ಮನೆ ಮಾನಸಿಕ ಆರೋಗ್ಯ ಮಕ್ಕಳಲ್ಲಿ ಆತಂಕ

ಮಕ್ಕಳಲ್ಲಿ ಆತಂಕ

0

     ಅಸಹಾಯಕರೂ, ಆಶಕ್ತರೂ ಆದ ಮಕ್ಕಳು ನಾನಾ ಕಾರಣಗಳಿಂದ ಆತಂಕಕ್ಕೆ ಒಳಗಾಗುತ್ತಾರೆ.ಒಂದು ತಿಂಗಳ ಕೂಸಿನಲ್ಲೂ ಆತಂಕವನ್ನು ಕಾಣಬಹುದೆಂದರೆ ನಿಮಗೆ ಆಶ್ಚರ್ಯವಾಗಬಹುದು.ಯಾವುದೇ ಕಷ್ಟಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಕೂಸುಗಳನ್ನು ಆತಂಕದಿಂದ ಜಗ್ಗಿ ಬಿಡುತ್ತವೆ.ಮುಂಕಾಗುತ್ತವೆ.ಅಥವಾ ಒದ್ದಾಡುತ್ತವೆ. ನಿದ್ರೆ ಮಾಡುವುದಿಲ್ಲ.ಹಾಲು ಕುಡಿಯುವುದಿಲ್ಲ ತಾಯಿಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ಭಯವೇ ಕಂದನ ಆತಂಕಕ್ಕೆ ಮೂಲ.ಕೆಲವು ಸಾರಿ ವಿಪರೀತ ಆತಂಕಪಡುವ ತಾಯಿ ತನ್ನ ಆತಂಕವನ್ನು ಮಗುವಿಗೂ ವರ್ಗಾಯಿಸುತ್ತಾಳೆ.

Join Our Whatsapp Group

      ತಾಯಿಯ ಅಗಲಿಕೆಯಿಂದ, ಹೊಸವರನ್ನು ನೋಡಿ ಕತ್ತಲಲ್ಲಿ, ಆಘಾತವಾದಾಗ ಹೇಗೆ ವಿವಿಧ ಸನ್ನಿವೇಶಗಳಲ್ಲಿ ಆತಂಕವನ್ನು ಮಕ್ಕಳಲ್ಲಿ ಕಾಣಬಹುದು. ಅಧಿಕ ಹೃದಯ ಬಡಿತ,ಉಸಿರಾಡಲು ಕಷ್ಟ,ಅಲರ್ಜಿ,, ಭೇದಿ, ವಾಂತಿ ತಲೆ ಸುತ್ತು. ದುಃಸ್ವಪ್ನ ಭಯಂಕರ ಸ್ವಪ್ನ ಇತ್ಯಾದಿ ತೊಂದರೆಗಳನ್ನು ಕಾಣಿಸಿಕೊಳ್ಳುತ್ತವೆ.

     ದುಃಸ್ವಪ್ನ ಭಯಂಕರ ಸ್ವಪ್ನಗಳು ಮಕ್ಕಳಲ್ಲಿ ಆತಂಕದ ಪ್ರತೀಕ ದುಃ ಸ್ವಪ್ನದಲ್ಲಿ ಬೆಳಿಗ್ಗೆ ಎದ್ದಾಗ ಜ್ಞಾಪಕದಲ್ಲಿರುವ, ಹೆದರಿಕೆ ಹುಟ್ಟಿಸುವ ಕನಸುಗಳು ಬಿಡುತ್ತವೆ.ಭಯಂಕರ ಸ್ವಪ್ನದಲ್ಲಿ,ಆಳವಾದ ನಿದ್ದೆಯಿಂದ ಮಗು ಚೀರಿಕೊಂಡು ಏಳುತ್ತದೆ.  ಅರೆ ಎಚ್ಚರಿಕೆಯಲ್ಲಿದ್ದು ವಿಪರೀತ ಭಯ ಪಟ್ಟಂತೆ ಕಾಣುತ್ತದೆ.ಸ್ವಲ್ಪ ಹೀಗಿದ್ದು ನಂತರ ಮಲಗುತ್ತದೆ.ಬೆಳಿಗ್ಗೆ ಎದ್ದ ಮೇಲೆ ಅದಕ್ಕೆ ಯಾವ ನೆನಪು ಉಳಿದಿರುವುದಿಲ್ಲ ಈ ಮಕ್ಕಳಿಗೆ ಮನೋವೈದ್ಯರ ನೆರವು ಅಗತ್ಯ.

    . ಬೆರಳು ಚೀಪುವುದು, ಉಗುರು ಕಡಿಯುವುದು, ತೊದಲು, ಬಿಕ್ಕಲು ಮುಂತಾದ ಮಾತಿನ ತೊಂದರೆಗಳು, ಹಸ್ತ ಮೈಥುನ ಇವೆಲ್ಲಾ ಕೂಡ ಆತಂಕದ ಪ್ರತೀಕಗಳೇ.

       ಅನಾಥಾಶ್ರಮಗಳಲ್ಲಿ ಬೋರ್ಡಿಂಗ್ ಶಾಲೆಗಳಲ್ಲಿ ಪ್ರೀತಿಸಿದ ಪಾಲಕರ ಆಶ್ರಯದಲ್ಲಿ ಬೆಳೆಯಬೇಕಾದ ಮಕ್ಕಳಲ್ಲಿ ಹಾಗೂ ವಿವಿಧ ರೀತಿಯ ಹಿಂಸೆ ದೌರ್ಜನ್ಯಕ್ಕೆ ಒಳಗಾಗದವರಲ್ಲಿ ಆತಂಕ ಹೆಚ್ಚು .

 ಹದಿ ವಯಸ್ಸಿನವರಲ್ಲಿ ಆತಂಕ :-

        ಆತಂಕ ಹದಿ ವಯಸ್ಸಿನ ಒಂದು ಅವಿಭಾಜ್ಯ ಅಂಗ ಈ ಅವಧಿಯಲ್ಲಿ ಮಗುವಾಗಿದ್ದ ವ್ಯಕ್ತಿ ಬೆಳೆದು ಪ್ರೌಢನಾಗುತ್ತಾನೆ. ಅನೇಕ ನಾವ್ ಶಾರೀರಿಕ ಬದಲಾವಣೆಗಳು ನಡೆದುಹೋಗುತ್ತವೆ. ಅದುವರೆಗೆ ಚಡ್ಡಿ ಹಾಕುವ ಸಣ್ಣ ಹುಡುಗ, ಅವಧಿಯಲ್ಲಿ ದಿಡೀರನೆ ಬೆಳೆದು ಉದ್ದನೆಯ ಯುವಕನಾಗುತ್ತಾನೆ.ಗಡ್ಡ ಮೀಸೆ, ಕಂಕುಳ, ಜನಾಂಗದಲ್ಲಿ ಮೇಲೆ ಕೂದಲುಗಳು, ಗಂಡುದ್ವನಿ ಮೂಡುತ್ತವೆ. ವೀರ್ಯಸ್ಖಲನವಾಗ ತೊಡಗಿ, ಹಸ್ತ ಮೈಥುನ ಮಾಡಿಕೊಳ್ಳುತ್ತಾನೆ. ಹುಡುಗಿಯರಲ್ಲಿ ಸ್ತನಗಳು, ಶರೀರದ ಅಂಕುಡೊಂಕುಗಳು. ಕಂಕುಳ ಹಾಗೂ ಜನಾಂಗದ ಮೇಲೆ ಕೂದಲುಗಳು ಮೂಡಿ,ಋತುಸ್ರಾವ ಮೂಡುತ್ತದೆ. ಈ ಶಾರೀರಿಕ ಬದಲಾವಣೆಗಳ ಜೊತೆಗೆ ಇಬ್ಬರೂ ಪರಸ್ಪರ ಆಸಕ್ತಿ ಹಾಗೂ ಲೈಂಗಿಕ ವಿಚಾರಗಳ ಬಗ್ಗೆ ಕುತೂಹಲ ಮೊಳೆಯುತ್ತದೆ. ಆದರೆ ನಮ್ಮ ಸಮಾಜದಲ್ಲಿ ಯಾರಿಗೂ ಲೈಂಗಿಕ ಶಿಕ್ಷಣ ದೊರೆಯುವುದಿಲ್ಲ.ಲೈಂಗಿಕ ಆಸಕ್ತಿಯ ಪ್ರಕಟಣೆ ಮತ್ತು ಚಟುವಟಿಕೆಗಳ ಬಗ್ಗೆ ಅನೇಕ ಧಾರ್ಮಿಕ ಹಾಗೂ ಅನೈತಿಕ ನಿರ್ಬಂಧನೆಗಳಿವೆ

 ಹಸ್ತಮೈಥುನ,ವೀರ್ಯಸ್ಖಲನಗಳ ಬಗ್ಗೆ ಅನೇಕ ವೈಜ್ಞಾನಿಕ ತಪ್ಪು ನಂಬಿಕೆಗಳು ಪ್ರಚಲಿತವಿದೆ. ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುವುದು ಕೆಟ್ಟ ನೆಡವಳಿಕೆ ಎನಿಸಿಕೊಂಡು, ಅಕ್ಷೇಪಾರ್ಹವಾಗಿದೆ. ಹದಿವಯಸ್ಸಿನವರು ವಯಸ್ಸಿಗೆ ಸಹಜವಾದ ಆಸೆ ಮತ್ತು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಕ್ಕಿ, ಜರ್ಝರಿತ ರಾಗುತ್ತಾರೆ.ತಮ್ಮ ಆಸೆಯ ಕೈ ಮೇಲಾಗುವುದನ್ನು. ಕಂಡಾಗ ಆತಂಕ ಕೀಡಾಗುತ್ತಾರೆ.

      ಹದಿ ವಯಸ್ಸಿನ ಅವಧಿಯಲ್ಲಿ ವ್ಯಕ್ತಿ ತನ್ನ ಜೀವನದ ಗತಿಯನ್ನು ಬದಲಾಯಿಸುವಂತಹ ಪ್ರಮುಖ ಪರೀಕ್ಷೆಗಳನ್ನು ಉದಾ ಎಸ್‍.ಎಸ್‍.ಎಲ್‍.ಸಿ  ಪಿ.ಯು.ಸಿ, ಸಿ.ಇ.ಟಿ ಎದುರಿಸಬೇಕು.ಹಲವರು ಈ ವಯಸ್ಸಿನಲ್ಲಿ ಒಂದು ಸೂಕ್ತ ಕೆಲಸವನ್ನು ಆಯ್ಕೆ ಮಾಡಿ, ಜೀವನೋಪಾಯಕ್ಕೆ ಸಿದ್ಧರಾಗ ಬೇಕಾಗುತ್ತದೆ. ಈ ವಿಚಾರಗಳು ಸಾಕಷ್ಟು ಆತಂಕವನ್ನು ಉಂಟು ಮಾಡಬಲ್ಲವು.

     ಹದಿವಯಸ್ಸಿನಲ್ಲಿ ಅವಧಿಯಲ್ಲಿ ವ್ಯಕ್ತಿಗೆ ತ್ರಿಶಂಕು ಸ್ಥಿತಿ ದೊಡ್ಡವರು ಆತನನ್ನು ಮುಗ್ಧ ಮಗುವೆಂದು ಪರಿಗಣಿಸುವುದಿಲ್ಲ ಅಥವಾ ಜವಾಬ್ದಾರಿಯುತ ಯುವಕನೆಂದು ಒಪ್ಪಿಕೊಳ್ಳುವುದಿಲ್ಲ.ಆದ್ದರಿಂದ ಪ್ರತಿ ಸನ್ನಿವೇಶದಲ್ಲಿ ತನ್ನ ಪಾತ್ರವೇನು ಎಂದು ತಿಳಿಯದೆ, ಹದಿವಯಸ್ಸಿನ ಹುಡುಗ ಹುಡುಗಿ ಆತಂಕ ಕ್ಕೀಡಾಗುವುದು ಸಹಜ.