ಮನೆ ಮಾನಸಿಕ ಆರೋಗ್ಯ ಮಧ್ಯ ವಯಸ್ಸು ಮತ್ತು ವೃದ್ಧಾಪದಲ್ಲಿ ಆತಂಕ

ಮಧ್ಯ ವಯಸ್ಸು ಮತ್ತು ವೃದ್ಧಾಪದಲ್ಲಿ ಆತಂಕ

0

     ಮುಟ್ಟೂ ನಿಲ್ಲುವ ವೇಳೆಯಲ್ಲಿ ಮಹಿಳೆಯರು,  ನಿವೃತ್ತರಾಗುವ ವಯಸ್ಸಿನಲ್ಲಿ ಪುರುಷರು, ತಾವು ಅರಕ್ಷಿತರು ಎಂಬ ಭಾವನೆಗೆ ಒಳಗಾಗುತ್ತಾರೆ ಜೀವನದ ಕೊನೆಯ ಭಾಗದ ಅವಧಿಗಾಗಿ ಅವರು ಹಲವಾರುಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.ವಯಸ್ಸಿಗೆ ಅನುಗುಣವಾಗಿ ಅವರ ಶಾರೀರಿಕ ಆರೋಗ್ಯ ಕ್ಷೀಣಿಸಲಾರಂಭಿಸುತ್ತದೆ. ಯುವ ಜನರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ.ತಾವು ಸೋತು ಹಿಂದುಳಿಯುತ್ತಿದ್ದೇವೆ ಎಂಬ ಚಿಂತೆ ಆವರಿಸುತ್ತದೆ.ತಮ್ಮ ವಯಸ್ಸಿನ ಇತರರುವ ಅನೇಕ ರೋಗ ರುಜಿನಗಳಿಗೆ ತುತ್ತಾಗಿ ಸಾಯುವುದನ್ನು ಕಾಣುತ್ತಾರೆ. ತಮಗೂ ಹೀಗೆಯೇ ಆಗುತ್ತೇನೋ ಎಂದು ಕಳವಳಪಡುತ್ತಾರೆ. ಎಲ್ಲ ಅಂಶಗಳು ಅವರ ಮನಸ್ಸಿನಲ್ಲಿ ಆತಂಕವನ್ನು ಮೂಡಿಸುತ್ತವೆ ಇದರಿಂದ ಅವರಿಗೆ ಸ್ವಲ್ಪಕ್ಕೆ ಆಯಾಸವೆನಿಸುತ್ತದೆ. ತಮ್ಮ ಶಕ್ತಿ ಉಡುಗುತ್ತಿದೆ ಏನೋ ಎಂದುಕೊಂಡು ಮತ್ತಷ್ಟು ಆತಂಕಕ್ಕೀಡಾಗುತ್ತಾರೆ. ಇದೊಂದು  ವಿಷಚಕ್ರವಾಗಿ ಆತಂಕ ಮೇರೆ ಮೀರಬಲ್ಲದು.

Join Our Whatsapp Group

 ವಿಶೇಷ ಬಗ್ಗೆ ಆತಂಕಗಳು :

 ಎದೆ ನಡಗಿಸುವ ಹಠತ್ ಆತಂಕ : ತನಗೆ ಅಥವಾ ತನ್ನ ಮನೆಯವರಿಗೆ ಭಯಂಕರ ವಿಪತ್ತು ಬರಲಿದೆ ಎಂಬ ಹೆದರಿಕೆ ತೋರಿಕೆಯ ಯಾವ ಕಾರಣವೂ ಇಲ್ಲದೆ ಇದ್ದಕ್ಕಿದ್ದಂತೆ ಧುತ್ತನೆ ವ್ಯಕ್ತಿಯನ್ನು ಆವರಿಸಿಬಿಡುತ್ತದೆ.ಯಾವುದೇ ಕ್ಷಣ ತನ್ನ ಹೃದಯ ನಿಂತು ತಾನು ಕುಸಿದು ಸಾಯುತ್ತೇನೆ ಎಂದು ಕಂಪಿಸುತ್ತಾನೆ. ಈ ವಿನಾಶದಿಂದ ತಾನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನಿಸುತ್ತದೆ ”ಇಲ್ಲಿಂದ ಓಡಿ ಹೋಗಿ ಬಿಡಬೇಕು. ಎಲ್ಲಿಯಾದರೂ ಅವಿತು ಕೊಳ್ಳಬೇಕು. ಸಹಾಯಕ್ಕೆ ಜೋರಾಗಿ ಕಿರುಚಬೇಕು. ನನ್ನನ್ನು ರಕ್ಷಿಸಿ ಎಂದು ಇನ್ನೊಬ್ಬರನ್ನು ತಬ್ಬಿಕೊಳ್ಳಬೇಕು” ಎಂಬ ಆದಮ್ಯ ಬಯಕೆ ಮನಸ್ಸಿನಲ್ಲಿ ಪುಡಿಯುತ್ತದೆ. ಇಂತಹ ಎದೆ ನಡುಗಿಸುವ ಆತಂಕ  ಯಾವ ವೇಳೆಯಲ್ಲಾದರೂ ಆಗಬಹುದು. ವ್ಯಕ್ತಿ ತಾನೊಬ್ಬನೇ ,ರಾತ್ರಿ ಹೊತ್ತು ಹೀಗಾದರೆ ಅವನ ಸ್ಥಿತಿ ಚಿಂತಾಜನಕವಾಗುತ್ತದೆ ದೀರ್ಘಾವಧಿಯ ಆತಂಕದ ಭಾಗವಾಗಿ, ಈ ರೀತಿ ಆಕಬಹುದು.

 ಅತಿ ಭಯ : ಸಹಿಸಲ ಸಾಧ್ಯವಾದ ವಿಪರೀತ,ವಿಶಿಷ್ಟ ಭಯವನ್ನೇ ಅತಿಭಯ ಎಂದು ಕರೆಯಲಾಗುತ್ತದೆ.ಅತಿಭಯ ಸಾಮಾನ್ಯವಾಗಿ ಆರೋಗ್ಯವಂತರಿಗೆ ಇರದು. ಈ ಸ್ಥಿತಿಯಲ್ಲಿ ಯಾವುದೇ ಒಂದು ವಿಚಾರ, ವಸ್ತು ಅಥವಾ ಸನ್ನಿವೇಶಕ್ಕೆ ವಿಶಿಷ್ಟವಾಗಿ ಆತಂಕ ಪ್ರಮುಖವಾಗಿ ಕಂಡುಬರುತ್ತದೆ.ವ್ಯಕ್ತಿಗೆ ಈ ಭಯ ಅರ್ಥ ರಹಿತ, ಅನವಶ್ಯಕ ಎಂದು ಗೊತ್ತು. ಆದರೆ ಭಯಪಡದಿರಲು ಆತನಿಗೆ ಸಾಧ್ಯವಾಗುವುದಿಲ್ಲ ಆ ವಸ್ತು ಸನ್ನಿವೇಶದಿಂದ ದೂರವಿರಲು ಯತ್ನಿಸುತ್ತಾನೆ.

      ಅತಿ ಭಯಜನಕ ವಸ್ತು ಸನ್ನಿವೇಶ ಏನಾದರೂ ಆಗಬಹುದು ಯಾವುದೇ ಕೀಟ,ಪ್ರಾಣಿ,ಚಿಕ್ಕ ಕೊಠಡಿ ದೊಡ್ಡ ಸಭಾಂಗಣ,ಜನರ ಗುಂಪು, ಎತ್ತರ, ಖಾಯಿಲೆ, ರೋಗಾನುಗಳು, ಕತ್ತಲೆ,ಸಮಾರಂಭಗಳು, ಸೂಜಿ, ರಕ್ತ, ಇತ್ಯಾದಿ

      ಅತಿ ಭಯ ಮಕ್ಕಳಲ್ಲಿ ಸಾಮಾನ್ಯ ಅತಿ ಭಯದಿಂದ ಮಗುವಿಗೆ ವಿಪರೀತ ಹಿಂಸೆಯಾಗುತ್ತಿದ್ದರೆ ಚಿಕಿತ್ಸೆ ಅಗತ್ಯವಾಗುತ್ತದೆ. ಕೆಲವು ಪ್ರಾಣಿಗಳು ಹೊಸಬರು. ಕತ್ತಲೆ ಎಂದರೆ ಸಾಮಾನ್ಯವಾಗಿ ಮಕ್ಕಳಿಗೆ ಅತಿಭಯ. ತಾಯಿಗಳಿಗೆ ಚಿಂತೆ ತರುವ ಸ್ಥಿತಿಯೆಂದರೆ ಶಾಲೆ ಕಂಡರೆ ಅತಿಭಯ ಈ ಸ್ಥಿತಿಯಲ್ಲಿ ಮಗು ಶಾಲೆಗೆ ಹೋಗಲು ನಿರಾಕರಿಸುತ್ತದೆ. ಬಲವಂತ ಮಾಡಿದರೆ,ಕಂಡವರ ಮನಸ್ಸು ಕರಗುವಷ್ಟು ಆತಂಕವನ್ನು ಪ್ರಕಟಿಸುತ್ತದೆ.ಈ ಬಯಕೆ ತಾನು ತಾಯಿಯನ್ನು ಆಗಲೇಬೇಕಲ್ಲ ಎಂಬ ಆತಂಕ ಅಥವಾ ತಾನಿಲ್ಲದಾಗ ಏನಾದರೂ ಅಪಾಯ ಆಗಿಬಿಟ್ಟರೆ ಎಂಬ ಆಳುಕೇ ಕಾರಣ ಎಂದು ಹೇಳಲಾಗುತ್ತದೆ.

 ಸದಾ ಭಯ : ಎಲ್ಲ ಕಾಲ ಎಲ್ಲ ಸನ್ನಿವೇಶಗಳಲ್ಲಿ ಆತಂಕ,ಭಯ ವ್ಯಕ್ತಿಯ ಕಾಡುತ್ತವೆ.

 ಹಿತ್ತ ಚಂಚಲತೆಗೆ ಮೂಲ ಕಾರಣ :

       ಸಿಗ್ಮಂಡ್ ಫ್ರಾಯ್ಡ್ ನ ಪ್ರಕಾರ, ಮಿತಿ ಮೀರಿದ ಆತಂಕವೇ ಎಲ್ಲ ಬಗೆಯ ಚಿತ್ತ ಚಂಚಲತೆಗೆ ಕಾರಣ. ಅವನ ವಾದದಂತೆ ನಮ್ಮ ಮನಸ್ಸಿನಲ್ಲಿ ಆಗುವ ಯಾವುದೇ ತಿಕ್ಕಾಟ ಆತಂಕವನ್ನು ಸೃಷ್ಟಿಸುತ್ತದೆ.ಆಗ ನಮ್ಮ ಮನಸ್ಸು ಈ ಆತಂಕವನ್ನು ನಾನಾ ವಿಧಾಗಳಿಂದ ಸಹಿಸಲು ಪ್ರಯತ್ನಿಸುತ್ತದೆ. ಈ ವಿಧಾನಗಳನ್ನು ‘ರಕ್ಷಣಾ ತಂತ್ರ’ಗಳು ಎಂದು ಕರೆಯುತ್ತಾರೆ. ಒಂದು ತಂತ್ರವೆಂದರೆ,ಆತಂಕವನ್ನುಂಟು ಮಾಡುವ ಸಂಗತಿಯನ್ನು ಸುಪ್ತ ಮನಸ್ಸಿನ ಹಗೇವುಗಳೊಳಕ್ಕೆ ತಳ್ಳುವುದು.ಇತರ ತಂತ್ರಗಳೆಂದರೆ,’ಛೆ ‘,ಇಲ್ಲಪ್ಪಾ ಎಂದು ನಿರಾಕರಿಸುವುದು, ಅನಿಷ್ಟಕ್ಕೆಲ್ಲಾ ಶನೇಶ್ವರ ಗುರಿ ಎಂಬಂತೆ ಬೇರೊಂದನ್ನು ದೂರುವುದು, ಅತ್ತೆಯ ಮೇಲಿನ ಕೋಪವನ್ನು ಕೃತಿಯ ಮೇಲೆ ತಿಳಿಸಿಕೊಡುರು ಎಂಬಂತೆ ಮಾಡುವುದು ಇತ್ಯಾದಿ.

      ಆದರೆ ಎಷ್ಟೂ ಬಾರಿ ತಂತ್ರವನ್ನು ಫಲಿಸುವುದಿಲ್ಲ.ಅಹಿತಕರ ಮನಸ್ಸಿನ ಘರ್ಷಣೆಗಳು ನಮ್ಮ ಅರಿವಿಗೆ ಬಂದುಬಿಡುತ್ತವೆ ಎಂಬ ಅಳುಕು ಸದಾ ನಮ್ಮನ್ನು ಕಾಡಿ,ಆತಂಕದ ಮನೋ ಬೇನೆಲಯನ್ನು ತರುತ್ತವೆ. ಆತಂಕಕಾರಿ ಘರ್ಷಣೆ ಶರೀರ ತೊಂದರೆಯ ಮೂಲಕ ಕಾಣಿಸಿಕೊಂಡರೆ ಅದು ಉನ್ಮಾದ ಚಿತ್ತ ಚಂಚಲತೆಯಾಗುತ್ತದೆ. ಆತಂಕ ವಿಚಾರ ಒಂದು ವಸ್ತು ಅಥವಾ ಸನ್ನಿವೇಶಕ್ಕೆ ಅನ್ವಯಿಸಿಕೊಂಡರೆ ಅತಿಭಯ ಬೇನೆ ಬರುತ್ತದೆ.ಅದೇ ಘರ್ಷಣೆ ಮನಸ್ಸಿಗೆ ಪದೇ ಪದೇ ಬರುವ ವಿಚಾರವಾಗಿ ಅಥವಾ ಮಾಡಲೇಬೇಕು ಎನಿಸುವ ಚಟುವಟಿಕೆಯಾಗಿ ಕಾಣಿಸಿಕೊಂಡರೆ, ಅದು ಗೀಳು ಪೀಡೆ ಎನಿಸಿಕೊಳ್ಳುತ್ತದೆ .