ಮನೆ ಕಾನೂನು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

0

ಮಂಗಳೂರು: ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯ ಮನೆ ಪರಿಶೀಲನೆ ವೇಳೆ ಮತ್ತಷ್ಟು ಲಂಚದ ಹಣ ಪತ್ತೆಯಾಗಿದೆ.

Join Our Whatsapp Group

ಸೆ.19ರಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅವರು 15,000 ರೂ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಅದೇ ದಿನ ಅಧಿಕಾರಿಗಳು ಅವರ ಮನೆ ಪರಿಶೀಲನೆ ನಡೆಸುತ್ತಿದ್ದಾಗ ವಿದ್ಯುತ್ ಗುತ್ತಿಗೆದಾರರೊಬ್ಬರ ಸಂಸ್ಥೆಯ ಹೆಸರಿರುವ ಎನ್‌ವಲಪ್ ಕವರಿನಲ್ಲಿ ರೂ 30,000 ಹಣ ಪತ್ತೆಯಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡಾಗ ಹಣವನ್ನು ಮೂರು ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡಿರುವುದಕ್ಕೆ ಎಂ.ಆರ್ ಸ್ವಾಮಿ ಲಂಚವಾಗಿ ಪಡೆದುಕೊಂಡಿದ್ದಾರೆ ಎಂದು ವಿದ್ಯುತ್ ಗುತ್ತಿಗೆದಾರರೊಬ್ಬರು  ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಅ.04ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ  ಪ್ರಕರಣ ದಾಖಲಾಗಿದೆ.