ಅಶ್ವಿನಿ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :
ಅಶ್ವಿನಿ ನಕ್ಷತ್ರಕ್ಕೆ ಸಮಸೂತ್ರ ಸ್ಥಾನದಲ್ಲಿ ಚಂದ್ರನಿರುವಾಗ ಆನೆ, ಕುದುರೆ, ಹಸು, ಎತ್ತು ಬಂಡಿ, ರಥ,ಪಾಲಾಕಿ,ಡೋಲಿ ಇವುಗಳನ್ನು ಮನೆಗೆ ತರಬಹುದು. ಪ್ರಯಾಣ, ಗ್ರಾಮಪ್ರದೇಶ, ಗೃಹಪ್ರವೇಶ,ರೋಗಕ್ಕೆ ಚಿಕಿತ್ಸೆ ಔಷಧ ಸೇವನೆ, ಮಂತ್ರೋಪದೇಶ ಜಂಪಾರಂಭ, ವ್ರತಾಪ್ರಾರಂಭ ದಿಕ್ಷೆ ಪಡೆಯುವುದು ಗೃಹ ನಿರ್ಮಾಣಾ ರಂಭ, ಮಹಡಿನಿರ್ಮಾಣಾರಂಭ,ಬಾವಿ ತೋಡಿಸುವುದು,ಕೆರೆಯ ನಿರ್ಮಾಣಾರಂಭ, ದೂರ ಪ್ರಯಾಣ, ಯುದ್ದಕ್ಕೆ ತೆರಳುವುದು, ಪಟ್ಟಾಭಿಷೇಕ, ಯಜ್ಞಸಂಕಲ್ಪ ಚೌಲ ಕೇಶಖಂಡನ, ಮುಂಜಿ,ವಾಸ್ತುಶಾಂತಿ, ಸ್ತ್ರಿಯೊಡನೆ ರಮಣ, ನಾಮಕರಣ, ಅನ್ನಪ್ರಶಣ, ಅಕ್ಷರಾಭ್ಯಾಸ, ವಿದ್ಯಾರಂಭ ಅಭ್ಯಂಜನ, ನೂತನ ವಸ್ತ್ರಾಭರಣ ಧಾರಣ ಚಿತ್ರದ ರಚನೆಗೆ ಬಿರುದು ವಹಿಸುವುದು, ಭೂಮಿಯನ್ನು ಗೆಲ್ಲುವುದು, ಧಾನ್ಯ ಬಿತ್ತುವುದು ತೆಂಗಿನ ಸಸಿ ನೆಡುವುದು ಕ್ಷೌರ ಇತ್ಯಾದಿ ಕಾರ್ಯಗಳನ್ನು ಮಾಡುವುದು.
ಅಶ್ವಿನಿ ನಕ್ಷತ್ರದಲ್ಲಿ 42 -46 ಗಳಿಗೆಗಳ ಒಳಗೆ ಆರಂಭಿಸಿದ ಅಥವಾ ನೆರವೇರಿಸಿದ ಕಾರ್ಯಗಳಲ್ಲಿ ಶುಭವಾಗುವುದು ಮತ್ತು 50 – 54 ರ ಗಳಿಗೆಯಲ್ಲಿ ಆರಂಭಿಸಿದ ಅಥವಾ ನೆರವೇರಿಸಿದ ಕಾರ್ಯಗಳಲ್ಲಿ ಅಶುಭವಾಗುವುದು. ಪ್ರಯಾಣ ಹೊರಡುವುದಕ್ಕೆ ಮುಂಚೆ ಉದ್ದಿನ ಕಾಳಿನ ಪದಾರ್ಥವನ್ನು ಸೇವಿಸಿದರೆ ಶುಭ ಫಲವಾಗುವುದು.
ಅಶ್ವಿನಿ ನಕ್ಷತ್ರದಲ್ಲಿ ಪುತ್ರ ಸಂತಾನವಾದರೆ ಒಂಬತ್ತು ದಿನಗಳ ಅನಿಷ್ಟಕಳೆಯಬೇಕು, ಹೆಣ್ಣು ಸಂತಾನವಾದರೆ ದೋಷವಿರದು.ರೋಗ ಉಂಟಾದರೆ ಒಂಬತ್ತು ದಿನಗಳ ನಂತರ ವಾಸಿಯಾಗುತ್ತದೆ. ರೋಗ ಶಾಂತಿಗಾಗಿ ಅಚಾರ್ಯರ ಸಲಹೆ ಪಡೆದು,ಶಾಸ್ತ್ರದಂತೆ ಅವರಿಂದ ಶಾಂತಿ ಮಾಡಿಸುವುದು ಅವಶ್ಯಕ.
ಈ ನಕ್ಷತ್ರದಲ್ಲಿ ವಿದ್ಯಾರಂಭ ಮಾಡಿದರೆ ಬುದ್ಧಿಯ ವೃದ್ಧಿಯಾಗುತ್ತದೆ ವ್ಯಾಯಾಮದ ಸಾಧನೆ ಮಾಡಿದರೆ ದೇಹ ಸದೃಢವಾಗುತ್ತದೆ ಸಂಗೀತಾಭ್ಯಾಸ ಪ್ರಾರಂಭಿಸಿದರೆ ಸ್ವರ ಕೆಡುತ್ತದೆ.ಗರ್ಭ ನಿಂತರೆ ಚೊಚ್ಚಲ ಬಸಿರು ಫಲಿಸುವುದಿಲ್ಲ ನಿಕ್ಷೇಪವನ್ನು ಕಿತ್ತರೆ ರೋಗ ಪ್ರಾಪ್ತಿಯಾಗುತ್ತದೆ ನಿಧಿ ನೀಡುವ ಅಂಜನದ ಮೂಲಿಕೆ ತೊಂದರೆ ಸಿದ್ಧಿಸುತ್ತದೆ.ಮಂತ್ರಜಪದಿಂದ ವಿಘ್ನವಿರದು.ಕಳ್ಳನು ಕೈಗೆ ಸಿಗುತ್ತಾನೆ.ಒಡವೆ, ಕಳೆದಾಗ ನಷ್ಟ ಪ್ರಶ್ನೆ ಮಾಡಿದರೆ ಮೂರು ದಿನಗಳಲ್ಲಿ ಪುನಃ ಪ್ರಾಪ್ತಿಯಾಗುತ್ತದೆ.ಮನೆ ನಿರ್ಮಾಣ ಪ್ರಾರಂಭಿಸಿದರೆ ಅದು ಶೀಘ್ರದಲ್ಲಿ ಪೂರ್ಣವಾಗುತ್ತದೆ. ರೋಗ ಉಪದ್ರವಗಳು ಪೀಡಿಸುವುದಿಲ್ಲ.ಆದರೆ ಮರಳಿ ಕೀಳಿಸಿಕೊಳ್ಳುತ್ತದೆ.ಶಿಲ್ಪಕ್ಕೆ ಅಪಾಯವಿರುವುದಿಲ್ಲ. ಬಾವಿ ತೋಡಿಸಿದರೆ ಅಲ್ಪಕಾಲದ ನಂತರ ನೀರಿನ ಸೆಲೆ ಒಡೆದು ಬರುತ್ತದೆ.ರಸವಾದ ಮಾಡತೊಡಗಿದರೆ ವಾದಭ್ರಷ್ಟೋ ವೈದ್ಯಶ್ರೇಷ್ಠಃ ಎಂಬ ಮಾತು ಅನ್ವಯವಾಗುತ್ತದೆ. ಗರ್ಭಿಣಿಯರಿಗೆ ಪ್ರಸವ ವೇದನೆ ಕಾಣಿಸಿಕೊಂಡರೆ,ಶೀಘ್ರವಾಗಿ ಸುಖ ಪ್ರಸವವಾಗುತ್ತದೆ.