ಮನೆ ಅಪರಾಧ ಗೂಡ್ಸ್ ಟೆಂಪೋ- ಕಾರು ಡಿಕ್ಕಿ; 28 ಮಂದಿಗೆ ಗಾಯ

ಗೂಡ್ಸ್ ಟೆಂಪೋ- ಕಾರು ಡಿಕ್ಕಿ; 28 ಮಂದಿಗೆ ಗಾಯ

0

ಭಾರತೀನಗರ.: ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ೨೮ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಮಣಿಗೆರೆ ಗ್ರಾಮದ ಬಳಿ ಜರುಗಿದೆ.

Join Our Whatsapp Group


ಆಟೋ ಚಾಲಕ ೨೧ ವರ್ಷದ ದುಗೇಶ್, ಕಾರುಚಾಲಕ ೨೮ ವರ್ಷದ ರಾಜೇಶ್, ಕಾರಿನಲ್ಲಿದ್ದ ಅಭಿ, ಬಾಲು, ಚಂದನ್, ಮೋಹನ, ಟೆಂಫೋದಲ್ಲಿದ್ದ ವರಲಕ್ಷ್ಮೀ, ಶೆಟ್ಟಮ್ಮಣ್ಣಿ, ನಾಗರಾಜೇಅರಸ್, ಕಾಂಚನ, ಕಾಂತರಾಜೇಅರಸ್ ಅವರಿಗೆ ಗಂಭಿರವಾಗಿ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ.
ಮಡೇನಹಳ್ಳಿ ಗ್ರಾಮದ ದುರ್ಗೇಶ್ ತನ್ನ ಅಶೋಕ ಲೈಲ್ಯಾಂಡ್ ಗೂಡ್ಸ್ ಟೆಂಪೋ (ಕೆಎ೧೧, ಬಿ೨೧೮೯)ದಲ್ಲಿ ತೊರೆ ಬೊಮ್ಮನಹಳ್ಳಿ ಗ್ರಾಮದಿಂದ ಮೂಗನಕೊಪ್ಪಲು ಗ್ರಾಮಕ್ಕೆ ಸಾವಿನ ಕಾರ್ಯಕ್ಕೆ ೨೫ ಮಂದಿಯನ್ನು ಕರೆದೊಯ್ಯುತ್ತಿದ್ದು, ಟೆಂಪೋ ಮಣಿಗೆರೆ ಬಳಿ ಹೋಗುತ್ತಿದ್ದಂತೆಯೇ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಬೆಂಗಳೂರು ಬನಶಂಕರಿ ನಿವಾಸಿಗಳಿದ್ದ ಕಾರಿ(ಕೆಎ ೦೫, ಎನ್ಜಿ ೦೪೪೩)ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್ ಟೆಂಪೋ ರಸ್ತೆ ಮಧ್ಯ ಭಾಗದಲ್ಲಿ ಮೊಗುಚಿ ಬಿದಿದ್ದು, ಟೆಂಪೋದೊಳಗೆ ಕುಳಿತಿದ್ದವರಿಗೆ ಗಾಯಗಳಾಗಿದೆ. ಕಾರು ಸಹ ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ೫ ಮಂದಿಗೂ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪಿಐ ಆನಂದ್ ಹಾಗೂ ಸಿಬ್ಬಂದಿ ಗಾಯಳುಗಳನ್ನು ಆಂಬುಲೆನ್ಸ್ ಮೂಲಕ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರೇಖಾಮಣಿ, ಮಾಯಮ್ಮ, ಸವಿತ, ಅರುಣ, ಮಾಲೀನಿ, ಮಂಜುಳಾಮಣಿ, ಭಾಗ್ಯ, ಸುಶೀಲ, ಸುಗುಣ, ಯಶೋಧಮಣಿ, ಪುಟ್ಟಮಣಿ, ಶಿಲ್ಪಾವತಿ, ಸುರೇಖಾ, ಶಿಲ್ಪ, ಚಂದನ್, ಪ್ರಭುರಾಜೆ ಅರಸು, ಸವಿತ, ಪ್ರೇಮಮ್ಮ, ರತ್ನಮ್ಮ, ಲಕ್ಷö್ಮಮ್ಮ, ಬಾಲಕೃಷ್ಣ, ಮೋಹನ್, ಅಭಿಷೇಕ್ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾಲ್ಲೂಕು ತಹಸೀಲ್ದಾರ್ ಡಾ.ಸ್ಮಿತಾರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗಾಯಾಳುಗಳ ಬಗ್ಗೆ ವಿವರ ಪಡೆಯಲು ಮಂಡ್ಯ ವಿಮ್ಸ್ಗೆ ತೆರಳಿದರು.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.