ಮನೆ ರಾಜ್ಯ ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು: ಕೆಲ ರೈಲುಗಳ ಸಂಚಾರ ರದ್ದು

ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು: ಕೆಲ ರೈಲುಗಳ ಸಂಚಾರ ರದ್ದು

0

ಹುಬ್ಬಳ್ಳಿ: ಹುಬ್ಬಳ್ಳಿ ನೈರುತ್ಯ ವಿಭಾಗದ ಭೀಮಾ ನದಿ ಸೇತುವೆ ಸಮೀಪ ಲೊಕೋ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ.

ರದ್ದುಗೊಳಿಸಲಾದ ರೈಲುಗಳ ವಿವರ ಇಂತಿದೆ.

ಕೆಳಗೆ ವಿವರಿಸಿದಂತೆ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

1. ರೈಲು ಸಂಖ್ಯೆ 17030 ಹೈದರಾಬಾದ್ – ವಿಜಯಪುರ, ಸೆ.25ರಂದು (ಇಂದು) ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

2. ರೈಲು ಸಂಖ್ಯೆ 07663 ವಿಜಯಪುರ – ರಾಯಚೂರು, 26.09.2024ರಂದು ಆರಂಭವಾಗುವ ಪ್ರಯಾಣ ರದ್ದುಗೊಂಡಿದೆ.

3. ರೈಲು ಸಂಖ್ಯೆ 11305 ಸೊಲ್ಲಾಪುರ – ಹೊಸಪೇಟೆ, 26.09.2024ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದು ಮಾಡಲಾಗಿದೆ.

4. ರೈಲು ಸಂಖ್ಯೆ 11306 ಹೊಸಪೇಟೆ – ಸೊಲ್ಲಾಪುರ, 27.09.2024ರಂದು ಆರಂಭವಾಗುವ ಪ್ರಯಾಣ ರದ್ದುಗೊಂಡಿದೆ.

5. ರೈಲು ಸಂಖ್ಯೆ 17319 ಹುಬ್ಬಳ್ಳಿ – ಹೈದರಾಬಾದ್, 25.09.2024ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

6. ರೈಲು ಸಂಖ್ಯೆ 17320 ಹೈದರಾಬಾದ್ – ಹುಬ್ಬಳ್ಳಿ, 26.09.2024ರಂದು ಪ್ರಾರಂಭವಾಗುವ ಪ್ರಯಾಣ ರದ್ದುಗೊಂಡಿದೆ.

ರೈಲು ಸಂಚಾರ ಮಾರ್ಗ ಬದಲಾವಣೆ: ರೈಲು ಸಂಖ್ಯೆ 17320 ಹೈದರಾಬಾದ್ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಇಂದು (ಸೆ.25) ಹೈದರಾಬಾದ್‌ನಿಂದ ಸುಲೇಹಳ್ಳಿ, ರಾಯಚೂರು, ಗುಲ್ತಕಲ್ ಬೈಪಾಸ್, ಬಳ್ಳಾರಿ ಮತ್ತು ಗದಗ ಮೂಲಕ ಹುಬ್ಬಳ್ಳಿಗೆ ತಲುಪುವಂತೆ ಬದಲಾಯಿಸಲಾಗಿದೆ. ಹೀಗಾಗಿ, ವಾಡಿ, ಶಹಾಬಾದ, ಕಲಬುರಗಿ, ಗಾಣಗಾಪುರ ರಸ್ತೆ, ಹೊಟಗಿ, ಇಂಡಿ ರಸ್ತೆ, ವಿಜಯಪುರ, ಬಸವನ ಬಾಗೇವಾಡಿ ರಸ್ತೆ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ ಮತ್ತು ಹೊಳೆ ಆಲೂರಿನಲ್ಲಿ ಈ ರೈಲಿನ ಸಂಚಾರವಿಲ್ಲ.

ಪ್ರಯಾಣಿಕರ ಅನುಕೂಲಕ್ಕಾಗಿ‌ ಬಸ್ ವ್ಯವಸ್ಥೆ: ರೈಲು ಹಳಿ ತಪ್ಪಿರುವ ಸ್ಥಳಕ್ಕೆ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ಮತ್ತು ಇತರ ಹಿರಿಯ ಅಧಿಕಾರಿಗಳು ಧಾವಿಸುತ್ತಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಅನುಕೂಲಕ್ಕಾಗಿ‌ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಜಯಪುರದಿಂದ ಕಲಬುರಗಿಗೆ 17319 ರೈಲಿನ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಳಿ ಮರು ಜೋಡಣೆ ಕಾರ್ಯಗಳ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಧಾನ ಕಛೇರಿಯಿಂದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆಗಳಿದ್ದರೆ ಸೂಚನೆ ನೀಡಲಾಗುವುದು‌ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ‌ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.