ಮನೆ ಮನೆ ಮದ್ದು ಮೈಕೈ ನೋವು

ಮೈಕೈ ನೋವು

0

1. ಎಳ್ಳೆಣ್ಣೆಯನ್ನು ದೇಹಕ್ಕೆ ತಿಕ್ಕಿ, ಸ್ವಲ್ಪ ಸಮಯ ನೆನೆಯಲು ಬಿಟ್ಟು ಆಮೇಲೆ ಸ್ನಾನ ಮಾಡುವುದರಿಂದ ಮೈಕೈ ನೋವು ಮಾಯ ಆಗುವುದು ಚರ್ಮರೋಗ ಬರುವ ಸಂಭವವೂ ಇರದು.

Join Our Whatsapp Group

2. ಕೀಲುನೋವು ಇದ್ದಾಗ ಹರಳೆಲೆಗೆ ಹರಳೆಣ್ಣೆಯನ್ನು ಲೇಪಿಸಿ,ಊತ ಇರುವ ಜಾಗಕ್ಕೆ ಕಾವು ಕೊಟ್ಟರೆ ಉರಿ ಇಳಿದು ನೋವು ಕಡಿಮೆ ಆಗುವುದು.

3. ಹರಳೆಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಕೊಂಚ ಕಾಲ ನೆನೆಯಲು ಬಿಟ್ಟರೆ, ಆನಂತರ ಬಿಸಿನೀರಿನಲ್ಲಿ ಅಭ್ಯಂಜನ ಸ್ಥಾನ ಮಾಡಿದರೆ ದೇಹ ತಂಪಾಗುವುದರ ಜೊತೆಗೆ ಮೈ ಕೈ ನೋವು ಕಡಿಮೆ ಆಗುವುದು.

4. ಹಲಸಿನ ಹಣ್ಣಿಗೆ ಹಕ್ಕಿ ಬೆಲ್ಲ ಸೇರಿಸಿ,ರುಬ್ಬಿ, ದೋಸೆ ಮಾಡಿ ತಿಂದರೆ ಮೈ ಕೈ ನೋವು ನಿವಾರಣೆ ಆಗುವುದು.

5. ಮೆಂತ್ಯ ಸೊಪ್ಪಿನ ಸಾರನ್ನು ಆಗಾಗ ಮಾಡಿ ಸೇವಿಸುವುದರಿಂದ ಮೈಕೈ ನೋವು ಬೆನ್ನು ನೋವು, ಸೊಂಟ ನೋವು ಕಡಿಮೆ ಆಗುವುದು.

6. ಮೆಂತ್ಯವನ್ನು ನೀರಿನಲ್ಲಿ ನೆನೆ ಹಾಕಿ,ನುಣ್ಣಗೆ ಅರೆದು, ಅಂಗೈ ಅಂಗಾಲುಗಳಿಗೆ ಲೇಪಿಸಿಕೊಂಡರೆ ಉರಿ ಕಡಿಮೆ ಆಗುವುದು.

7. ಕೀಲುಗಳಲ್ಲಿ ನೋವು ಆದಾಗ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನುತುಪ್ಪವನ್ನು ಬೆರೆಸಿ ಹಚ್ಚಿದರೆ ಶೀಘ್ರವೇ ನೋವು ಕುಂಠಿತಗೊಳ್ಳುವುದು.

8. ಬಾಳೆಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿಂದರೆ ಅಂಗಾಲು ಉರಿ ಕಡಿಮೆ ಆಗುವುದು.

9. ಅಂಗೈ ಅಂಗಾಲುಗಳು ಉರಿಯುತ್ತಿದ್ದಾಗ ಸೋರೆಕಾಯಿಯ ರಸವನ್ನು ಲೇಪಿಸುವುದರಿಂದ ಉರಿ ಕಡಿಮೆ ಆಗುವುದು. ಕೀಲುಗಳು ಮೊದಲಿನಂತೆ ಸಲೀಸಾಗಿ ಕೆಲಸ ಮಾಡುವುದು .

10. ಹಲಸುಂಡಿ ಕಾಳನ್ನು ಹುರಿದು, ಒಂದೆರಡು ವಾರ ತಿನ್ನುತ್ತಿದ್ದರೆ ಮೈ ಕೈ ನೋವು ಕಡಿಮೆ ಆಗುವುದು.

11. ಬೇವಿನ ಹೂಗಳನ್ನು ದಿನವಿಡೀ ನೀರಿನಲ್ಲಿ ನೆನೆಯಲು ಇಟ್ಟು,ಮರುದಿನ ಅದನ್ನು ಚೆನ್ನಾಗಿ ಕಿವುಚಿ, ಶೋಧಿಸಿದ ನೀರನ್ನು ಮೂರು ಮೂರು ಗಂಟೆಗೊಂದು ಬಾರಿ ಸೇವಿಸುತ್ತಿದ್ದರೆ ಅಂಗೈ ಅಂಗಾಲು ಉರಿ ನಿಲ್ಲುವುದು

12. ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹುಲ್ಲುಕಡ್ಡಿ ಕಜ್ಜಿ ತೂರಿ ಇರುವ ಜಾಗದಲ್ಲಿ ಲೇಪಿಸುವುದರಿಂದ ತುಂಬಾ ಬೇಗ ಉರಿ ನಿಂತು ವಾಸಿಯಾಗುವುದು.