ಮನೆ ಸ್ಥಳೀಯ ದಸರಾ ಸಂಭ್ರಮದಲ್ಲಿ ಮೈಸೂರಿನ ಪ್ರಸಿದ್ಧ ನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ

ದಸರಾ ಸಂಭ್ರಮದಲ್ಲಿ ಮೈಸೂರಿನ ಪ್ರಸಿದ್ಧ ನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ

0

ಮೈಸೂರು:  ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ  ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ, ದಸರಾ ಕುಸ್ತಿ ಪಂದ್ಯಾವಳಿಗೆ  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ   ಅವರು  ಚಾಲನೆ ನೀಡಿದರು.

Join Our Whatsapp Group

ನಂತರದಲ್ಲಿ ದೊಡ್ಡಕರೆ ಮೈದಾನ ಆವರಣದ ಶ್ರೀ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಾವಣಗೆರೆ ಕ್ರೀಡಾನಿಲಯದ ಪೈಲ್ವಾನ್ ರಾಘವೇಂದ್ರ ಮತ್ತು ಮೈಸೂರಿನ ಮಹದೇವಪುರ ಪೈಲ್ವಾನ್ ವಿಕಾಶ್ ಅವರ ಭುಜ ತಟ್ಟುವ ಕುಸ್ತಿ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ನೀಡಿದರು.

ಬಾಲಕಿಯರ ಮೊದಲ ಎರಡು ಕುಸ್ತಿ ಪಂದ್ಯದಲ್ಲಿ ಮಂಡ್ಯ ಪೈ.ಸುಹಾನ ಬಾನು ವಿರುದ್ಧ ಗಾಣಿಗನಕೊಪ್ಪಲು ಪೈ.ನಂದಿನಿ ಹಾಗೂ ಮಳವಳ್ಳಿ ಪೈ.ಎಂ.ಕೆ.ಮೋನಿಕಾ ವಿರುದ್ಧ ರಮ್ಮನಹಳ್ಳಿ ಪೈ.ಯಶಸ್ವಿನಿ ಜಯಬೇರಿ ಬಾರಿಸಿದರು. ಈ ಬಾರಿ ದಸರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಿತು.

  ಈ ಸಂದರ್ಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ, ದಸರಾ ಕುಸ್ತಿ ಉಪಸಮಿತಿ ಉಪ ವಿಶೇಷಾಧಿಕಾರಿ ಎಲ್.ನಾಗೇಶ್, ಕಾರ್ಯಾಧ್ಯಕ್ಷ ಡಾ.ಎನ್.ಸಿ.ವೆಂಕಟರಾಜು, ಕಾರ್ಯದರ್ಶಿ ಬಿ.ಎಸ್.ರಘು ಮತ್ತಿತರರು ಉಪಸ್ಥಿತರಿದ್ದರು.