ಹುಟ್ಟು ಹೃದಯ ರೋಗಗಳು :
ನಮ್ಮ ಜಗತ್ತಿನಲ್ಲಿ ಹುಟ್ಟುವ ಪ್ರತಿ ಸಾವಿರಕ್ಕೆ ಆರರಿಂದ ಎಂಟು ಮಕ್ಕಳು ಹೃದಯ ವ್ಯಾದಿಯಿಂದ ಪಾದರ್ಪಣೆ ಮಾಡುತ್ತದೆ. ಭಾರತದಲ್ಲಿ ಪ್ರತಿವರ್ಷ ಮೂರು ಕೋಟಿ ಮಕ್ಕಳ ಜನನ. ಅದರಲ್ಲಿ 30,000 ಮಕ್ಕಳು ಹೃದಯ ರೋಗದಿಂದ ಬಳಲುತ್ತವೆ. ಇದರಲ್ಲಿ ಮೊದಲು ಹುಟ್ಟುಹಬ್ಬ ಮೊಂಬತ್ತಿ ಬೆಳಕನ್ನು ಅರ್ಧದಷ್ಟು ಮಕ್ಕಳು ಕಾಣಲಾರರು.
ಎರಡರಿಂದ ಎಂಟು ವಾರಗಳಲ್ಲಿ ಪಿಂಡದ ಹೃದಯದ ಅಂಗ ರಚನೆಯಲ್ಲಿ ಆಗುವ ವಿಕೃತಿಯ ಫಲವಾಗಿ ಹುಟ್ಟು ಹೃದಯ ವ್ಯಾಧಿಗಳು,ಅನೇಕ ರೀತಿಯ ಹೃದಯವ್ಯಾದಿಗಳಲ್ಲಿ ಹೃದಯದಲ್ಲಿ ರಂಧ್ರ ಉಂಟಾಗಿ ಶುದ್ಧ ಮತ್ತು ಅಶುದ್ಧ ರಕ್ತ ಕಲಬೆರಿಕೆಯಾಗುವುದು.ಇದರಲ್ಲಿ ಮುಖ್ಯವಾಗಿ ಒಂದು ಎಡ ಮತ್ತು ಬಲ ಹೃದಯಗಳ ನಡುವಿನ ತೆರೆಯ ಬೆಳವಣಿಗೆ ಸರಿಯಾಗಿ ಆಗದೆ, ರಂಧ್ರಗಳು ಏರ್ಪಟ್ಟು ಹೃತ್ಕರ್ಣ ಅಥವಾ 2 ಹೃಕ್ತುಕ್ಷಿಗಳ ನಡುವೆ ಸಂಘರ್ಷ ಕಲ್ಪಿಸುವುದು.ಎರಡು ಹೃದಯದಿಂದ ಹೊರಹೊಮ್ಮಿದ ಮಹಾ ಅಪಧಮನಿ ಮತ್ತು ಶ್ವಾಸಕೋಶ ಅಪಧಮನಿಗಳ ಮಧ್ಯೆ ರಂದ್ರ ಉಂಟಾಗಿ,ಶುದ್ಧ ಮತ್ತು ಅಶುದ್ಧ ರಕ್ತಗಳ ಕಲಬೆರಿಕೆಯಾಗುವುದು. ಆದರೆ ಇಂತಹ ರಂಧ್ರವು ಜನ್ಮತಳೆದ ಕೆಲವು ದಿನಗಳಲ್ಲಿ ಮುಚ್ಚಲ್ಪಡುವುದು.ಇದನ್ನು ನೀಲಿ ಗಟ್ಟುವ ಹೃದಯ ರೋಗಗಳು, ಎನ್ನುತ್ತಾರೆ.ಕೆಲವು ಸಲ ಮುಚ್ಚಿಕೊಳ್ಳದೆ ಇದ್ದಾಗ ಶಸ್ತ್ರಚಿಕಿತ್ಸೆಯಿಂದ ಮುಚ್ಚಬೇಕಾಗುತ್ತದೆ.
ಹೃದಯಾಘಾತ ಬೆಳಗಿನ ಜಾವವೇ ಏಕಾಗುತ್ತದೆ
ಅಂದರೆ ಉಳಿದ ಸಮಯದಲ್ಲಿ ಆಗಬಾರದೆಂದೇನಿಲ್ಲ.ಆದರೂ ಹೆಚ್ಚು ಹೃದಯಾಘಾತವು ಬೆಳಗಿನ ಜಾವವೇ ಎಂದು ಅಂಕಿ ಅಂಶಗಳಿಂದ ತಿಳಿಯುತ್ತದೆ. ಅದರಲ್ಲಿ ಚಳಿಗಾಲದ ಬೆಳಿಗ್ಗೆ ಹೆಚ್ಚಾಗುತ್ತದೆ.ಮೆದುಳಿನಲ್ಲಿ ಉತ್ಪಲವಾಗುವ ನರಗಳಲ್ಲಿ ವೇಗಾಸ್ ಅತ್ಯಂತ ಪ್ರಮುಖವಾಗಿದೆ.ಕಾರಣ, ಸ್ಪರ್ಶಜ್ಞಾನವನ್ನು ಮೆದುಳಿಗೆ ಕೊಂಡೊಯ್ಯುವ ಅವಸ್ಥೆಯನ್ನು ಈ ನರ ಹೊಂದಿದೆ ಈ ನರವು ದೇಹದ ಕುತ್ತಿಗೆಗೆ ಭಾಗದಿಂದ ಹೃದಯ, ಶ್ವಾಸಕೋಶ ಮತ್ತು ಉದರದಲ್ಲಿರುವ ಎಲ್ಲಾ ಅಂಗಾಂಗಗಳಿಗೂ ತಲುಪಿಸುವ ಕಾರ್ಯ ನಿರ್ವಹಣೆಸುತ್ತದೆ.
ನಾವು ರಾತ್ರಿ ಮಲಗುವ ಮುನ್ನ ನೀರನು ಹೆಚ್ಚಾಗಿ ಕುಡಿದಾಗ ನಮಗೆ ಅಷ್ಟೇ ವೇಗದಲ್ಲಿ ಹೆಚ್ಚಾಗಿ ಮೂತ್ರವು ನಮ್ಮ ಮೂತ್ರಕೋಶದಲ್ಲಿ ಶೇಕರ ವಾಗುತ್ತದೆ. ನಾವು ಅತಿಯಾದ ನಿದ್ದೆಯಿಂದ ಅಥವಾ ಅಲಸ್ಯದಿಂದ ಎದ್ದು ಮೂತ್ರ ವಿಸರ್ಜನೆ ಮಾಡಲಾರೆವು.ಆಗ ನಮ್ಮ ಮುತ್ರ ಕೋಶದಲ್ಲಿ ಹೆಚ್ಚು ಮೂತ್ರ ತುಂಬಿ ಹೆಚ್ಚು ಗಾತ್ರವಾಗುತ್ತದೆ. ಆಗ ಬಾಧೆ ತಡೆಯಲಾರದೆ ನಾವು ವಿಸರ್ಜನೆ ತಕ್ಷಣ ಮಾಡಿದಾಗ ಮೂತ್ರಚೀಲದ ಗಾತ್ರ ತಕ್ಷಣ ಕಡಿಮೆಯಾದಾಗ ಅದಕ್ಕೆ ಹೊಂದಿಕೊಂಡಿರುವ ಸ್ಪರ್ಶಜ್ಞಾನ ನರವಾದ ಮೆಗಾಸ್ ಕಾರ್ಯ ವೈಖರಿಯಲ್ಲಿ ತಕ್ಷಣ ಏರುಪೇರಾಗುತ್ತದೆ.ಇದರಿಂದ ಮೊದಲು ಮೂತ್ರ ಚೀಲ ಒತ್ತಡದಿಂದ ಸಂಕುಚಿತವಾದ ರಕ್ತನಾಳಗಳು,ತಕ್ಷಣ ಅಂಕುಚನ ಅಗಲವಾಗುತ್ತದೆ ಇದರಿಂದ ರಕ್ತದ ಒತ್ತಡದ ಹರಿಯುವಿಕೆಯು ಕಡಿಮೆಯಾಗಿ ಹೃದಯಕ್ಕೂ ತಾತ್ಕಾಲಿಕ ರತ್ತಾರಿವಿಕೆಯೂ ಸಹ ಕಡಿಮೆಯಾಗಿ ಹೃದಯದ ಬಡಿತವು ಕಡಿಮೆಯಾಗುತ್ತದೆ ಹೃದಯ ಹಠಾತ್ ನಿಲ್ಲುವ ಸಾಧ್ಯತೆ ಇಲ್ಲದ್ದಿಲ್ಲ ಅದರಲ್ಲೂ ಹೃದಯವ್ಯಾದಿ ಇರುವವರಿಗೆ ತೀವ್ರವಾದ ಅಘಾತತಮವಾಗುತ್ತದೆ. ಆಗ ಹಠಾತ್ ಮೈ ಬಿಸಿಯಾಗಿ ಬೆವರು,ತಲೆ ಸುತ್ತು ಆಯಾಸದಿಂದ ಕುಸಿದು ಬೀಳುವ ಸ್ಥಿತಿಗೆ ತಲುಪುತ್ತಾರೆ. ಹೃದಯದಲ್ಲಿ ಬಡಿತದ ವ್ಯತ್ಯಾಸದಿಂದ ಮೆದುಳಿಗೂ ಸಾಕಷ್ಟು ರಕ್ತ ಹರಿಯುತ್ತದೇ ಇರುವುದರಿಂದ ಕತ್ತಲೆ ಕವಿದಂತೆ ಆಗುತ್ತದೆ.ಇದನ್ನು ವಾಸೋವಗಲ್ ಅಟಾಕ್ ಎನ್ನುತ್ತಾರೆ.
ಪರಿಹಾರಗಳು
ತರಕಾರಿ ಮತ್ತು ಹಣ್ಣುಗಳಿಂದ :
ನಲ್ಲಿಕಾಯಿ,: ಹೃದಯದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹೆಚ್ಚು ಪ್ರಯೋಜನಕಾರಿಯಾಗಿದೆ.ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 20 ಮಿ.ಲೀಟರ್ ತೆಗೆದುಕೊಂಡರೆ ರಕ್ತನಾಳಗಳಲ್ಲಿ ತಡೆಯುಂಟು ಮಾಡುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ.
ಇದರಿಂದ ರಕ್ತ ನಾಳಗಳ ದೋಷಗಳು ಕಡಿಮೆಯಾಗಿ ಹೃದಯ ಸರಿಯಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ.
ಎಲೆಕೋಸು : ಇದರಲ್ಲಿ ಅತಿ ಸೂಕ್ಷ್ಮವಾದ ಮೆಟಾಬಾಲಿಸಂ ಪ್ರತಿಕ್ರಿಯೆ ನಿಯಂತ್ರಿಸುತ್ತದೆ. ಇವು ಹೃದಯದ ರಕ್ತನಾಳಗಳ ಭಿತ್ತಿಗಳಲ್ಲಿ ತೆಪ್ಪಾಗುತ್ತದೆ. ಮಾರಕ ಕೊಬ್ಬು ಮತ್ತು ಪಿತ್ತದಲ್ಲಿ ಕಲ್ಲು ಉತ್ಪತ್ತಿಯ ವಿದ್ಯಮಾನವನ್ನು ತಡೆಯುತ್ತದೆ.ಹೃದಯದ ರಕ್ತನಾಳಗಳು ಗಡುಸಾಗುವಿಕೆ,ದಪ್ಪವಾಗುವಿಕೆಯಿಂದ ಆಗುವ ತೊಂದರೆ ನಿವಾರಿಸುತ್ತದೆ.
ದ್ರಾಕ್ಷಾರಸ : ಇದರ ನಿಯಮಿತ ಸೇವನೆಯಿಂದ ದೇಹದಲ್ಲಿ ನೈಟ್ರಿಕ್ ಆೄಸಿಡ್ ಪ್ರಮಾಣ ಹೆಚ್ಚಾಗಿ ಅದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆದು ರಕ್ತಸರಾಗವಾಗಿ ಹರಿದು ಹೋಗುವಂತೆ ಮಾಡಿ, ಹೃದಯಘಾತವನ್ನು ತಡೆಯುತ್ತದೆ
ಅಗಸೆ ಬೀಜ : ಪ್ರತಿ ದಿನ ಒಂದು ಚಮಚದಷ್ಟು ಸೇವಿಸಿದರೆ ಹೃದಯವ್ಯಾದಿ ಕಡಿಮೆಯಾಗುತ್ತದೆ.
ಬೆಟ್ಟದ ನೆಲ್ಲಿಕಾಯಿ : ಇದರ ಸೇವನೆಯಿಂದ ರಕ್ತನಾಳಗಳಲ್ಲಿ ಕೊಬ್ಬು ಕಟ್ಟುವುದು ತಡೆಯುತ್ತದೆ ರಥನಾಳಗಳ ಗಡಸುತನವನ್ನು ನಿವಾರಿಸಿ, ಮೃದುತ್ವ ನೀಡಿ ಸುಲಭವಾಗಿ ಧಮನಿಗಳಲ್ಲಿ ರಕ್ತ ಹರಿಯುವಂತೆ ಮಾಡುತ್ತದೆ.
ಬಾದಾಮಿ : ಇದನ್ನು ದಿನಕ್ಕೆ 10 ಸೇವಿಸಬೇಕು. ಇದರಲ್ಲಿ ಹಣ್ಣು ಗಳಿಗಿಂತ ಹೆಚ್ಚಿನ ಕೊಬ್ಬಿನಂಶವಿದೆ. ಇದರಲ್ಲಿ ಶೇಕಡ 65 ರಷ್ಟು ಮನೋ ಸ್ಯಾಚುರೇಟೇಡ್ ಗುಣವಿದೆ.ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸರಿಪಡಿಸುತ್ತದೆ.
ಹಾಗಲಕಾಯಿ : ಹೃದಯದ ಸಾಮರ್ಥ್ಯದ ಹೆಚ್ಚಿಸಿಕೊಳ್ಳಲು ಈ ಕಾಯಿ ಹೆಚ್ಚು ಪ್ರಯೋಜನಕಾರಿ ಇದು ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ. ಇದರಿಂದ ರಕ್ತನಾಳ ದೋಷಗಳು ಕಡಿಮೆಯಾಗಿ ಹೃದಯ ಸರಿಯಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ.
🎯 ರೈಲ್ವೆ ಟೆಕ್ನಿಷಿಯನ್ ನೇಮಕಾತಿ 2024 – 14,928 ಹುದ್ದೆಗಳು 🛠️
ಅರಿಶಿನ ಕುಂಕುಮದ ನೈಜ ಮಹತ್ವ ದೇವರ ದರ್ಶನಕ್ಕೂ, ಆರೋಗ್ಯಕ್ಕೂ 🌼✨
ಪ್ರಧಾನ ಮಂತ್ರಿ ಆವಾಸ್ ಯೋಜನೆಮನೆ ಕಟ್ಟಲು ಪಡೆಯಿರಿ ಸರ್ಕಾರದಿಂದ ಸಬ್ಸಿಡಿ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ಆರೋಗ್ಯ ಸಲಹೆ…..
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.