ಮನೆ ರಾಜಕೀಯ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಿಂದೂ ವಿರೋಧಿ ಭಾವನೆ ಹೊಂದಿದ್ದಾರೆ: ಆರ್.ಅಶೋಕ್ ಆರೋಪ

ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಿಂದೂ ವಿರೋಧಿ ಭಾವನೆ ಹೊಂದಿದ್ದಾರೆ: ಆರ್.ಅಶೋಕ್ ಆರೋಪ

0

ಮಂಡ್ಯ: ಇಲ್ಲಿರುವ ಕೋಮುವಾದಿ ಶಕ್ತಿಗಳು ಮತ್ತೆ ಗಣೇಶೋತ್ಸವದಲ್ಲಿ ಕಲ್ಲು ತೂರಾಟ ಮಾಡಿ ಹಿಂದೂ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು ದೇಶದಲ್ಲಿ ಸುದ್ದಿಯಾಗಿದೆ. ಕೋಮುವಾದಿ ಶಕ್ತಿಗಳು, ಭಯೋತ್ಪಾದಕರು ಕೇರಳ ಬೇರೆ ಬೇರೆ ಕಡೆಯಿಂದ ಬಂದು ಗಲಭೆಗಳನ್ನು ಮಾಡುವುದು, ಅವರಿಗೆ ಕುಮ್ಮಕ್ಕು ಕೊಡುವುದು ಎದ್ದು ಕಾಣ್ತಾ ಇದೆ.ಜಿಲ್ಲೆಯ ಜನಪ್ರತಿನಿಧಿಗಳು ಹಿಂದೂ ವಿರೋಧಿ ಭಾವನೆ ಹೊಂದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

Join Our Whatsapp Group


ಸುಭಾಷ್ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇ.೯೦ ಹಿಂದೂಗಳು ಇದ್ದಾರೆ. ಮಂಡ್ಯ ಜಿಲ್ಲೆಯು ಕೂಡ ಅವರ ತೆಕ್ಕೆಗೆ ತೆಗೆದುಕೊಳ್ಳುವ ರೀತಿ ಪ್ರಯತ್ನ ನಡೀತಾ ಇದೆ.ಈಗಾಗಲೇ ಯಾರ್ಯಾರು ಭಯೋತ್ಪಾದಕರು ಸಿಕ್ಕಿದ್ದಾರೋ ಅವರು ತಮ್ಮ ಪಾಂಪ್ಲೆಟ್‌ನಲ್ಲಿ ಇನ್ನು ೩೦ ವರ್ಷದಲ್ಲಿ ಭಾರತವನ್ನು ನಾವು ಪಾಕಿಸ್ತಾನ ಮಾಡುತ್ತೇವೆ ಅಂತ ಹೇಳಿದ್ದಾರೆ. ಮಂಡ್ಯ ಜನ ಎಚ್ಚರಿಕೆಯಿಂದ ಇರಬೇಕು.ಈ ರೀತಿ ಘಟನೆ ಆದಾಗ ಹೋರಾಟ ಮಾಡಬೇಕು. ಮಂಡ್ಯ ಮಂಡ್ಯವಾಗೆ ಉಳೀಬೇಕು.೯೫% ಜನ ಹಿಂದೂಗಳು ಇರುವ ಇಲ್ಲೂ ಕೂಡ ಕೋಮು ದಳ್ಳುರಿಯನ್ನು ಹಚ್ಚುವಂತೆ ಮಾಡಲು ಕಾಂಗ್ರೆಸ್‌ನವರು ಪ್ರಯತ್ನ ಮಾಡ್ತಾ ಇದಾರೆ ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಗಣೇಶ ಹಬ್ಬದಲ್ಲಿ ಗಲಾಟೆ ಆಗಿತ್ತು.ಈ ಬಾರಿ ಗಲಾಟೆ ಆಗುತ್ತೆ ಅನ್ನುವ ಕಾಮನ್ ಸೆನ್ಸ್ ಇಲ್ಲವಾ? ಈ ಸಂಬಂಧ ಅವರು ಸರ್ಕಲ್ ಇನ್ಸ್ಪೆಕ್ಟರ್ ಡಿವೈಸ್‌ಪಿನ ಸಸ್ಪೆಂಡ್ ಮಾಡಿದ್ದಾರೆ. ಎಸ್‌ಪಿ, ಜಿಲ್ಲಾಧಿಕಾರಿಗಳನ್ನು ಮಾಡಬೇಕಾಗಿತ್ತು. ಅದು ಬಿಟ್ಟು ಕೆಳ ಅಧಿಕಾರಿಗಳನ್ನು ಮಾಡಿ ಜನರಿಗೆ ಒಂದು ರೀತಿ ಮೋಸ ಮಾಡುವಂತ ಕಾರ್ಯ ಮಾಡಿದ್ದಾರೆ ಎಂದರು.
ವಿರೋಧ ಪಕ್ಷದ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಖಂಡನೆ
ನಾನು,ಶೋಭಾ, ಅಶ್ವಥ್ ನಾರಾಯಣ್ ಸಿ.ಟಿ. ರವಿ, ವಿಜಯೇಂದ್ರ ಜನರನ್ನು ಸಾಂತ್ವನ ಮಾಡಲು ಬಂದಿದ್ದು. ನಾವು ಯಾವುದೇ ಪ್ರತಿಭಟನೆಯನ್ನು ಮಾಡಲೇ ಇಲ್ಲ.ಭಾಷಣನೂ ಮಾಡಲಿಲ್ಲ. ಏಕಾಏಕಿ ಕೇಸ್ ದಾಖಲು ಮಾಡಿದ್ದಾರೆ. ಅಂದ್ರೆ ನಾನು ವಿರೋಧ ಪಕ್ಷದ ನಾಯಕ. ಸರ್ಕಾರ ತಪ್ಪು ಮಾಡಿದರೆ ಕಿವಿ ಹಿಂಡೋ ಅಧಿಕಾರನಾ ಜನ ಮತ್ತು ಸಂವಿಧಾನ ಕೊಟ್ಟಿದೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರ ಮಾಡುವಂತ ತಪ್ಪುಗಳನ್ನು ತಪ್ಪು ಅಂತ ಹೇಳುವಂತದ್ದು. ಸರ್ಕಾರ ಎಲ್ಲೆಲ್ಲಿ ಅನ್ಯಾಯ ಆಗಿದೆ ಅದನ್ನು ತನಿಖೆ ಮಾಡಿ ಅಂತಾ ಹೇಳೋ ಅಧಿಕಾರ ಇದೆ. ಇಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದ್ರು ತನಿಖೆ ಮಾಡಿ ಅಂತ ಪ್ರಶ್ನೆ ಕೇಳಿದ್ದೇನೆ.ತನಿಖೆ ಮಾಡಿ ಅಂತ ಹೇಳಿದ್ರೂ ಅಪರಾಧವಂತೆ ಎಂದು ಟೀಕಿಸಿದರು.
ಪ್ಯಾಲೆಸ್ತೇನ್ ಧ್ವಜದ ಬಗ್ಗೆ ಸಚಿವರ ಹೇಳಿಕೆಯನ್ನು ಪ್ರಶ್ನಿಸಿದ ಅಶೋಕ್ ಪ್ಯಾಲೆಸ್ತೇನ್ ಬಾವುಟ ಹಿಡಿಯಲು ಇಲ್ಲಿ ಸಾರ್ಕ್ ಸಮ್ಮೇಳನ ನಡೀತಾ ಇಲ್ಲ. ಅವರ ದೇಶದಲ್ಲಿ ಹಿಡಿಯಲಿ. ಇಲ್ಲಿ ಕಾಂಗ್ರೆಸ್ ಸರ್ಕಾರ ಕೋಮು ಬೀಜ ಬಿತ್ತಲು ಬಹುಸಂಖ್ಯಾತ ಹಿಂದುಗಳ ಮೇಲೆ ಒಂದು ದಬ್ಬಾಳಿಕೆಯನ್ನು ಮಾಡಿದ್ದಾರೆ. ನನಗೆ ನೋಟಿಸ್ ಕೊಟ್ಟು ಒಬ್ಬ ವಿರೋಧ ಪಕ್ಷದ ನಾಯಕನನ್ನು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ವಿರೋಧ ಪಕ್ಷ ಅಂದರೆ ಇವರು ಹೇಳಿದ ಹಾಗೆ ಕೇಳಬೇಕಾ. ಅವರು ಭಜನೆ ಮಾಡಿ, ತಾಳ ಹಾಕಿ ಅಂದ್ರೆ ಹಾಕ್ಬೇಕಾ ಎಂದು ಕಿಡಿ ಕಾರಿದರು.
ಮಾಡಿದ್ದುಣ್ಣೋ ಮಹರಾಯ ಎಂಬಂತಾಗುತ್ತದೆ
ನೀವು ಮಾಡ್ತಾ ಇರೋ ಭ್ರಷ್ಟಾಚಾರದ ಕರ್ಮಕಾಂಡಗಳನ್ನು ನೋಡ್ತಾ ಇದೀವಿ.ಭ್ರಷ್ಟಾಚಾರದ ಕೂಪ ಆಗಿದೆ. ಲಂಚ ಇಲ್ಲದೆ ಸರ್ಕಾರದಲ್ಲಿ ಏನು ಕೆಲಸ ಆಗೋದೆ ಇಲ್ಲ. ಈಗಾಗ್ಲೇ ಹಲವು ತನಿಖೆ ನಡೀತಾಇದೆ ಪಿಎಸ್‌ಐ, ಕೃಷಿ ಇಲಾಖೆ ಅಧಿಕಾರಿ ವಿಡಿಯೋ ಮಾಡಿ ಲಂಚ ಕೇಳ್ತಾ ಇದಾರೆ ಅಂತ ಹೇಳಿದ್ದಾರೆ ಅದರ ಬಗ್ಗೆ ಮಾತಾಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಒಂದು ರೀತಿ ಬಿಜೆಪಿಯನ್ನು ತುಳಿಯುವಂತ ಷಡ್ಯಂತ್ರ ಮಾಡ್ತಾ ಇದಾರೆ. ಸರ್ಕಾರ ಇರೋದೇ ಗ್ಯಾರಂಟಿ ಇಲ.ಅವರ ಪಾಪದ ಕೂಸಿಂದ ಅವರೇ ಹೋಗ್ತಾರೆ. ಬಹಳ ದಿನಾ ಇರಲ್ಲ. ಮುಂದಿನ ದಿನಗಳಲ್ಲಿ ಮಾಡಿದ್ದುಣ್ಣೋ ಮಾರಾಯ ಅನ್ನೋ ರೀತಿ ಆಗುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಿ. ಈಗ ಎಚ್ಚರಿಕೆ ಕೊಡ್ತಾ ಇದೇನೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಡೀ ರಾಜ್ಯದಲ್ಲಿ ಎಲ್ಲಾ ಕಡೆ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್,ಕುಕ್ಕರ್ ಬಾಂಬ್, ಒಂದು ಹನುಮಧ್ವಜ, ಗಣೇಶನ ಗಲಾಟೆ ಮುಂತಾದುವು ಹೆಚ್ಚಾಗಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅನ್ನೋದೇ ಇಲ್ಲ. ಮುಸ್ಲಿಂ ಕೋಮುವಾದಿಗಳು ಕಾಂಗ್ರೆಸ್ ನಮ್ಮ ಮುಸ್ಲಿಮರ ಸರ್ಕಾರ ಅಂತ ಹೇಳ್ತಾರೆ.ಅವರಂತೆಯೇ ನೀವು ಹೇಳ್ತೀರಿ. ನಿಮ್ಮಂತವರಿಗೆ ಜನ ಸರಿಯಾಗಿ ಪಾಠ ಕಲಿಸ್ತಾರೆ ಎಂದು ಎಚ್ಚರಿಸಿದರು.
ಹಿಂದೂ ಭಾವನೆಗೆ ಧಕ್ಕೆ: ತಿರುಪತಿ ಲಡ್ಡಿಗೆ ಪ್ರಾಣಿ ಕೊಬ್ಬು ಸೇರಿಸಿದ್ದಾರೆ ಎನ್ನುವ ಆರೋಪವಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹಿಂದೂಗಳ ಭಾವನೆಗೆ, ಭಕ್ತಿ ಕೇಂದ್ರದ ಬಗ್ಗೆ ಧಕ್ಕೆ ಉಂಟಾಗುವ ಕೆಲಸ ಮಾಡಿದರೆ ಕ್ಷಮಿಸಲು ಸಾಧ್ಯವಿಲ್ಲ.ವರದಿ ಬಂದ ನಂತರ ತಪ್ಪು ಯಾರೇ ಮಾಡಿದ್ದರೂ ಕ್ರಮ ಜರುಗಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್,ಮುಖಂಡರಾದ ಇಂಡುವಾಳು ಸಚ್ಚಿದಾನಂದ, ನಾಗಾನಂದ,ಅಶೋಕಕುಮಾರ್, ಟಿ.ಶ್ರೀಧರ್,ಶಿವಕುಮಾರ್ ಆರಾಧ್ಯ ಇದ್ದರು.