ಮನೆ ಜ್ಯೋತಿಷ್ಯ ಪ್ರಥಮ ಋತುಮತಿ ಫಲ ವಿಚಾರ

ಪ್ರಥಮ ಋತುಮತಿ ಫಲ ವಿಚಾರ

0

 ಋತುವೇಳೆಯ ಲಗ್ನಫಲವು :

      ಪಾಪಗ್ರಹಗಳ ಲಗ್ನಗಳು ಯವವೆಂದರೆ;ಮೇಷ,ಸಿಂಹ,ವೃಶ್ಚಿಕ,ಮಕರ,ಕುಂಭಗಳು, ಈ 5 ಲಗ್ನಗಳು  ಪ್ರಥಮ ಋತುಮತಿಯ ಕಾಲದಲ್ಲಿ ಅಶುಭ ಫಲಗಳು. ಉಳಿದವುಗಳು ಅಂದರೆ ವೃಷಭ, ಮಿಥುನ,ಕರ್ಕ, ಕನ್ಯಾ, ತುಲಾ,ಧನುಸ್ಸು, ಮೀನ, ಈ ಲಗ್ನಗಳು ಶುಭ ಫಲದಾಯಕಗಳು ಈ ಪೈಕಿ ಕರ್ಕ ಲಗ್ನವು ಮಾತ್ರ ಶುದ್ಧದಲ್ಲಿ ಶುಭವಾಗಿಯೂ ಬಹುಳದಲ್ಲಿ ಅಶುಭವಾಗಿಯೂ ಫಲಿಸುತ್ತದೆ.

Join Our Whatsapp Group

 ವಿಶೇಷ

    ಮಾನ್ಯ ಮಹೋದಯರೇ ಯಾವ ದಿವಸ ಸ್ತ್ರೀಯಳು ಪ್ರಥಮ ಋತುಮತಿ ಆಗುವಳೋ ದಿವಸದಲ್ಲಿ ಈ ಮೇಲೆ ತಿಳಿಸಿದಂತೆ ಎಲ್ಲ ಕಾರಣಗಳು ವಿಚಾರಿಸಲಾಗಿ ಶುಭ ಫಲದಾಯಕಗಳು ಹೆಚ್ಚು ಆಗುವವೋ ಇಲ್ಲವೆ ಅಶುಭ ಫಲಗಳು ಹೆಚ್ಚು ಆಗುವೋ ನೋಡಬೇಕು. ಈ ಎಲ್ಲ ಕಾರಣಗಳಿಂದಲೂ ವಿಚಾರ ಮಾಡಿ ನೋಡಲಾಗಿ, ಒಟ್ಟಿನಲ್ಲಿ ಶುಭ ಫಲಗಳ ಸಂಖ್ಯೆ ಹೆಚ್ಚು ಆಗಬೇಕು.ಶುಭ ಕಾರಣಗಳು ಹೆಚ್ಚು ಅದರೆ ಅಶುಭ ಫಲಗಳು ಕೆಲವು ಇದ್ಯಾಗಿಯೂ ಯಾವ ದೋಷವೂ ಇಲ್ಲವೆಂದು ನಿರ್ಣಯಿಸಬೇಕು ಮತ್ತು ಯಾವ ಶಾಂತಿ ಕ್ರಮಕ್ಕೂ ಅವಕಾಶ ಬೇಡ.ಆದರೆ ಅಶುಭ ಫಲಗಳು ಹೆಚ್ಚು ಆದರೆ ಮಾತ್ರ ಯೋಗ್ಯ ಶಾಂತಿಯನ್ನು ಪ್ರಥಮ ಋತುಮತಿಯಾದ ಹದಿನಾರನೇ ದಿವಸದಲ್ಲಿ ಮುಂದೆ ತಿಳಿಸಿರುವಂತೆ ಶಾಂತಿಯನ್ನು ಮಾಡಿಸಬೇಕು.ದೋಷವೆಂದು ನಿರ್ಣಯಿಸಲ್ಪಟ್ಟಾಗ ಶಾಂತಿಯನ್ನು ಮಾಡಿಸಬೇಕು ಗಮನಿಸಿರಿ

      ಈ ಶುಭಾಶುಭ ಫಲಗಳನ್ನು ನಿರ್ಣಯಿಸುವ ವಿಧಾನವನ್ನು ಚೆನ್ನಾಗಿ ತಿಳಿದುಕೊಳ್ಳುವುದಕ್ಕಾಗಿ ಕೆಳಗೆ ಒಂದೆರಡು ವಿಧಾನಗಳನ್ನು ಬರೆದು ತಿಳಿಸಿದೆ.ದಯವಿಟ್ಟು ಗಮನಿಸಿರಿ ಇದು ಮುಖ್ಯವು.

 ಉದಾಹರಣೆ :

   ಶ್ರೀ ಶಕೆ  1909 ಕ್ಷಯನಾಮ ವೈಶಾಖ ಸಮಶುದ್ದ ಗುರುವಾರ ದಿವಸ ಸೂರ್ಯೋದಯಾದಿ 18 ಗಳಿಗೆಯಲ್ಲಿ  ಕೆಂಪು ವರ್ಣದ ಬಟ್ಟೆಯನ್ನು ಧರಿಸಿದಾಗ್ಗೆ ತನ್ನ ತಂದೆ ತಾಯಿಗಳ ಮನೆಯಲ್ಲಿ ಸ್ತ್ರೀ ಯಳು ಪ್ರಥಮ ಋತುಮತಿಯಾದ ವಿಷಯವಾಗಿ ವಿಚಾರಿಸಿ ನಿರ್ಣಯ ತೆಗೆದುಕೊಂಡಿದ್ದು.