ಮನೆ ರಾಷ್ಟ್ರೀಯ ಭರತ ಹೊತ್ತ ಅದೇ ಹೊರೆಯನ್ನು ಇಂದು ನಾನು ಹೊತ್ತಿದ್ದೇನೆ: ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿದ...

ಭರತ ಹೊತ್ತ ಅದೇ ಹೊರೆಯನ್ನು ಇಂದು ನಾನು ಹೊತ್ತಿದ್ದೇನೆ: ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿದ ದೆಹಲಿ ಸಿಎಂ ಆತಿಶಿ

0

ಹೊಸದಿಲ್ಲಿ: ಎಎಪಿ ನಾಯಕಿ ಅತಿಶಿ ಸೋಮವಾರ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸಿಎಂ ಕಚೇರಿಯಲ್ಲಿ ಅವರ ಕುರ್ಚಿಯ ಪಕ್ಕದಲ್ಲಿ ಖಾಲಿ ಕುರ್ಚಿ ಇರಿಸಿ ನಿಕಟಪೂರ್ವ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರಿಗೆ ನಿಷ್ಠೆ ತೋರಿಸಿದ್ದಾರೆ.

Join Our Whatsapp Group

43 ವರ್ಷದ, ದೆಹಲಿಯ ಕಿರಿಯ ಮುಖ್ಯಮಂತ್ರಿ ಆತಿಶಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತನ್ನನ್ನು ರಾಮಾಯಣ ಮಹಾಕಾವ್ಯದ ಭರತನಿಗೆ ಹೋಲಿಸಿಕೊಂಡರು. ಶ್ರೀರಾಮನ ಅನುಪಸ್ಥಿತಿಯಲ್ಲಿ ಭರತ ಸಿಂಹಾಸನದ ಮೇಲೆ ರಾಮನ ಪಾದುಕೆಯಟ್ಟು ಆಳ್ವಿಕೆ ನಡೆಸಿದ್ದರು.

“ಇಂದು, ನಾನು ಭರತ ಹೊತ್ತ ಅದೇ ಹೊರೆಯನ್ನು ಹೊತ್ತಿದ್ದೇನೆ. ಅವರು ಸಿಂಹಾಸನದ ಮೇಲೆ ಶ್ರೀರಾಮನ ಪಾದುಕೆಯನ್ನಿಟ್ಟು ಆಳ್ವಿಕೆ ಮಾಡಿದಂತೆಯೇ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಉತ್ಸಾಹದಿಂದ ದೆಹಲಿಯನ್ನು ಆಳುತ್ತೇನೆ” ಎಂದು ಅತಿಶಿ ಹೇಳಿದರು.

ಮುಂಬರುವ ಚುನಾವಣೆಯಲ್ಲಿ ದೆಹಲಿಯ ಜನರು ಅರವಿಂದ್ ಕೇಜ್ರಿವಾಲ್ ಅವರನ್ನು ಶೀಘ್ರದಲ್ಲೇ ಅಧಿಕಾರಕ್ಕೆ ತರಲಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.