ಮನೆ ಜ್ಯೋತಿಷ್ಯ ಹೃದಯ ವ್ಯಾಧಿ :  ರಕ್ತ ಚಲನೆ

ಹೃದಯ ವ್ಯಾಧಿ :  ರಕ್ತ ಚಲನೆ

0

   ರಕ್ತ ಚಲನೆಯು ನಾಲ್ಕು ಅಂಗಗಳಲ್ಲಿ ಸುತ್ತುತ್ತಿರುತ್ತದೆ. ಹೃದಯ, ಶುದ್ಧ ರಕ್ತನಾಳ, ಅಂಗಾಂಗಗಳು ಮತ್ತೆ ಶುದ್ಧ ರಕ್ತನಾಳಗಳಲ್ಲಿ ಹರಿದು ಮತ್ತೆ ಹೃದಯವನ್ನು ಸೇರುತ್ತದೆ. ಹೃದಯವು ವಹಿಸ್ಕರಲ್ಲಿ 12 ಸೆಂ.ಮಂ  ಉದ್ದ ಮತ್ತು 9 ಸೆಂ. ಮೀ ಅಗಲವಾಗಿ, ಎರಡು ಮೃದುವಾದ ಚರ್ಮದ ಪದರದ ದಿಂದ ಅಮೃತವಾಗಿದೆ.ಈ ಪದರದ  ಮಧ್ಯೆ ತಂಪಾದ ದ್ರವ್ಯವಿದೆ. ಇದು ಹೃದಯ ಬಡಿತ ಸಮಯದಲ್ಲಿ ಆಗುವ ಘರ್ಷಣೆಗಳಲ್ಲಿ ಉತ್ಪತ್ತಿಯಾಗುವ ಶಾಖ ಮತ್ತು ಇತರ ಹೊರಗಿನ ಅಘಾತಮಗಳಿಂದ ಹೃದಯವನ್ನು ರಕ್ಷಿಸುತ್ತದೆ.ಆದರೆ ವೈದ್ಯಕೀಯವಾಗಿ ನೋಡಿದರೆ ಹೃದಯದಲ್ಲಿ ಬಲಭಾಗ ಮತ್ತು ಎಡಭಾಗ ಎಂದು ಎರಡು ಭಾಗಗಳಿವೆ ಒಂದೊಂದು ಭಾಗದಲ್ಲಿ ಎರಡು ಕೋಣೆಗಳಿವೆ. ಎರಡು ಮೇಲಿನಕೋಣೆಗಳಿಗೆ ರಕ್ತ ಹರಿದು ಬರುತ್ತದೆ.ಇದನ್ನು ಹೃಕ್ತುಕ್ಷಿ ಎನ್ನುತ್ತಾರೆ.ಎರಡು ಕೆಳಗಿನ ಕೋಣೆಗಳಿಂದ  ರಕ್ತ ಹರಿದು ಹೊರಗೆ ಹೋಗುತ್ತದೆ. ಇದನ್ನು ಹೃತ್ಕರ್ಣ ಎನ್ನುತ್ತಾರೆ ಇದರ ಮುಖ್ಯಕಾರ್ಯ ಮೇಲಿನ ಕೋಣೆಗಳು ದೇಹದ ಇತರ ಭಾಗದಿಂದ ರಕ್ತ ಸೆಳೆದುಕೊಂಡು ಕೆಳಭಾಗದ ಕೋಣೆಗಳಿಗೆ ರಕ್ತವನ್ನು ತಳ್ಳುವುದು .

Join Our Whatsapp Group

1. ಎಡ ಆರಿಕಲ್ (ಮೇಲಿನ ಕೋಣೆ) ಎಡ ಹುಕ್ತುಕ್ಷಿ.

2. ಬಲ  ಅರಿಕಲ್ (ಮೇಲಿನ ಕೋಣೆ) ಬಲ ಹೃಕ್ತುಕ್ಷಿ.

3. ಎಡ ಮೆಟ್ರಿಕಲ್ (ಕೆಳ ಕೋಣೆ) ಎಡ ಹೃತ್ಕರ್ಣ.

4. ಬಲ ಮೆಟ್ರಿಕಲ್ (ಕೆಳ ಕೋಣೆ) ಬಲ ಹಖತ್ಕರ್ಣ.

 ಕೆಳಭಾಗದ ಹೃತ್ಕರ್ಣಗಳು ಸಹ ಬಲವಾದ ಮಾಂಸಖಂಡಗಳ ಗೋಡೆಯಿಂದ ಕೂಡಿದೆ.ಅದರಲ್ಲೂ ಎಡಭಾಗದ ಹೃತ್ಕರ್ಣವು ಹೆಚ್ಚು ಬಲಯುತವಾಗಿರುತ್ತದೆ.ಏಕೆಂದರೆ, ಎಡಭಾಗದ ಕೆಳ ಕೋಣೆಯಿಂದ ರಕ್ತವು ದೇಹದ ಇತರ ಅಂಗಾಂಗಗಳಿಗೆ ಬಲವಾಗಿ ತಳ್ಳಬೇಕಾಗುತ್ತದೆ.ಏಕೆಂದರೆ  ಆ ರಕ್ತವು ದೇಹದ ಕೊನೆಯ ಭಾಗದವರೆಗೂ ಸಂಚರಿಸಿ ಆ ಅಂಗಕೆ ಬೇಕಾಗುವ ಪೋಷಕಾಂಶ ಮತ್ತು ಆಮ್ಲಜನಕವನ್ನು ಸಣ್ಣ ರಕ್ತನಾಳಗಳ ಮುಖಾಂತರ ನೀಡಿ, ಸುಮಾರು 60,000 ಮೈಲಿ ಸುತ್ತಿ ಮತ್ತೆ ಹೃದಯದ ಬಲದ ಹೃಕ್ತುಕ್ಷಿಗೆ (ಮೇಲಿನ ಕೋಣೆಗೆ )ಆ ಶುದ್ಧವಾಗಿ ಬಂದು ಸೇರುತ್ತದೆ.

    ಬಲಭಾಗದಲ್ಲಿ ಮೇಲಿನ ಕೋಣೆಗೆ( ಬಲಹೃಕ್ತುಕ್ಷಿ) ಎನ್ನುತ್ತಾರೆ. ಇದಕ್ಕೆ ದೇಹದ ಎರಡು ಕಡೆಯಿಂದ ಅಶುದ್ಧರಕ್ತ ಅರಿದು ಬರುತ್ತದೆ. ಒಂದು ಮೇಲಿನ ಅಂಗಾಂಗಗಳಾದ ತಲೆ,ಎದೆ, ಕೈಗಳಿಂದ ಅಶುದ್ಧ ರಕ್ತ ಹರಿದುಬರುತ್ತದೆ.ಇದನ್ನು ಆನ್ ಟೀರಿಯರ್ ಅಶುದ್ಧರಕ್ತನಾಳ ಎಂದು  ಎರಡು  ಕೆಳಭಾಗದ ಅಂಗಗಳಾದ ಹೊಟ್ಟೆ ಕಾಲು ಪಾದಗಳಿಂದ ಅಶುದ್ಧರಕ್ತ ತರುತ್ತದೆ. ಇದನ್ನು ಪೇರಿಯರ್ ನಾಳವೆಂದು ಕರೆಯುತ್ತಾರೆ.

 ಹೃದಯದಿಂದ ರಕ್ತ ಹೊರಹಾಕುವ ರಕ್ತನಾಳಗಳು

   ಹೃದಯ ಪಂಪ್ ಮಾಡಿದಾಗ ಬಲಹೃತ್ಕರ್ಣದಿಂದ ಅಶುದ್ಧರಕ್ತವು ಎಡ ಮತ್ತು ಬಲ ಶ್ವಾಸಕೋಶಗಳಿಗೆ ಹರಿದು ಹೋಗುತ್ತದೆ.ಅಲ್ಲಿ ಅಶುದ್ಧ ರಕ್ತದಲ್ಲಿ ಇರುವ ಇಂಗಾಲದ ಡೈಯಾಕ್ಸೈಡ್  ಬಿಟ್ಟು ಅಲ್ಲಿಂದ ಶುದ್ದವಾದ ಆಮ್ಲಜನಕಯುಕ್ತ ರಕ್ತವನ್ನು ಮತ್ತೆ ಹೃದಯದ ಎಡಭಾಗದ ಮೇಲಿನ ಕೋಣೆ ಎಡ ಹೃಕ್ತುಕ್ಷಿ ಸೇರುತ್ತದೆ.ಮತ್ತೆ ಹೃದಯ ಸಂಕುಚಿತ ಮಾಡಿದಾಗ ಅಲ್ಲಿಂದ ದೇಹದ ವಿವಿಧಾ ಅಂಗಗಳಿಗೆ ಎಡದ ಹಖತ್ಕರ್ಣದಿಂದ ಹರಿದು ಹೋಗುತ್ತದೆ.