ಮನೆ ಅಪರಾಧ ಬೆಂಗಳೂರಿನ ಎಮ್​.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ನರ್ಸ್ ​ಗಳಿಗೆ ಗಾಯ

ಬೆಂಗಳೂರಿನ ಎಮ್​.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ನರ್ಸ್ ​ಗಳಿಗೆ ಗಾಯ

0

ಬೆಂಗಳೂರು: ಬೆಂಗಳೂರಿನ ಎಮ್​.ಎಸ್​ ರಾಮಯ್ಯ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಲ್ಲಿ ಕೆಲ ನರ್ಸ್​ಗಳಿಗೆ ಸಣ್ಣಪುಟ್ಟ ಸುಟ್ಟ ಗಾಯವಾಗಿದೆ.

Join Our Whatsapp Group

ಕಾರ್ಡಿಯಾಕ್ ಐಸಿಯು ವಾರ್ಡ್​ನ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತದಲ್ಲಿ ನರ್ಸ್​ಗಳ​​ ಸಮಯಪ್ರಜ್ಞೆಯಿಂದ 8 ರೋಗಿಗಳು  ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಇಓ ಶ್ರೀನಿವಾಸ್ ಮೂರ್ತಿ, ‘ಇಂದು(ಗುರುವಾರ) ಮಧ್ಯಾಹ್ನ 1.15 ಕ್ಕೆ ಕಾರ್ಡಿಕ್ ಯುನಿಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಎಲ್ಲಾ ಸಿಬ್ಬಂದಿ ರೋಗಿಗಳನ್ನ ಶಿಫ್ಟ್ ಮಾಡಿಲಾಗಿದೆ. ಆಸ್ಪತ್ರೆಯಲ್ಲಿ ಇದ್ದ ಅಗ್ನಿಶಾಮಕ ಪರಿಕರಗಳಿಂದ‌ ಬೆಂಕಿ ನಂದಿಸುವ ಪ್ರಯತ್ನ ಆಗಿದೆ. ಹೀಗಾಗಿ ಆಸ್ಪತ್ರೆಯ ಅರ್ಧದಷ್ಟು ಭಾಗದಲ್ಲಿ ವಿದ್ಯುತ್ ಸಂಪರ್ಕ ನಿಲ್ಲಿಸಿ, ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ. ಎಲ್ಲಾ ರೀತಿಯ ಸೇಫ್ಟಿ ಮೆಜರ್ ತೆಗೆದುಕೊಳ್ಳಲಾಗಿತ್ತು. ಶಾರ್ಟ್ ಸರ್ಕ್ಯೂಟ್​ನಿಂದ ಘಟನೆ ನಡೆದಿದೆ ಎನ್ನಿಸುತ್ತಿದೆ. ಎಲ್ಲಾ ವಿಐಪಿ ಪೇಷೆಂಟ್​ಗಳಿಗೂ, ಯಾರಿಗೂ ಏನೂ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.