ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯ ಘಟಕದ ವತಿಯಿಂದ ಸ್ವಚ್ಛ ಗಂಗೋತ್ರಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಗಾಂಧಿ ಭವನದಲ್ಲಿ ಗಾಂಧಿ ಪ್ರತಿಮೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ ನ ಜಿಲ್ಲಾ ಕಾರ್ಯದರ್ಶಿಯಾದ ಪ್ರಜ್ವಲ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೈಸೂರು ವಿವಿ ಘಟಕದ ಕಾರ್ಯದರ್ಶಿಗಳಾದ ಸಂತೋಷ್ ಜಾದವ್ ಅವರು ಅಧ್ಯಕ್ಷೀಯ ನುಡ್ಡಿಗಳನ್ನಾಡಿ ಸ್ವಚ್ಛಗಂಗೋತ್ರಿ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಸದಸ್ಯರು ಕೂಡಿ ಆವರಣದಲ್ಲಿರುವ ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು ತಿಂದು ಬಿಸಾಡಿದ ಪ್ಲಾಸ್ಟಿಕ್ ಕವರ್, ತಟ್ಟೆ ಚಮಚದಿಂದ ಮಾನಸ ಗಂಗೋತ್ರಿ ಆವರಣದ ತುಂಬಾ ತುಂಬಿದ್ದು ಎಲ್ಲಾ ಪ್ಲಾಸ್ಟಿಕ್ ಮತ್ತು ತಿಂದು ಬಿಸಾಡಿದ್ದ ತ್ಯಾಜ್ಯಗಳನ್ನು ಶೇಖರಿಸಿ, ಮೈಸೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಸಹಾಯ ಬಳಸಿ ಎಲ್ಲ ತ್ಯಾಜ್ಯದ ಬ್ಯಾಗ್ ಗಳನ್ನು ಪಾಲಿಕೆಯ ವಾಹನಕ್ಕೆ ತುಂಬಿಸಿ ಕಳುಹಿಸಲಾಯಿತು.
ನಂತರ ಮೈಸೂರು ವಿವಿ ಘಟಕದ ಅಧ್ಯಕ್ಷರಾದ ಚಿರಾಗ್ ಎಸ್. ಕೆ ಅವರು ವಂದನಾರ್ಪಣೆ ಮಾಡಿ ಸಹಾಯ ಮಾಡಿದ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಧನ್ಯವಾದ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ನಗರದ ಸಮಿತಿಯ ಅಧ್ಯಕ್ಷರಾದ ಅಭಿ.ಡಿ, ಮೈಸೂರು ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾದ ಪ್ರಜ್ವಲ್ ಟಿ, ಮೈಸೂರು ವಿಶ್ವವಿದ್ಯಾನಿಲಯ ಘಟಕದ ಚಿರಾಗ್ ಎಸ್.ಕೆ ಸಂತೋಷ್ ಜಾಧವ್ ಪವನ್ ಕುಮಾರ್ ,ಭರತ್ ಹಾಗೂ ಶಿವಕುಮಾರ್ ಅವರು ಭಾಗವಹಿಸಿದ್ದರು.
🎯 ರೈಲ್ವೆ ಟೆಕ್ನಿಷಿಯನ್ ನೇಮಕಾತಿ 2024 – 14,928 ಹುದ್ದೆಗಳು 🛠️
ಅರಿಶಿನ ಕುಂಕುಮದ ನೈಜ ಮಹತ್ವ ದೇವರ ದರ್ಶನಕ್ಕೂ, ಆರೋಗ್ಯಕ್ಕೂ 🌼✨
ಪ್ರಧಾನ ಮಂತ್ರಿ ಆವಾಸ್ ಯೋಜನೆಮನೆ ಕಟ್ಟಲು ಪಡೆಯಿರಿ ಸರ್ಕಾರದಿಂದ ಸಬ್ಸಿಡಿ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ಆರೋಗ್ಯ ಸಲಹೆ…..
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.