ಮನೆ ಆರೋಗ್ಯ ಒಂದು ಅಳಲೇಕಾಯಿ

ಒಂದು ಅಳಲೇಕಾಯಿ

0

 ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಚಿಕಿತ್ಸೆ :

       ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಾಗಿರುವ ಹದಿನೈದು ಮಂದಿ ರೋಗಿಗಳನ್ನು ಆಯ್ಕೆ ಮಾಡಿ,ಅವರಿಗೆ ದಿನಕ್ಕೆ ಎರಡು ಬಾರಿ ಪ್ರತಿ ಬಾರಿ ಎರಡು ಗ್ರಾಂ ಪ್ರಮಾಣದ ಎಲೆ ಅಳಲೆಕಾಯಿ ಬೀಜ ರಹಿತ ಚೂರ್ಣ ಅಳಲೇಕಾಯಿಯ ಚೂರ್ಣವನ್ನು ಬಿಸಿ ನೀರಿನೊಡನೆ ಸೇವಿಸಲು ಕೊಡಲಾಯಿತು. ಆರು ವಾರ ಚೂರ್ಣ ಸೇವಿಸಲು ಸೂಚಿಸಲಾಯಿತು.  ಅವಧಿಯಲ್ಲಿ ನಂತರ ರೋಗಿಗಳು ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಲಿಪಿಡ್ಸ್, ಟ್ರೈಗ್ಲಿಸರೈಡ್ಸ್, ಕೆಟ್ಟ ಕೊಲೆಸ್ಟಿರಾಲ್  ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ತ್ತೆಂದು ಜೊತೆಗೆ ಒಳ್ಳೆಯ ಕೊಲೆಸ್ಟಿರಾಲ್ ನ ಪ್ರಮಾಣ ಹೆಚ್ಚಾದ ಬಗ್ಗೆ ವರದಿಯಾಗಿದ್ದೆ

 ಚರ್ಮವನ್ನು ರಕ್ಷಿಸುವ ಗುಣ:

    ಶೇಕಡಾ 10ರಷ್ಟು ಅಳಲೆಕಾಯಿಯ  ಸತ್ವ ಇರುವಂತೆ ತಯಾರಿಸಿದ ಮುಖಕ್ಕೆ ಹಚ್ಚುವ ಕ್ರೀಮ್ ಅನ್ನು ಎಂಟು ವಾರಗಳ ಕಾಲ ಮುಖಕ್ಕೆ ಹಚ್ಚಲು ತಿಳಿಸಿ ಅವಧಿಯ ನಂತರ ಪರೀಕ್ಷಿಸಿದಾಗ ಅಳಲೇಕಾಯಿ ಸತ್ವಯುಕ್ತ ಕ್ರೀಮ್ ಚರ್ಮದ ರಕ್ಷಣೆಗೆ ಉಪಯುಕ್ತವೆಂದು ಕಂಡುಬಂದಿದೆ

 ನೋವು ಕಡಿಮೆ ಮಾಡುವ ಗುಣ :

     ಆರೋಗ್ಯವಂತ ಸ್ವಯಂ ಸೇವಕನನ್ನು ಆಯ್ಕೆ ಮಾಡಿ, ಎರಡು ಗುಂಪುಗಳಾಗಿ ವಿಂಗಡಣೆ ಮಾಡಲಾಯಿತು. ನಿಯಂತ್ರಣ ಗುಂಪಿಗೆ ಯಾವುದೇ ಔಷಧಿಯನ್ನು ಕೊಟ್ಟಿರುವುದಿಲ್ಲ.ಪರೀಕ್ಷಾ ಗುಂಪಿಗೆ, ಒಂದು ಬಾರಿಗೆ ಸಾವಿರ ಮಿ. ಗ್ರಾಂ, ಪ್ರಮಾಣದ ಅಳೆ ಕಾಯಿಯ ಚೂರ್ಣವನ್ನು ಸೇವಿಸಲು ಕೊಡಲಾಯಿತು. ಚೂರ್ಣವನ್ನು ಕೊಡುವುದಕ್ಕೆ 3 ಗಂಟೆ ಮೊದಲು ಮತ್ತು ಔಷಧವನ್ನು ಸೇವಿಸಿದ ಮೂರು ಗಂಟೆಯ ನಂತರ ವಿವಿಧ ರೀತಿಯ ಪರೀಕ್ಷೆ ಒಳಪಡಿಸಿದಾಗ, ಪರೀಕ್ಷಾ ಗುಂಪಿನ ಸ್ವಯಂ ಸೇವಕರಿಗೆ ನೋವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುವುದಾಗಿ ಕಂಡುಬಂದಿದೆ ಈ ಪ್ರಯೋಗದಿಂದ ಅಳಲೆಕಾಯಿಯ ಚೂರ್ಣಕ್ಕೆ ನೋವು ನಿವಾರಕ ಗುಣವಿರುವುದು ದೃಢಪಟ್ಟಿದೆ.ವಾಯುನೋವು ಮತ್ತು ಇತರ ಬಗೆಯ ನೋವನ್ನು ಕಡಿಮೆ ಮಾಡುವ ಸಾಧ್ಯತೆಯ ಬಗ್ಗೆ ಚರ್ಚಿಸಲಾಗಿದೆ.

ಮಧುಮೇಹಿಗಳಲ್ಲಿ ಮೇಹಿಗಳಿಗೆ ಸಾಮಾನ್ಯವಾಗಿ ಉಂಟಾಗುವ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಗುಣ:

    ಎಂಡೋಥೀಲಿಯಂ ಎಂಬುದು ಧಮನಿಗಳ ಒಳ ಭಾಗದಲ್ಲಿರುವ ಪದರ.ಈ ಪದರಕ್ಕೆ ಸ್ಥಿತಿ ಸ್ಥಾಪಕ ಗುಣವಿದೆ.ಈ ಪದರ,ಸುಗಮ ರಕ್ತ ಸಂಚಾರಕ್ಕೆ ಸಹಕಾರಿ.ಈ ಪದರ ಸಾಮರ್ಥ್ಯವಾಗಿ ಕೆಲಸ ಮಾಡದೆ ಸ್ಥಗಿತಗೊಳ್ಳುವ ಸ್ಥಿತಿಯನ್ನು ಎಂಡೊಥೀಲಿಯಂ  ಡಿಸ್ ಫಂಕ್ಷನ್ ಎಂದು ಕರೆಯುತ್ತಾರೆ.ಇದರ ಪರಿಣಾಮವಾಗಿ ಧಮನಿಗಳಲ್ಲಿ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ ಮತ್ತು ಧಮನಿಗಳು ಪೆಡಸಾಗಿ ಹೃದಯಘಾತವ ಸಂಭವ ಉಂಟಾಗುತ್ತದೆ. ಎಂಡೋಥೀಲಿಯ ಪದರದ ಕಾರ್ಯ ನ್ಯೂನ್ಯತೆಗೆ ರಕ್ತದಲ್ಲಿ ಶೇಖರಣೆಯಾಗುವ ಅಧಿಕ ಪ್ರಮಾಣದ ಗ್ಲುಕೋಸ್ ಮತ್ತು ಕೊಲೆಸ್ಟ್ರಾರಾಲ್ ಕಾರಣವೆನ್ನಲಾಗಿದೆ. ಈ ಬಗೆಯ ತೊಂದರೆ ಹೆಚ್ಚಾಗಿ ಮಧುಮೇಹಿಗಳಲ್ಲಿ ಕಂಡುಬರುತ್ತದೆ .

       ಎಂಡೊಥೀಲಿಯಂ  ಪದರದ ನೂನ್ಯತೆ ಇರುವ ೬೦ ಮಂದಿ ರೋಗಿಗಳನ್ನು ಆಯ್ಕೆ ಮಾಡಿ,ನೀರು ಉಪಯೋಗಿಸಿ ಅಳೇ ಕಾಯಿಯಿಂದ ತಯಾರಿಸುವ 250 ಮೀ ಗ್ರಾಂ ಸತ್ವವನ್ನು ಕೆಲವರಿಗೆ ಮತ್ತು 500 ಮಿ. ಗ್ರಾಂ ಸತ್ವವನ್ನು ಇನ್ನು ಕೆಲವರಿಗೆ ಸೇವಿಸಲು ಕೊಡಲಾಯಿತು. ಈ ಚಿಕಿತ್ಸೆಯನ್ನು 12  ವಾರ ಮುಂದುವರೆಸಿ ನಂತರ ಪರೀಕ್ಷಿಸಿದಾಗ 500 ಮಿ. ಗ್ರಾಂ ಸತ್ವ ಸೇವಿಸಿದ ರೋಗಿಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳುಂಟಾಗುವ ಸಂಭವ ಬಹಳ ಕಡಿಮೆಯಾಗಿತ್ತೆಂದು  ವರದಿಯಾಗಿದೆ. ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹೃದಯ ಸಂಬಂಧ ಕಾಯಿಲೆಗಳನ್ನು ತಡೆಯುವ ಮತ್ತು ವಾಸಿ ಮಾಡುವ ಗುಣ ಅಳಲೆ ಕಾಯಿಗೆ ಇದೆಯೆಂದು ವರದಿಯಾಗಿದೆ.

 ವೇದ ಪದರ (ಬಿಳಿ ಸೆರಗು )ರೋಗವನ್ನು ವಾಸಿ ಮಾಡುವ ಗುಣ :-

    ಯಾವುದೇ ರೀತಿಯ ಸೋಂಕಿಲ್ಲದೆ ಶ್ವೇತ ಪ್ರದರ ರೋಗ ಕಂಡುಬಂದರೆ ಚಿಕಿತ್ಸೆಯ ಅವಶ್ಯಕತೆಯಿರುವುದಿಲ್ಲ. ಒಂದೆರಡು ದಿನಗಳಲ್ಲಿ ಸ್ರವಿಸುವುದು ನಿಲ್ಲುತ್ತದೆ. ಆದರೆ ಯೋನಿಯಲ್ಲಿ ಸೋಂಕು ಉಂಟಾದರೆ ತುರಿಕೆಯುಂಟಾಗುತ್ತದೆ ಮತ್ತು ಲೋಳೆಂತಹ ಸ್ರಾವದ ಪ್ರಮಾಣ ಹೆಚ್ಚಾಗಿರುತ್ತದೆ.ಈ ರೀತಿ ಸೋಂಕಿನಿಂದ ಉಂಟಾದ ತೊಂದರೆಗೆ ಚಿಕಿತ್ಸೆಯ ಅವಶ್ಯಕತೆ  ಇರುತ್ತದೆ.ಪ್ರಸ್ತುತ ಸಂಶೋಧನೆಗೆ ಶ್ವೇತ ಪದರ ರೋಗದಿಂದ ಬಳಲುತ್ತಿದೆ 52 ಮಂದಿ ಸ್ತ್ರೀಯರನ್ನು ಆಯ್ಕೆ ಮಾಡಿ, ಅವರಿಗೆ ಪ್ರತಿ ಬಾರಿಗೆ 500 ಮೀ ಗ್ರಾಂ ಪ್ರಮಾಣದ ಕುಂಗಿಲಿಯ ಬರ್ಪಂ ಔಷಧಿಯನ್ನು ದಿನಕ್ಕೆ ಎರಡು ಬಾರಿ ಸೇವಿಸಲು ಕೊಡಲಾಯಿತು. ಅಳಲೆಕಾಯಿಯನ್ನು ಉಪಯೋಗಿಸಿ ತಯಾರಿಸಿದ ಕಷಾಯದಿಂದ ಯೋನಿಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಯಿತು 30 ದಿನಗಳ ಚಿಕಿತ್ಸೆ ಅನಂತರ, ವಿವಿಧ ರೀತಿಯ ವೈದ್ಯಕೀಯ ತಪಾಷಣೆಗೆ ಒಳಪಡಿಸಿದಾಗ ಶ್ವೇತ ಪದರ ರೋಗ ಗುಣವಾದ ಬಗ್ಗೆ ವರದಿಯಾಗಿದೆ.ಕೆಲವು ರೋಗಿಗಳಲ್ಲಿ ಕಂಡುಬಂದ ಮೆಟ್ರೋ ಜೊವ ಸೋಂಕು ಸಹ ಗುಣವಾಗಿ ತಿಂದು ವರದಿಯಾಗಿದೆ.