ಮನೆ ಜ್ಯೋತಿಷ್ಯ ಪ್ರಥಮ ಋತುಮತಿ ಮೈನೆರೆತ ಫಲ

ಪ್ರಥಮ ಋತುಮತಿ ಮೈನೆರೆತ ಫಲ

0

 ಋತುಮತಿಯಾದ ವಾರ ದಿನದ ಫಲವು

 *ಶ್ಲೋಕ :ರೋಗಿಣೀ ರವಿವಾರೇತು    | ಸೋಮವಾರೇ ಪ್ರತಿವೃತಾ||

ಕುಜವಾರೇಚ ದುಃಖಂಚಾ | ಬುಧವಾರೇ ಭಾಗ್ಯವರ್ಧನೀ||

 ಗುರುವರೇ ಪುತ್ರಸಂಪದಂ |ಶುಕ್ರವಾರೇಚ ಪತಿಭಕ್ತಿ ||

 ಶನಿವಾರವೇ ಸರ್ವವೇದಾಯ |ರಜಸ್ವ  ಫಲಕೀರ್ತಿತಾ ||

Join Our Whatsapp Group

 ಅರ್ಥ: ಸ್ತ್ರೀ ಯಳು ರವಿವಾರದಲ್ಲಿ ಪ್ರಥಮತಃ ಋತುಮತಿಯಾದರೆ ರೋಗಿಷ್ಟೇ ಯಾಗುವಳಲ್ಲದೇ ವಿಧವಾ ದೋಷವು ತಗಲುವದು.ತನ್ನ ಪತಿಗೆ ವಿಶೇಷ ಅರಿಷ್ಟೆಯೋಗವನ್ನುಂಟು  ಮಾಡುವಳಾಗುತ್ತಾಳೆ.ಸೋಮವಾರ ಋತುಮತಿಯಾದರೆ ಪತಿವೃತೆಯಾಗುವಳು  ಮಂಗಳವಾರ ಋತುಮತಿಯಾದರೆ  ದುಃಖವನ್ನು ತರುವವಳಾಗುತ್ತಾಳೆ. ಬುಧವಾರ ಋತುಮತಿಯಾದರೆ  ಭಾಗ್ಯಶಾಲಿಯಾಗುರುವಳು. ಗುರುವಾರ ಪ್ರಥಮ ಋತುಮತಿ ಯಾದರೆ ಆಕೆ ಮೊದಲು ಪುತ್ರ ಸಂತಾನ ಪಡೆಯುವಳಲ್ಲದೆ ಸಂಪದಭಿಮೃದ್ಧಿಯನ್ನೂ ಹೊಂದವಳು. ಶುಕ್ರವಾರದಲ್ಲಿ ಪ್ರಥಮ ಋತುಮತಿಯಾದವಳು ಪತಿಭಕ್ತಿ ಪರಾಯಣೆಯಾಗುತ್ತಾಳೆ. ಶನಿವಾರ ಪ್ರಥಮ ರಜಸ್ವಲೆಯಾದರೆ ಸರ್ವರಿಗೂ ಪೀಡೆಯನ್ನು ತರುವವಳು.

 ಋತುಮತಿಯಾದ ತಿಥಿಯ ಫಲವು

 ಶ್ಲೋಕ: ಪ್ರತಿಪದಂ ಧನ ಮೈಶ್ವರಿರ್ಯಂ ದ್ವಿತೀಯಂ ಅಲ್ಪಭೋಗಿನೀ

ತೃತೀಯೇ ಸರ್ವಸಂತುಷ್ಟೆ ಚೌತೀ. ಕಲಹ ಪ್ರೀಯಂ

ಪಂಚಮಿ ಶ್ರೀತ ಲಾಭಂ ಷಷ್ಟೇ ಶ್ರೇಷ್ಠ ಕುಲಾದ್ವಯಂ

ಸಪ್ತಮೇ ಸರ್ವ ಸಂತುಷ್ಟೇ ಅಷ್ಟಮಿ ಬಹುಧೂರ್ತಿನೀ

 ನವಮಿ ಬಹು ದಾರಿದ್ರೆ ದಶಮಿ ಬಹು ಸಂಪದಾ

 ಏಕಾದಶಿ ಬಹು ಸುಕೃತಿ ದ್ವಾದಶಿ ಪರದೂಷಿಣಿ

ತ್ರಯೋದಶಿ ಸರ್ವ ಸಂಪತ್ತಿ ಚತುರ್ದಶೀಚನಿರ್ಧನಂ

ಪೌರ್ಣೋತು ಸರ್ವ ಸೌಭಾಗ್ಯಂ ಅಮವಾಸೇಚ ನಿರ್ಧನಂ

 ಅರ್ಥ: ಪ್ರತಿಪದ (ಪಾಡ್ಯ 1.)  ತಿಥಿಯಲ್ಲಿ ಸ್ತ್ರೀಯಳು ಪ್ರಥಮವಾಗಿ ಪುಷ್ಪವತಿಯಾದರೆ ಧನ ಐಶ್ವರ್ಯವನ್ನು ತರುವಳು, (ಲಕ್ಷ್ಮಿ )ಸೌಭಾಗ್ಯವತಿ ಸುಶೀಲೆಯಾಗುವಳು.ದ್ವಿತೀಯೇ  (2.ಬಿದಿಗೆಯಲ್ಲಿ) ಅಲ್ಪಭೋಗಿಯಾಗುವಳು. ಭೋಗಿಯಾಗುವಳು. (ಕೆಲವು ಜೋತಿಷ್ಯರು ಬಿದಿಗೆ(  2 ) ಯಲ್ಲಿ ಪ್ರಥಮ ಋತುಮತಿ ಯಾದವಳು ಭಾಗ್ಯವತಿಯಾಗುವ ಳೆಂದೂ ಬರೆದಿದ್ದಾರೆ. ತೃತೀಯೇದಲ್ಲಿ( 3) ಸರ್ವಸಂತುಷ್ಟೆಯೂ, ಪುತ್ರರನ್ನು ಒಂದುವವಳು  ಆಗುತ್ತಾಳೆ, ಚೌತಿಯಲ್ಲಿ ವಿಧವೆಯೂ, ಗಂಡನಿಗೆ ಅರಿಷ್ಟ ತರುವವಳೂ,

 ಕಲಹಪ್ರಿಯಳೂ ಆಗುತ್ತಾಳೆ.ಪಂಚಮಿಯಲ್ಲಿ ಪ್ರಥಮ ಋತುಮತಿಯಾದವಳು ಹಣ ಸಂಪಾದನೆ ಮಾಡುವಕೆಯೂ, – ಧನ ಸಂಪದಭಿ ವೃದ್ಧಿಯನ್ನು ಹೊಂದುವಾಕೆಯೂ  ದಾನ, ಧರ್ಮ ಸತ್ಕಾರ್ಯಗಳಲ್ಲಿ ಆಸಕ್ತಿವುಳ್ಳಾಕೆಯೂ ಆಗುತ್ತಾಳೆ. ಷಷ್ಟಿಯಲ್ಲಿ ಋತುಮತಿಯಾದವಳು.ಶ್ರೇಷ್ಠ ಕುಲಪುತ್ರನನ್ನು ಹೆರುವಾಕೆಯೂ ಆಗುವಳು, ಸಪ್ತಮಿಯಲ್ಲಿ ಋತುಮತಿಯಾದಾರೆ ಸರ್ವ ಸಂತುಷ್ಟಳೂ, ಧನ,ಧಾವೃದ್ಧಿಯುಳ್ಳವಳೂ ಅಷ್ಟಮಿಯಲ್ಲಿ ಋತುಮತಿ ಯಾದಾಕೆ ಬಹುದೂರ್ತಳೂ, ನವಮಿಯಲ್ಲಿ ಋತುಮತಿಯಾದ ಕೆ   ಬಹು ದಾರಿದ್ರಳೂ, ದಶಮಿಯಲ್ಲಿ ಸಕಲ ಸೌಭಾಗ್ಯ ವುಳ್ಳವಳೂ. ಸುಪ್ರೀತ ಮನಸ್ಸುಳ್ಳವಳೂ, ಏಕಾದಶಿ ತಿಥಿಯಲ್ಲಿ ಪ್ರಥಮ ಋತುಮತಿಯದಾಕೆಯು  ಬಹು ಪುಣ್ಯಪ್ರದಳು  ಆಗುವಳು. ದ್ವಾದಶಿಯಲ್ಲಿ ಪರರಿಂದ ದೋಷಣೆ ಗೋಳಗಾಗುವಳೂ ದಾರಿದ್ರಳು ಆಗುವಳು. ತ್ರಯೋದಶಿಯಲ್ಲಿ ಸರ್ವ ಸಂಪದಭಿಮೃದ್ಧಿಯನ್ನು ಹೊಂದುವಳು.ಚತುರ್ದಶಿಯಲ್ಲಿ ಋತುಮತಿ ಯಾದವಳು  ದಾರಿದ್ರಳೂ ದುರಾಚಾರಿಯು ಆಗುತ್ತಾಳೆ.ಹುಣ್ಣಿಮೆಯ ದಿನದಲ್ಲಿ ಋತುಮತಿಯಾದವಳು ಸೌಭಾಗ್ಯವಂತಳೂ ಅಮಾವಾಸ್ಯೆ ಯ ದಿನ ಋತುಮತಿ ಆದವಳು ನಿರ್ಥನಳೂ ಜೋರಾಗ ಬುದ್ದಿಯುಳ್ಳವಳು  ಆಗುತ್ತಾಳೆಂದು ತಿಳಿಯಬೇಕು.