ಮನೆ ಯೋಗಾಸನ ಭೈರವಾಸನ

ಭೈರವಾಸನ

0

 ‘ಭೈರವ’ವೆಂದರೆ ಭಯಂಕರ. ಶಿವನ ಎಂಟು ಬಗೆಯ ಮೂರ್ತಿಗಳಲ್ಲಿ ಭೈರವೆಂಬುದು ಒಂದು.

Join Our Whatsapp Group

 ಅಭ್ಯಾಸ ಕ್ರಮ

1. ‘ಕಪಿಲಾಸನ’ದಲ್ಲಿಯ ಕೈ ಬಿಗಿತವನ್ನು ಸಡಿಲಿಸಿದ ಮೇಲೆ, ಉಸಿರನ್ನು ಹೊರ ಬಿಟ್ಟು ಬೆನ್ನಿನ ಮೇಲೆ ಹಿಂದಕ್ಕೆ ಒರಗಬೇಕು.

2. ಕೈಗಳರಡನ್ನೂ ಹೃದಯದ ಬಳಿ ಜೋಡಿಸಿಟ್ಟು ಬಲಗಾಲನ್ನು ನೆಲದಮೇಲೆ ಉದ್ದಕ್ಕೂ ಚಾಚಿಸಬೇಕು.

3. ಈ ಭಂಗೀಯಲ್ಲಿ ಆಳವಾದ ಉಸಿರಾಟದಿಂದ ಸುಮಾರಿ 20 ಸೆಕೆಂಡುಗಳ ಕಾಲ ನೆಲೆಸಬೇಕು.

 ಕಾಳಭೈರವಾಸನ:-

 ‘ಕಾಳಭೈರವ’ ಎಂಬ ಹೆಸರು ಪ್ರಳಯಕಾಲದಲ್ಲಿ ಪ್ರಪಂಚದ ಲಯಕ್ಕೆ ಕಾರಣಭೂತನಾದ ಮತ್ತು ಭಯಂಕರನಾದ ಶಿವನ ಸ್ವರೂಪಕ್ಕೆ ಅಳವಡಿಸಿದೆ.

 ಅಭ್ಯಾಸ ಕ್ರಮ

1. ಮೊದಲು,ಭೈರವಸನವನ್ನು ಅಭ್ಯಾಸಿಸಿ,ಬಳಿಕ, ಎದೆಯ ಮೇಲೆ ಜೋಡಿಸಿದ ಕೈಗಳನ್ನು ಬಿಡಿಸಿ, ಅಂಗೈಗಳನ್ನು ನೆಲದ ಮೇಲೆ ಊರಿಟ್ಟು ‘ಏಕಪಾದ ಶ್ರೀರ್ಷಾಸನ’ಕ್ಕೆ ಮತ್ತೆ ಹಿಂದುಳಿದಬೇಕು. ಆಮೇಲೆ ಅಂಗೈಗಳನ್ನು ಟೊಂಕಗಳ ಪಕ್ಕದಲ್ಲಿಡಬೇಕು.

2. ಅನಂತರ, ಬಲಗಾಲನ್ನು ಬಲಗಡೆಗೆ ಸರಿಸಿಡಬೇಕು.

3. ಆಮೇಲೆ ಉಸಿರನ್ನು ಹೊರ ಹೋಗಿಸಿ,ದೇಹವನ್ನು ನೆಲೆದಿಂದ ಮೇಲೆತ್ತಿ ಆ ಬಳಿಕ ಎರಡು ಸಲ ಉಸಿರಾಟ ನಡೆಸಬೇಕು.

4. ತರುವಾಯ,ಮತ್ತೆ ಉಸಿರನ್ನು ಹೊರ ಬಿಟ್ಟು ಬಲತೋಳನ್ನು ನೆಲದಿಂದ ಮೇಲೆತ್ತಿ ಮುಂದವನ್ನು ಬಲಗಡೆಗೆ ತಿರುಗಿಸಿ, ಬಲ ತೋಳನ್ನು ಬಲತೊಡೆಯ ಉದ್ದಕ್ಕೂ ಒರಗಿಸಿರಬೇಕು.

5. ಈಗ ಬಲತೋಳನ್ನು ಮೇಲೆ ಚಾಚಿ ನೇರವಾಗಿ ನಿಲ್ಲಿಸಬೇಕು.

6. ಈ ಭಂಗಿಯಲ್ಲಿ ದೇಹವೆಲ್ಲವನ್ನೂ ಎಡದಂಗೈ ಮೇಲೆಯೂ ಮತ್ತು ಬಲ ಪಾದದ ಹೊರಬದಿಯ ಮೇಲೆಯೂ,ಸಮತೋಲನ ಮಾಡಿ ಒಂದು ಪಕ್ಕಕ್ಕೆ ನಿಲ್ಲಿಸಬೇಕು.ಆಗ ಬಲಗಾಲು ನೆಲಕ್ಕೆ ಸುಮಾರು 30 ಡಿಗ್ರಿ ಗಳಷ್ಟು ಓರೆ ಮಾಡಿ ನಿಂತಿರುತ್ತದೆ.

7. ಈ ಭಂಗಿಯಲ್ಲಿ, ಆಳವಾದ ಉಸಿರಾಟದಿಂದ ಸುಮಾರಿ 20 ಸೆಕೆಂಡುಗಳ ಕಾಲ ನೆಲೆಸಬೇಕು.