಭಾಗಿ, ಅಂಗೈಗಳನ್ನು ಯಾವುದಾದರೂ ಒಂದು ಗೋಡೆಯ ಬಳಿ ಅದಕ್ಕೆ ಒಂದಡಿ ದೂರದಲ್ಲಿ ನೆಲದ ಮೇಲೆ ಉಸಿರಿಡಬೇಕು. ಎರಡೂ ಅಂಗೈಗಳ ನಡುವಣಂತರ ಭುಜಗಳ ನಡುವಣಂತರಕ್ಕಿಂತಲೂ ಹೆಚ್ಚಿರಬಾರದು. ತೋಳುಗಳನ್ನು ಪೂರಾ ಹಿಗ್ಗಿಸಿಡಬೇಕು.
2. ಬಳಿಕ ಕಾಲುಗಳನ್ನು ಹಿಂದಕ್ಕೆಳೆದು ಮಂಡಿಗಳನ್ನು ಬಾಗಿಸಿ,ಉಸಿರನ್ನು ಹೊರಕ್ಕೆ ಬಿಟ್ಟು ಕಾಲುಗಳನ್ನು ಬೀಸಿ ಗೋಡೆಯೆಡೆಗೆ ಮೇಲೆತ್ತಿ ನಿಲ್ಲಿಸಿ ಸಮತೋಲನ ಮಾಡಬೇಕು. ಕೈಗಳನ್ನು ಗೋಡೆಯಿಂದ ಬಹು ದೂರವಿರಿಸಿದ್ದರೆ, ಕಾಲುಗಳಿಗೆ ಗೋಡೆಯನ್ನು ಆಸರೆ ಮಾಡಿದಾಗ ಬೆನ್ನೆಲುಬು ಬಿಲ್ಲಿನಂತೆ ಬಗ್ಗಬೇಕಾಗುತ್ತದೆ. ಇದರಿಂದ ಬೆನ್ನು ಹೆಚ್ಚಿನ ಎಳತಕ್ಕೆ ಒಳಗಾಗಿ ಶ್ರಮವು ತಲೆದೂರುತ್ತದೆ.ಅಲ್ಲದೆ, ಗೋಡೆಯಿಂದ ಹೆಚ್ಚು ದೂರಕ್ಕೆ ಕೈಗಳನ್ನೂರಿದ್ದೇ ಆದರೆ ಸಮತೋಲನಮಾಡಿ ನಿಲ್ಲಿಸುವುದು ಕಷ್ಟವಾಗುತ್ತದೆ ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟದಿಂದ ಒಂದು ನಿಮಿಷದ ಕಾಲ ನೆಲಸಬೇಕು.
3. ಗೋಡೆಯ ಆಧಾರದಿಂದ ಕೈಗಳ ಮೇಲೆ ಸಮತೋಲ ಸ್ಥಿತಿಯಲ್ಲಿ ನಿಲ್ಲುವುದನ್ನು ಕಲಿತ ಬಳಿಕ, ಪಾದಗಳನ್ನು ಗೋಡೆಯಿಂದಾಚೆ ತೆಗೆಯಬೇಕು. ಆ ಬಳಿಕ, ಕೋಣೆಯ ನಡುತಾಣದಲ್ಲಿ ದೇಹವನ್ನು ಸಮತೋಲನದಲ್ಲಿ ನಿಲ್ಲಿಸುಲು ಅಭ್ಯಾಸವನ್ನು ಮಾಡಬೇಕು.ಕಾಲುಗಳನ್ನು ಪೂರಾ ಹಿಗ್ಗಿಸಿ,ಕಾಲ್ಬೆರಳುಗಳನ್ನು ತದಿಮೇಲ್ಮಾಡಿಡಬೇಕು. ಆಮೇಲೆ ತಲೆಯನ್ನು ಸಾಧ್ಯವಾದಷ್ಟೂ ಮೇಲೆತ್ತಬೇಕು.
ಪರಿಣಾಮಗಳು
ಈ ಆಸನಭಂಗಿಯು ದೇಹವನ್ನು ಸುಗಮರೀತಿಯಿಂದ ಬೆಳೆಸುವುದಕ್ಕೆ ನೆರವಾಗುತ್ತದೆ. ಅಲ್ಲದೆ ಅದು ಹೆಗಲುಗಳು, ತೋಳುಗಳು ಮತ್ತು ಮಣಿ ಕಟ್ಟುಗಳನ್ನು ಬಲಗೊಳಿಸಿ ಎದೆಯನ್ನು ಪೂರಾ ಅಗಲಿಸಲು ಸಹಾಯಕವಾಗಿದೆ.