ಮನೆ ರಾಜಕೀಯ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಶೀಘ್ರ ತೀರ್ಮಾನ: ಕೆ.ಎಸ್.ಈಶ್ವರಪ್ಪ

ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಶೀಘ್ರ ತೀರ್ಮಾನ: ಕೆ.ಎಸ್.ಈಶ್ವರಪ್ಪ

0

ಶಿವಮೊಗ್ಗ: ಕಳೆದ ವಾರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಕೊಟ್ಟು ಹುಬ್ಬಳ್ಳಿಯಲ್ಲಿ ನನಗೆ ಸನ್ಮಾನ ಮಾಡಿದ್ದರು. ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ನನ್ನ ಬಗ್ಗೆ ಮಾತಾನಾಡಿದ್ದರು. ಈಶ್ವರಪ್ಪಗೆ ಅನ್ಯಾಯ ಆಗಿದೆ ಎಂದು ಹೇಳಿದ್ದರು. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಸಿಎಂ ಮಾಡುತ್ತೇವೆಂದು ಅವರು ಹೇಳಿದ್ದಾರೆ. ನನ್ನ ಬಗ್ಗೆ ಇರುವ ಪ್ರೀತಿ ತೋರಿಸಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

Join Our Whatsapp Group

ಯತ್ನಾಳ್ ಹಾಗೂ ಈಶ್ವರಪ್ಪ ರಾಯಣ್ಣ ಮತ್ತು ಚೆನ್ನಮ್ಮ ರಕ್ತ ಹಂಚಿಕೊಂಡು ಹುಟ್ಟಿದ್ದಾರೆಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮಾಡಿ ಎಂದು ಇಬ್ಬರಿಗೂ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಅಕ್ಟೋಬರ್ 20 ರಂದು ವಿಶೇಷ ಸಭೆ ಕರೆದಿದ್ದೇವೆ. ಸಭೆಯಲ್ಲಿ ಎಲ್ಲಾ ಸೇರಿ ತೀರ್ಮಾನ ಮಾಡುತ್ತೇನೆ. ಹೆಸರು ಇಡುವ ವಿಚಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಮನೆಗೆ ಈಶ್ವರಪ್ಪ ಭೇಟಿಯಾದ ಬಳಿಕ ಮಾತನಾಡಿದ ಅವರು, ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡುತ್ತೇವೆಂದು ಸಿಎಂ ಹೇಳಿದ್ದರು. ಕೊಡಲೇಬೇಕು ಎಂದು ಒತ್ತಡ ನಾವು ಹಾಕಿದ್ದೆವು. ಇದೀಗ 25 ಲಕ್ಷದ ಚೆಕ್ ತೆಗೆದುಕೊಳ್ಳಲು ನಿಗಮದ ಎಂಡಿ ಮಂಗಳವಾರ ಬೆಂಗಳೂರಿಗೆ ಬರಲು ಹೇಳಿದ್ದಾರೆ. ಅಂಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳಿಂದ 8 ಲಕ್ಷ 25 ಸಾವಿರ ಕವಿತಾ ಅವರ ಅಕೌಂಟ್ ಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಕೆಲಸ ಕೊಡುವ ವಿಚಾರದ ಬಗ್ಗೆ ಎಂಡಿ ಅವರಿಗೆ ನಾನು ಕರೆ ಮಾಡಿದ್ದೆ. ಚಂದ್ರಶೇಖರ್ ಮಗನಿಗೆ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಬರುವಂತಹ ಪೆನ್ಶನ್ ಕೊಡುವ ವಿಚಾರಕ್ಕೆ ಜಿಲ್ಲಾಧಿಕಾರಿಗಳು ಕವಿತಾರನ್ನು ಬರಲು ಹೇಳಿದ್ದಾರೆ. ನಮ್ಮ ಕಾರ್ಯಕರ್ತರ ಪಯತ್ನ ದಿಂದ ಪರಿಹಾರ ಸಿಕ್ಕಿದೆ. ಇದು ತುಂಬಾ ಸಂತೋಷದ ವಿಚಾರ ಎಂದು ಈಶ್ವರಪ್ಪ ಹೇಳಿದರು.

ಮುನಿರತ್ನ ಬಂಧನದ ವಿಚಾರಕ್ಕೆ ಕೇಳಿದಾಗ, ಅಸಹ್ಯದ ಬಗ್ಗೆ ನನ್ನ ಬಳಿ ಕೇಳಬೇಡಿ. ದರಿದ್ರ, ನನಗೆ ಆ ಬಗ್ಗೆ ಕೇಳಬೇಡಿ ಎಂದು ಈಶ್ವರಪ್ಪ ಹೇಳಿದರು.