ಮನೆ ಆರೋಗ್ಯ ಹಲ್ಲಿನ ಮೇಲೆ ಕರೆಕಟ್ಟುವುದನ್ನು ತಡೆಯಲು ಚಿಕಿತ್ಸೆ

ಹಲ್ಲಿನ ಮೇಲೆ ಕರೆಕಟ್ಟುವುದನ್ನು ತಡೆಯಲು ಚಿಕಿತ್ಸೆ

0
Dental caries, tooth decay, health problem.

    ಹಲ್ಲಿನ ಮೇಲೆ ಕರೆ ಕಟ್ಟಲು ಸ್ಟ್ರೆಪ್ಟೋಕಾಕಸ್ ಮುಟಾನ್ಸ್ಎಂಬ ಬ್ಯಾಕ್ಟೀರಿಯ ಕಾರಣ. ಇದು ಜೆಲ್ಲುರಸದಲ್ಲಿರುತ್ತದೆ.ಈ ಬ್ಯಾಕ್ಟೀರಿಯವನ್ನು ನಾಶಪಡಿಸಲು ಹಲವಾರು ಔಷಧಗಳನ್ನು ಉಪಯೋಗಿಸಲಾಗುತ್ತಿದೆ. ಆದರೆ, ಸಮರ್ಪಕವಾದ, ಪರಿಣಾಮಕಾರಿಯಾದ ಮತ್ತು ಪ್ರತಿಕೂಲ ಪರಿಣಾಮವನ್ನುಂಟು ಮಾಡದ ಔಷಧಿಯಿಲ್ಲದೆ ಕಾರಣ ಪ್ರಸ್ತುತ ಪ್ರಯೋಗಗವನ್ನು ಕೈಗೊಳ್ಳಲಾಗಿದೆ.ಅಳಲೆಕಾಯಿಯಿಂದ ತಯಾರಿಸಿದ 10-20% ಸಾಂದ್ರತೆಯ ಕಷಾಯವನ್ನು ಆಯ್ಕೆ ಮಾಡಿದ ಮಕ್ಕಳಿಗೆ ಬಾಯಿ ಮುಕ್ಕಳಿಸಲು ಕೊಡಲಾಯಿತು.ನಂತರ ನಿಯಮಿತ ಅವಧ್ಯ ಅವಧಿಯಲ್ಲಿ ಮಕ್ಕಳ ಬಾಯಿಯಿಂದ ಜೊಲ್ಲು ರಸವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ,ಜೊಲ್ಲಿನಲ್ಲಿ ಬ್ಯಾಕ್ಟೀರಿಯಾದ ಪ್ರಮಾಣ ಶೇಕಡ 44.42ರಷ್ಟು ಕಡಿಮೆಯಾಗಿತ್ತೆಂದು ಕಂಡುಬಂದಿದೆ..ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಮೇಲೆ ಕರೆಕಟ್ಟಲು ಕಾರಣವಾದ ಬ್ಯಾಕ್ಟೀರಿಯಾವನ್ನು ನಾಶಪಡಿಸಿ ಹಲ್ಲಿನ ಮೇಲೆ ಕರೆಕಟ್ಟದಂತೆ ತಡೆಯುತ್ತದೆ ಮತ್ತು ವಸಡನ್ನು ಕಷಾಯ ರಕ್ಷಿಸುತ್ತದೆ ಎಂದು ತಿಳಿದು ತಿಳಿದುಬಂದಿದೆ. ಅಳಲೆಕಾಯಿಯ ಕಷಾಯ,ಬಾಯಿ ಮುಕ್ಕಳಿಸಲು ಉಪಯೋಗಿಸುವ ಕ್ಲೋರೆಹೆಕ್ಸಿಡೈ ಎಂಬ ಔಷಧಿಯಷ್ಟೇ ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Join Our Whatsapp Group

 ಪ್ರಾಣಿಗಳ ಮೇಲೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗಗಳ ಫಲ :

 ಅಪಧಮನಿಯಗಳು ಕಠಿಣ್ಯವಾಗದಂತೆ ತಡೆಯುವ ಗುಣ :

     ನೀರು ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಅಪಧಮನಿಗಳು ಕಠಿಣ್ಯವಾಗದಂತೆ ತಡೆಯುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ತನ್ಮೂಲಕ ಅಳಲೇಕಾಯಿಯ ಸತ್ವಕ್ಕೆ ಹೃದಯವನ್ನು ಕಾಪಾಡುವ ಗುಣವಿದೆಯೆಂದು ತಿಳಿಯಲಾಗಿದೆ.

 ಅಲರ್ಜಿ ಆಗದಂತೆ ತಡೆಯುವ ಗುಣ :

   ನೀರು ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವಕ್ಕೆ ಅಲರ್ಜಿಯಾಗದಂತೆ ತಡೆಯುವ ಗುಣವಿದೆಯೆಂದು ಇಲ್ಲಿಯ ಜೀವಕೋಶದ ಮೇಲೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ

 ಆೄಂಟಿ ಆಕ್ಸಿಡೆಂಟ್ ಗುಣ:

      ನೀರು ಮತ್ತು ಮೆಥನಾಲ್ ದ್ರಾವಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಆೄಂಟಿ ಆಕ್ಸಿಡೆಂಟ್ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ.

     ಕ್ಲೋರೊಫಾರಂ ದ್ರಾವಣ ಉಪಯೋಗಿಸಿ ಎರಡು ವಿಧಾದಲ್ಲಿ ಸತ್ವವನ್ನು ತಯಾರಿಸಲಾಯಿತು.ಎರಡನೇ ವಿಧಾನದಲ್ಲಿ ತಯಾರಿಸಿದ ಸತ್ವಕ್ಕೆ ಹೆಚ್ಚಿನ ಪ್ರಮಾಣದ ಆೄಂಟಿಆಕ್ಸಿಡೆಂಟ್ ಗುಣ ಇರುವುದು ಕಂಡುಬಂದಿದೆ. ಇದರಿಂದ ತಿಳಿದು ಬಂದ ಅಂಶವೆಂದರೆ, ಸತ್ವವನ್ನು ತಯಾರಿಸುವ ವಿಧಾನವು ಅಷ್ಟೇ ಮುಖ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

     ಎಥನಾಲ್ ದ್ರವಣ  ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವವನ್ನು 30 ದಿನಗಳವರೆಗೆ ಇಲಿ ಗಳಿಗೆ ಸೇವಿಸಲು ಕೊಟ್ಟು ಪರೀಕ್ಷೆಗೆ ಒಳಪಡಿಸಿದಾಗ ಸತ್ವಕ್ಕೆ ಆೄಂಟಿ ಆಕ್ಸಿಡೆಂಟ್ ಗುಣವಿದೆಯೆಂದು ದೃಢಪಟ್ಟಿದೆ.

 ಇಸಬು ರೋಗವನ್ನು ವಾಸಿ ಮಾಡುವ ಗುಣ :

      ಇಸಬು ಒಂದು ಚರ್ಮದ ಕಾಯಿಲೆ, ಚರ್ಮದ ಮೇಲೆ ಗಂದೆ ಮತ್ತು ಗುಳ್ಳೆಗಳುಂಟಾಗುತ್ತದೆ.  ಅತಿಯಾದ ತುರಿಕೆ ಇರುತ್ತದೆ.ಕೆಲವೊಮ್ಮೆ ಕೀವು ಸುರಿಯಲಾರಂಭಿಸಿ  ಬ್ಯಾಕ್ಟೀರಿಯ ಸೋಂಕಿಗೆ ಮತ್ತು ಕ್ರೀಡೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಈ ರೋಗದ ಲಕ್ಷಣ ಸಾಮಾನ್ಯವಾಗಿ ಮೊಣ ಕೈ,ಮೊಣಕಾಲು, ಕೆನ್ನೆ  ಮತ್ತು ತಲೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.ಮಕ್ಕಳಲ್ಲಿ ಮತ್ತು ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

    ರಾಸಾಯನಿಕ ಕೊಟ್ಟು ಇಸಬಿ ನಂತಹ ರೋಗ ಲಕ್ಷಣ ಉಂಟುಮಾಡಿದ ಇಲಿಗಳಿಗೆ ಅಳೆ ಕಾಯಿಯ ಬೀಜದಿಂದ ತಯಾರಿಸಿದ ಸತ್ವವನ್ನು ಲೇಪಿಸಿ ಪರೀಕ್ಷಿಸಿದಾಗ, ಸತ್ವಕ್ಕೆ ಇಸಬನ್ನು ವಾಸಿ ಮಾಡುವ ಸಾಮರ್ಥ್ಯವಿದೆ ಯೆಂದು ತಿಳಿದು ಬಂದಿದೆ.