ಮನೆ ಜ್ಯೋತಿಷ್ಯ ಪ್ರಥಮ ಋತುಮತಿಯಾದ ಯೋಗ ಫಲವು

ಪ್ರಥಮ ಋತುಮತಿಯಾದ ಯೋಗ ಫಲವು

0

 ಶ್ಲೋಕ : ಆದ್ಯರ್ತೌ  ದುರ್ಭಗಾನಾರಿ ವಿಷ್ಕಂಭೆ ಚೇದ್ರಜಸ್ವಲಾ

ವಂದ್ಯಾಚೈವಾತಿ ಗಂಡೇಚ ಶೂಲೇ ಶೂಲವತಿ ಭವೇತ್

ವಜ್ರೆಚ ಸ್ವೈರಿಣೀ ಪ್ರೋಕ್ತಾ ಪಾತೇಚ  ಪತಿಘಾತಿನೀ

ಪರಿಘೇ ಮೃತ ವಂದ್ಯಾಚ ವೈಧೃ ತೌಪತಿ ಮಾರಿಣೀ

ಶೇಷಾಃ ಶುಭವಹಾ ಯೋಗಾ ಯಥಾನಾಮ ಫಲಪ್ರದಾಃ

Join Our Whatsapp Group

 ಅರ್ಥ : ವಿಷ್ಕಂಭ ಯೋಗದಲ್ಲಿ ಪ್ರಥಮ ಋತುಮತಿಯಾದರೆ ಆಕೆ ದುರ್ಬಾಗಿಲು ಅತಿಗಂಡದಲ್ಲಿ ಪುತ್ರ ಹೀನಳು,ಶೂಲಯೋಗದಲ್ಲಿ ಗಂಡನಿಗೆ ಶೂಲಪತಿಯೇ ಅಗುವಳು.ಗಂಡನಾಮ ಯೋಗದಲ್ಲಿ ದುರಾಚಾರ ಬುದ್ಧಿ ಯುಳ್ಳಾಕೆಯಾಗುವಳು.  ವ್ಯಾಘಾತದಲ್ಲಿ ಆತ್ಮ ಘಾತಕಿಯು,ವಜ್ರಯೋಗದಲ್ಲಿ ಋತುಮತಿಯಾದವಳು ವಜ್ರದಂತೆ ಕಠಿಣ ಹೃದಯವಳೇ  ಆದರೂ ಧೈರ್ಯವಂತಳು,ವ್ಯತಿಪಾತದಲ್ಲಿ ತನ್ನ ಪತಿಗೆ ಘಾತಕಪ್ರಯಳಗುತ್ತಾಳೆ. ಪರೀಘ ಯೋಗದಲ್ಲಿ ಋತುವಾದವಳು ಪುತ್ರ ಹೀನಳು  ವೈಧೃತಿ ಯೋಗದಲ್ಲಿ ಮೈನೆರೆದಾಕ್ಕೆ ಪತಿಗೆ ಅಶುಭವನ್ನುಂಟು ಮಾಡುವಾ ಗುತ್ತಾಳೆ ಹೀಗೆ ಈ ಮೇಲಿನ ಒಂಬತ್ತು ಯೋಗಗಳಲ್ಲಿ ಪ್ರಥಮ ಋತುಮತಿಯಾದಕೆ ಈ ಮೇಲೆ ಬರೆದ ಅಶುಭ ಫಲಗಳನ್ನುಂಟು ಮಾಡುವವಳು ಹಾಗೂ ಅಶುಭ ಫಲಗಳನ್ನು ತರುವವಳೂ ಆಗುತ್ತಾಳೆ.

     ಇನ್ನುಳಿದ 18 ಯೋಗಗಳಲ್ಲಿ ಋತುಮತಿಯಾದಕೆಯು ಅಂದರೆ,ಪ್ರೀತಿ,ಆಯುಷ್ಮಾನ್,ಸೌಭಾಗ್ಯ,ಶೋಭಾನ,ಸುಖರ್ಮ, ದೃತಿ,ವೃದ್ಧಿ, ಹರ್ಷಣ ಸಿದ್ಧಿ,ವರಿಯಾನ್,ಶಿವ, ಸಿದ್ದ, ಸಾದ್ಯ, ಶುಭ,

 ಶುಕ್ಲ,ಬ್ರಹ್ಮ,ಐಂದ್ರಯೋಗಗಳಲ್ಲಿ ಪ್ರಥಮ ಋತುಮತಿಯಾದಕಿಯು ಶುಭ ಫಲವನ್ನು ಹೊಂದುವಳಲ್ಲದೆ ಗಂಡನಿಗೂ ಗಂಡ ಬಂಧು ಬಳಗದ ವರ ವಂಶಕ್ಕೂ ಅಭಿವೃದ್ಧಿ,ಸೌಖ್ಯವನ್ನುಂಟು ಮಾಡುವವಳಾಗುತ್ತಾಳೆ.

 ಪ್ರಥಮ ಋತುಮತಿಯಾದ ಕರಣ ಪಲಾವು,:

 ಶ್ಲೋಕ : ಭವೇ ಪುಷ್ಪವತಿ ನಾರೀ ವಾದ್ಯವಾ ವಿಧವಾ ಭವೇತ್

 ಬಾಲವೇ ಪುತ್ರಣೀ ನಾರಿ ಕೌಲವೇ ಪ್ರಮದಾ ಭವತ್

 ತೈತಿಲೇ ಸ್ಮನತ್ ವತಿ  ಗರೇನಾರೀಣ ವಿನಶ್ಯತಿ

 ನಷ್ಟ ಪ್ರಜಾವಣಿಕ್ ಸಂಜ್ಞೆ ವಿಷ್ಠ್ಯಾಂ ವಂದ್ಯಾಧನೋರ್ಜಿತಂ

ಶಕುನೌಚ ಚತುಷ್ಪಾದೇ ನಾರೀ ವೈಧವ್ಯ ಮಾಪ್ನುಯಾತ್

ನಾಗೇನಂ ಮತೇ ರಾಮಾ ಕಿಂಸ್ತುಘೇ ವಿಧವಾ ಭವೇತ್

 ಅರ್ಥ  ಸ್ತ್ರೀಯಳು ಭವ ಕರಣದಲ್ಲಿ ಪ್ರಥಮ ಋತುಮತಿಯಾದರೆ ಪುತ್ರ ಹೀನಳಾಗುತ್ತಾಳೆ.ಇಲ್ಲವೇ ವಿಧವೆಯಾಗುತ್ತಾಳೆ. ಬಾಲವದಲ್ಲಿ ಅಂದರೆ ಪುತ್ರವತಿ ಸೌಭಾಗ್ಯವತಿ ಯಾಗುವಳು.ಕೌಲವ ಕರಣದಲ್ಲಿ ಪ್ರಥಮ ಪುಷ್ಟವತಿಯಾದರೆ ಈಕೆ ಸತ್ಕಾರ್ಯದಲ್ಲಿ ಹೆಚ್ಚು ಮನವುಳ್ಳಾಕೆಯು.ತೈತುಲ ಕಾರಣದಲ್ಲಿ ಋತುಮತಿಯಾದಕೆ ಸಮೃದ್ಧಿಯುಳ್ಳಾಕೆಯು. ಗರಜ ಕರಣದಲ್ಲಿ ಋತುಮತಿ ಯಾದವಳು ಬಂಧು ಬಳಗದವರಿಗೆ ಪೀಡೆಯನ್ನುಂಟು ಮಾಡುವವಳು ಆಗುತ್ತಾಳೆ. ವಾಣಿಜ ಕರಣದಲ್ಲಿ ಉತ್ಪತ್ತಿ ಋತುಮತಿ ಪುಷ್ಪವತಿದಾಕೆಯು ಸಂತಾನ ಹೀನಳು ಅಥವಾ ಮಕ್ಕಳನ್ನು ಕಳೆದುಕೊಳ್ಳುವಾ ಕೆಯಾಗುತ್ತಾಳೆ, ಭದ್ರಾವಾ ಕರಣದಲ್ಲಿ ಪುಷ್ಪವತಿಯಾದಾಕೆ ಯು ಪ್ರತಿಗ್ರಹಕ್ಕೆ ಪೀಡೆಯುನ್ನೂ ಧನ ಧಾನ್ಯ ಪುತ್ರರನ್ನು ಕಳೆದುಕೊಳ್ಳುವಳಾಗುತ್ತಾಳೆ. ಶಕುನಿ ಮತ್ತು ಚತುಷ್ಟಾದ ಕಾರಣದಲ್ಲಿ ಪ್ರಥಮ ಋತು ಪುಷ್ಪವತಯಾಕೆಯು ಬೇಗ ಪತಿಯನ್ನು ಕಳೆದುಕೊಳ್ಳುವವಳು ಕಿಂಸ್ತುಘ್ನ ಕಾರಣದಲ್ಲಿ ಪುಷ್ಪವತಿದಾಕೆಯು ವಿಧವೆಯಾಗುತ್ತಾಳೆ.