ಮನೆ ಯೋಗಾಸನ ಏಕಪಾದ ಶೀರ್ಷಾಸನ

ಏಕಪಾದ ಶೀರ್ಷಾಸನ

0

 ‘ಏಕಪಾದ’ವೆಂದರೆ ಒಂದು ಕಾಲು, ಹೆಜ್ಜೆ ‘ಶೀರ್ಷ’ವೆಂದರೆ ತಲೆ..

 ಅಭ್ಯಾಸ ಕ್ರಮ

1. ಮೊದಲು, ನೆಲದಮೇಲೆ ಕುಳಿತು,ಕಾಲುಗಳನ್ನು ಮುಂಗಡೆಗೆ ನೀಲವಾಗಿ ಚಾಚಿಡಬೇಕು.

2. ಬಳಿಕ ಮಂಡಿಯನ್ನು ಬಗ್ಗಿಸಿ,ಎಡಪಾದವನ್ನು ಮೇಲೆತ್ತಿ,ಅದನ್ನು ಎರಡೂ ಕೈಗಳಿಂದ ಎಡಕಾಲಗಿಣ್ಣಿನ ಬಳಿ ಹಿಡಿದು, ಮುಂಡದ ಬಳಿಗೆ ತರಬೇಕು,

3. ಆನಂತರ ಉಸಿರನ್ನು ಹೊರ ಬಿಟ್ಟು ಎಡೆತೊಡೆಯನ್ನು ಮೇಲಕ್ಕೆ ಸೆಳೆದು, ಮತ್ತೆ ಅದನ್ನು ಹಿಂದಕ್ಕೆಳೆದು ಮುಂಡವನ್ನು ಸ್ವಲ್ಪ ಮುಂಗಡೆಗೆ ಬಾಗಿಸಿ,ಎಡಗಾಲನ್ನು ಕತ್ತಿನ ಹಿಂಬದಿಯಮೇಲಿಡಬೇಕು.ಎಡಗಾಲ್ಗಿಣ್ಣಿನ ಸ್ವಲ್ಪ ಮೇಲ್ಗಡೆಯ ಭಾಗವು ಕತ್ತಿನ ಹಿಂಬದಿಯನ್ನು ಮುಟ್ಟಿರುತ್ತದೆ.

4. ತರುವಾಯ ಕತ್ತು ತಲೆಯನ್ನು ಮೇಲೆತ್ತಿ,ಬೆನ್ನನ್ನು ನೆಟ್ಟಗೆ ನಿಲ್ಲಿಸಿ,ಎಡಗಾಲಿಗಿಣ್ಣಿನ ಮೇಲಿದ್ದ ಕೈ ಬಿಗಿತವನ್ನು ಸಡಿಲಿಸಿ, ಅದನ್ನು ಆಚೆ ತೆಗೆದು, ಎರಡು ಅಂಗೈಗಳನ್ನು ಜೋಡಿಸಿ ಎದೆಯ ಬಳಿ ನಮಸ್ಕಾರ ಮುದ್ರೆಯಲ್ಲಿ ಇರಿಸಬೇಕು.ಆಗ ಎಡತೊಡೆಯ ಹಿಂಬದಿಯು ಎಡಬಜದ ಹಿಂಬದಿಯನ್ನು ಮುಟ್ಟಿಕೊಂಡಿರುತ್ತದೆ. ತಲೆಯನ್ನು ಸರಿಯಾಗಿ ನಿಲ್ಲಿಸದಿದ್ದಲ್ಲಿ,ಕತ್ತಿ ನೆಡೆಯಿಂದ ಕಾಲುಜಾರಿ ಬೀಳುವ ಸಂಭವವುಂಟು ಬಲಗಾಲನ್ನು ಮಾತ್ರ ನೆಲದ ಮೇಲೆ ಚಾಚಿಯೇ ಇಟ್ಟಿರಬೇಕು ಮತ್ತು ಆ ಕಾಲಿನ ಹಿಂಬದಿಯೆಲ್ಲವೂ ನೆಲದಮೇಲೆಯೇ ಒರಗಿದ್ದು, ಕಾಲ್ಬೆರಳುಗಳು ಮುಂಗಡೆಗೆ ತುದಿಮಾಡಿರಬೇಕು.

5. ಈ ಭಂಗಿಯಲ್ಲಿ, ಆಳವಾಗಿ ಉಸಿರಾಟ ನಡೆಸುತ್ತ, ಸುಮಾರು 15 ಸೆಕೆಂಡುಗಳಿಂದ 60 ಸೆಕೆಂಡುಗಳ ಕಾಲ ನೆಲೆಸಬೇಕು.

6. ಬಳಿಕ ಅಂಗೈಗಳನ್ನು ಬಿಚ್ಚಿ ಎಡಗಾಲ ಹರಡನ್ನು ಎರಡೂ ಕೈಗಳಿಂದ ಹಿಡಿದು ಆ ಕಾಲನ್ನು ತಳಕ್ಕಿಳಿಸಿ  ನೆಲದ ಮೇಲೆ ನೆಟ್ಟಗೆ ಚಾಚಿಸಬೇಕು.

7. ಈ ಭಂಗಿಯನ್ನು ಇನ್ನೊಂದು ಕಡೆಯಲ್ಲಿಯೂ ಅಭ್ಯಾಸಿಸ ಬೇಕು.ಇಲ್ಲಿ, ಬಲಗಾಲನ್ನು ಕತ್ತಿನ ಹಿಂಬದಿಗೆ ಸೇರಿಸಿ,ಎಡಗಾಲನ್ನು ನೆಲದ ಮೇಲೆ ನೇರವಾಗಿ ಚಾಚಬೇಕು ಈ ಭಂಗಿಗಳಲ್ಲಿ ನೆಲೆಸುವ ಕಾಲ ಸಮನಾಗಿರಬೇಕು.

 ಪರಿಣಾಮಗಳು

     ಈ ಭಂಗಿಯ ಅಭ್ಯಾಸದಿಂದ,ಕತ್ತು ಬೆನ್ನುಗಳು ಬಲಗೊಳ್ಳುವುವು ಮಾತ್ರವಲ್ಲದೆ,ತೊಡೆ ಮತ್ತು ಜಾನು ರಜ್ಜುವಿನ ಮಾಂಸಖಂಡಗಳು ಪೂರಾ ಹಿಗ್ಗುವಂತಾಗುತ್ತವೆ. ಕಿಬ್ಬೊಟ್ಟೆಯ  ಮಾಂಸಖಂಡಗಳು ಸಂಕೋಚನಸ್ಥಿತಿಗೆ ಒಳಗಾಗಿ,ಆ ಮೂಲಕ ಜೀರ್ಣಶಕ್ತಿಯು ಉತ್ತಮಗೊಳ್ಳಲು ಅನು ಕೂಲಿಸುತ್ತದೆ.ಈ ಭಂಗಿಯನ್ನು ಅಭ್ಯಾಸಿಸಿದ ವಿನಾ ಕತ್ತಿನ ಮೇಲಿನ ಕಾಲಿನ ಭಾರದ ಮತ್ತು ಒತ್ತಡದ ಅನುಭವ ಆಗಬಾರದು.