ಮನೆ ಮನೆ ಮದ್ದು ಹೊಟ್ಟೆ ನೋವು

ಹೊಟ್ಟೆ ನೋವು

0

1. ಅಜೀರ್ಣದಿಂದ ಹೊಟ್ಟೆ ನೋವು ಬಂದಾಗ ಒಂದು ಬಟ್ಟಲು ಬಿಸಿನೀರಿಗೆ ಒಂದು ನಿಂಬೆಹಣ್ಣಿನ ರಸ ಹಾಗೂ ಅರ್ಧ ಟೀ ಸ್ಪೂನ್ ಸೋಡಾ ಬೆರೆಸಿ ಕುಡಿದರೆ ಗುಣ ಆಗುವುದು.

Join Our Whatsapp Group

2. ಹೊಟ್ಟೆ ನುಲಿಯುವಾಗ ನಿಂಬೆಹಣ್ಣಿನ ರಸದೊಂದಿಗೆ ಅಪ್ಪಟ ಹರಳೆಣ್ಣೆಯನ್ನು ಬೆರೆಸಿ ಕುಡಿದರೆ ಮೇಲಾಗುವುದು.

3. ಉಷ್ಣಕ್ಕೆ ಹೊಟ್ಟೆನೋವು,ಆದಾಗ ಜೀರಿಗೆ ಸಕ್ಕರೆ, ಒಣಶುಂಠಿ ಮತ್ತು ಅಡಿಗೆ ಉಪ್ಪನ್ನು ಒಂದೊಂದು ಟೀ ಸ್ಪೂನಿನಷ್ಟು ತೆಗೆದುಕೊಂಡು, ನುಣ್ಣಗೆ ಪುಡಿ ಮಾಡಿ ಅರ್ಧ ಬಟ್ಟಲು ಬಿಸಿನೀರಿಗೆ ಒಂದು ಹೋಳು ನಿಂಬೆ ಹಣ್ಣಿನೊಂದಿಗೆ ಸೇರಿಸಿ ಕುಡಿದರೆ ಹೊಟ್ಟೆ ನೋವು ಕಡಿಮೆ ಆಗುವುದು.

4. ಹೇರಳೆಹಣ್ಣು ಹೋಳು ಮಾಡಿ,ಜೀರಿಗೆ ಪುಡಿ ತುಂಬಿ,ಮಂಜು ಬೀಳುತ್ತಿರುವ ರಾತ್ರಿಯಲ್ಲಿ ಇಡಿ, ಮರುಬೆಳಿಗ್ಗೆ ಅದರ ರಸ ಕುಡಿಯಿರಿ ತುಂಬಾ ದಿನಗಳಿಂದ ಹೊಟ್ಟೆ ನೋವಿನಿಂದ ನರಳುವವರಿಗೆ ವಾಸಿ ಎನಿಸುವುದು.

5. ಬರಿಯ ಜೀರಿಗೆ ಕಾಳನ್ನು ಅಗಿದು, ತಿನ್ನುತ್ತಿದ್ದರೆ ಹೊಟ್ಟೆ ನೋವು ಇಳಿಮುಖ ಆಗುವುದು.

6. ಒಂದು ಟೀ ಚಮಚ ಮೆಣಸನ್ನು ಹದವಾಗಿ  ಹುರಿದ, ಮೆಣಸಿಗೆ  ಒಂದು ಹಿಡಿ ತುಳಸಿ ಎಲೆ ಸೇರಿಸಿ ಕುದಿಯುವ ಒಂದು ಬಟ್ಟಲು ನೀರಿನಲ್ಲಿ ಬೆರೆಸಿಡಿ,ಕೊಂಚ ಕಾಲದ ನಂತರ ಶೋಧಿಸಿ,ಸ್ವಲ್ಪ ಜೇನುತುಪ್ಪ ಬೇರೆ,ಸಿ ಮೂರು ನಾಲ್ಕು ದಿನಗಳ ಕಾಲ ಈ ಕಷಾಯವನ್ನು ಸೇವಿಸುತ್ತಿದ್ದರೆ ಅಜೀರ್ಣದಿಂದ ಸಂಭವಿಸುವ ಹೊಟ್ಟೆ ನೋವು ದೂರ ಆಗುವುದು.

7. ಒಂದು ಊಟದ ಚಮಚದಷ್ಟು ಕಾದಾ ಹಸು ವಿನ ತುಪ್ಪಕ್ಕೆ ಮೆಣಸಿನ ಕಾಳಿನ ಪುಡಿ ಮತ್ತು ಉಪ್ಪು ಸೇರಿಸಿ, ಕುದಿಸಿ ಬಿಸಿ ಅನ್ನಕ್ಕೆ ಮಿಶ್ರಣವನ್ನು ಹಾಕಿಕೊಂಡು ಕಲಸನ್ನದಂತೆ ಊಟ ಮಾಡಿದರೆ ನಾಲಿಗೆಗೂ ರುಚಿ, ಅಜೀರ್ಣ ಹಾಗೂ ಹೊಟ್ಟೆ ಉಬ್ಬರವೂ ಕಡಿಮೆ ಆಗುವುದು

8. ಸಕ್ಕರೆ ಬೆರೆಸಿದ ಕೊತ್ತಂಬರಿ ಬೀಜದ ಕಷಾಯ ಸೇವಿಸಿದರೆ ಅಜೀರ್ಣ ಹಾಗೂ ಹುಳಿತೇಗು ಬರುವಿಕೆ ಕಡಿಮೆ ಆಗುವುದು.

9. ಊಟಕ್ಕೆ ಮುಂಚೆ ಕೊಂಚ ಹಸಿಶುಂಠಿಯನ್ನು   ನಾಲ್ಕೈದು ಹರಳು ಉಪ್ಪು ಸಹಿತ ಆಗಿದು,ತಿಂದರೆ ಅಜೀರ್ಣದಿಂದ ಉಂಟಾದ ಹೊಟ್ಟೆ ನೋವು ಕಡಿಮೆ ಆಗುವುದು.

10. ಎರಡು ಅಂಗುಲದಷ್ಟು ಉದ್ದ ಹಸಿಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಅರೆದು ಕದಡಿ ಶೋಧಿಸಿದ ನಂತರ ಜೇನುತುಪ್ಪ, ನಿಂಬೆಹಣ್ಣಿನ ರಸವನ್ನು ಬೆರಸಿ ಸೇವಿಸುವುದರಿಂದ ಜೀರ್ಣದಿಂದ ಉಂಟಾಗುವ ಹೊಟ್ಟೆ ನೋವು ನಿವಾರಣೆ ಆಗುವುದು.

11. ಕೊತ್ತಂಬರಿ ಬೀಜ, ಒಣ ಶುಂಠಿಯ ಕಷಾಯ ತಯಾರಿಸಿ, ಸೇವಿಸುವುದರಿಂದ ಹೊಟ್ಟೆ ನೋವು ಕಡಿಮೆಯಾಗುವುದು.

12. ಒಂದು ಚೂರು ಹಸಿ ಶುಂಠಿಯನ್ನು ಚೆನ್ನಾಗಿ ಅರೆದು, ನೀರಿನಲ್ಲಿ ಕದಡಿ ಶೋಧಿಸಿದ ನಂತರ ಜೇನುತುಪ್ಪ ನಿಂಬೆಹಣ್ಣಿನ ರಸ ಬೆರಸಿ ಸೇವಿಸುವುದರಿಂದ ಹೊಟ್ಟೆ ನೋವು ಹಾಗೂ ಹೊಟ್ಟೆ ಉಬ್ಬರ ಕಡಿಮೆ ಆಗುವುದು.

13. ಮಕ್ಕಳಿಗೆ ಎಷ್ಟು ಹಸಿಶುಂಠಿಯ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುವುದರಿಂದ ಕರುಳು ಮತ್ತು ಜಠರಕ್ಕೆ ಸಂಬಂಧಿಸಿದ ಕಾಯಿಲೆ ದೂರ ಆಗುವುದು.

14. ಅತಿಯಾದ ಹೊಟ್ಟೆ ನೋವು ಆದಾಗ ಸೀಬೆಹಣ್ಣನ್ನು ಉಪ್ಪು ಮತ್ತು ಕಾಳು ಮೆಣಸಿನ ಪುಡಿಯೊಂದಿಗೆ ತಿಂದರೆ ನೋವು ನಾಶವಾಗಿ ಹೊಟ್ಟೆ ಹಗುರವಾಗುತ್ತದೆ.

15. ಬೆಳ್ಳುಳ್ಳಿ ಬಳಕೆ ಹೊಟ್ಟೆ ನೋವನ್ನು ಹತ್ತಿರ ಬರದಂತೆ ನಡೆಯುತ್ತದೆ.

16. ಸಕ್ಕರೆಯೊಂದಿಗೆ ನೆಲ್ಲಿಕಾಯಿ ರಸ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುವುದು.

17. ಬಿಳಿದ್ರಾಕ್ಷಿಯನ್ನು ಯಥೇಚ್ಛವಾಗಿ ಊಟ ಆದ ನಂತರ ತಿನ್ನುತ್ತಿದ್ದರೆ ಹೊಟ್ಟೆ ನೋವು ಕಡಿಮೆ ಆಗುವುದು.

18. ತೆಂಗಿನ ತುರಿ ಮತ್ತು ಎಳನೀರಿನೊಂದಿಗೆ ಗಟ್ಟಿ ಕಲು ಸಕ್ಕರೆ ಏಲಕ್ಕಿ ಪುಡಿ ಸೇರಿಸಿ,ದಿನವೂ ಒಂದೊಂದು ಬಾರಿ ಸೇವಿಸುತ್ತಿದ್ದರೆ ಹೊಟ್ಟೆ ನೋವು ಕಡಿಮೆ ಆಗುವುದಲ್ಲದೆ

19. ಊಟಕ್ಕೆ ಮೊದಲು ಅನಾನಸ್ ರಸಕ್ಕೆ ಉಪ್ಪು, ಮೆಣಸು ಪುಡಿ ಮಿಶ್ರ ಮಾಡಿ ಕುಡಿದರೆ ಹೊಟ್ಟೆ ನೋವು ವಾಸಿ ಆಗುವುದು.

20. ಪುದೀನಾ ಸೊಪ್ಪಿನ ಟೀ ತಯಾರಿಸಿ ಒಂದೆರಡು ಬಾರಿ ಉಪಯೋಗಿಸಿದರೆ ಹೊಟ್ಟೆ ಉಬ್ಬರ ಕಡಿಮೆ ಆಗುವುದು.

21. ಹೊಟ್ಟೆ ಉಬ್ಬರ ಇರುವಾಗ ಲವಂಗದ ಕಷಾಯವನ್ನು ಮೂರು ಬಾರಿ ಉಪಯೋಗಿಸಿದರೆ ಒಬ್ಬರ ಇಳಿಯುವುದು.

22. ಹೊಟ್ಟೆ ಉಬ್ಬರ ಇರುವಾಗ ವೀಳೆಯದೆಲೆಗೆ ಹರಳೆಣ್ಣೆನೆಯನ್ನು ಹಚ್ಚಿ ಹೊಟ್ಟಿಗೆ ಕಾವು ಕೊಟ್ಟರೆ ಮಗುವಿಗಾಗಲಿ,ದೊಡ್ಡವರಿಗಾಗಲಿ, ನೋವು ಕಡಿಮೆ ಆಗುವುದು.

23. ಬಾರ್ಲಿ ಗಂಜಿ ಕುಡಿಯುವುದರಿಂದ ಹೊಟ್ಟೆ ನೋವು ಇಲ್ಲದಂತಾಗುವುದು.