ಮನೆ ಯೋಗಾಸನ ಏಕಪಾದ ಗಾಲವಾಸನ

ಏಕಪಾದ ಗಾಲವಾಸನ

0

      ‘ಗಾಲವ’ ನೆಂಬುದು ಈ ಹಿಂದೆ ಹೇಳಿದಂತೆ ಒಬ್ಬ ಮುನಿಯ ಹೆಸರು, ‘ಏಕಪಾದ’ ಎಂದರೆ ಒಂದು ಪಾದ ಅಥವಾ ಮುಂದೆ ಹೆಜ್ಜೆ

Join Our Whatsapp Group

 ಅಭ್ಯಾಸ ಕ್ರಮ :

1. ಮೊದಲು, ಸಾಲಂಬಶಿರ್ಷಾಸನ ಎರಡಾದ ಭಂಗಿಯನ್ನು ಮಾಡಬೇಕು.

2. ಬಳಿಕ, ಉಸಿರನ್ನು ಹೊರದೂಡಿ ಬಲಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಿ ಆ ಮೂಲಕ ‘ಅರ್ಧಪದ್ಮಾಸನ’ದ ಭಂಗಿಗೆ ತಂದು, ಆನಂತರ ಮುಂಡವನ್ನು ಭಾಗಿಸಿ ಎಡಗಾಲನ್ನು ನೆಲಕ್ಕೆ ಸಮಾಂತವಾಗಿರಿಸಬೇಕು.

3. ಆಮೇಲೆ ಎಡಗಾಲನ್ನು ಮಂಡಿಯಲ್ಲಿ ಬಗ್ಗಿಸಿ ಹಲವು ಸಲ ಉಸಿರಾಟ ನಡೆಸಬೇಕು. ಆ ಬಳಿಕ ಉಸಿರನ್ನು ಹೊರ ಬಿಟ್ಟು  ಬಲಪಾದವನ್ನು ಎಡಗೈ ಮೇಲ್ದೋಳಿನ ಹಿಂಬದಿಗೊರಗಿಸಬೇಕು. ಈ ಪಾದವನ್ನಿರಿಸುವಾಗ ಕಾಲ್ಬೆರಳುಗಳೂ ಮತ್ತು ಕೈಬೆರಳುಗಳೂ ಒಂದೇ ದಿಕ್ಕಿಗೆ ಹೊರ ಬರುವಂತೆ ಮಾಡಬೇಕು.ಬಳಿಕ ಬಲಮಂಡಿಯನ್ನು ಬಲಗೈ ಮೇಲ್ದೋಳಿನ ಹಿಂಬದಿಗೆ ಒರಗಿಸಿರಬೇಕು.

4. ಅನಂತರ ಬಲಗಾಲಿನ ಸ್ಥಾನವನ್ನು ಸ್ಥಿರಗೊಳಿಸಿ. ಕೆಲವು ಸಲ ಉಸಿರಾಟ ನಡೆಸಬೇಕು.ಆ ಬಳಿಕ ಎಡಗಾಲನ್ನು ನೀಳಲಾಗಿ ಚಾಚಿ ನೆಲಕ್ಕೆ ಸಮಾಂತರವಾಗಿರಬೇಕು.

5. ತರುವಾಯು ಉಸಿರನ್ನು ಹೊರ ಹೋಗಿಸಿ ತಲೆಯನ್ನು ನೆಲದಿಂದ ಮೇಲೆತ್ತುವುದರ ಮೂಲಕ ದೇಹವನ್ನು ಮೇಲೆತ್ತಬೇಕು. ಎಡಗಾಲು ನೇರವಾಗಿಯೂ ನೆಲಕ್ಕೆ ಸಮಾಂತರವಾಗಿಯೂ ಇರಬೇಕು.ಅಲ್ಲದೆ ಮೊಣ ಕೈಗಳು ಬಾಗಿದ್ದು ಮೇಲ್ದೊಳುಗಳನ್ನು ನೆಲಕ್ಕೆ ಸಮಂತರವಾಗಿಯೂ ಮುಂದೊಳುಗಳು ನೆಲಕ್ಕೆ ಲಂಬವಾಗಿಯು ಇರಬೇಕು.

6. ಆಮೇಲೆ ಕತ್ತನ್ನು ಮುಂದೂಡಿ ತಲೆಯನ್ನು ಆದಷ್ಟು ಎತ್ತರವಾಗಿರಿಸಬೇಕು. ಈ ಸ್ಥಿತಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನಿಲ್ಲಿಸಬೇಕು.ಈ ಭಂಗಿಯಲ್ಲಿ ವಪೆಗೆ ಒತ್ತಡವಿರುವುದರಿಂದ ಉಸಿರಾಟ ವೇಗವಾಗಿಯೂ ಶ್ರಮದಿಂದ ಕೂಡಿದುದಾಗಿಯೂ ಇರುತ್ತದೆ.

7. ಬಳಿಕ, ಎಡಗಾಲನ್ನು ಮಂಡಿಯಲ್ಲಿ ಬಗ್ಗಿಸಿ ತಲೆಯನ್ನು ನೆಲದ ಮೇಲೆ ಒರಗಿಸಿ ಮತ್ತೆ ‘ಸಾಲಂಬಶಿರ್ಷಾಸನ’ ಎರಡಾದ  ಬಗ್ಗೆ ಬರಬೇಕು.

8. ಇದಾದಮೇಲೆ, ಕೆಲವು ಸಲ ಉಸಿರಾಟ ನಡೆಸಿ, ಇದೇ ಆಸನದ ಭಂಗಿಯನ್ನು ಮತ್ತೆ ಮಾಡಬೇಕು.ಇದರಲ್ಲಿ ಎಡಗಾಲನ್ನು ಬಗ್ಗಿಸಿ., ‘ಅರ್ಧ ಪದ್ಮಾಸನ’ವನ್ನು ರಚಿಸಿ ಬಳಿಕ ಎಡಪಾದವನ್ನು ಬಲಗೈಮೇಲ್ದೋಳಿನ ಹಿಂಬದಿಗೆ ಸೇರಿಸಿ ತಲೆಯನ್ನು ನೆಲದಿಂದ ಮೇಲೆತ್ತಬೇಕು ಎರಡೂ ಕಡೆಯ ಭಂಗಿಗಳಲ್ಲಿ ನಿಲ್ಲುವ ಕಾಲ ಸಮವಾಗಿರಬೇಕು ಆ ಬಳಿಕ ಮತ್ತೆ ‘ಸಾಲಂಬಶಿರ್ಷಾಸನ’ಕ್ಕೆ ಬರಬೇಕು.

9. ಈ ಭಂಗಿಯಲ್ಲಿ ಕಾಲುಗಳನ್ನು ನೆಲೆಕ್ಕಿಳಿಸಬೇಕು.ಇಲ್ಲವೇ, ‘ಊರ್ಧ್ವಧನುರಾಸನ’ಕ್ಕೆ ಸರಿದು, ಬಳಿಕ ‘ತಾಡಾಸನ’ಕ್ಕೆ ಬಂದು ನಿಲ್ಲಬೇಕು, ಅಭ್ಯಾಸಿಗೆ ’ವಿಪರೀತ ಚಕ್ರಾಸನ’ವು ಸಂಪೂರ್ಣವಾಗಿ ಕೈವಶವಾದಮೇಲೆ ಈ ವ್ಯಾಯಾಮವು  ‘ಊರ್ಧ್ ಧನುರಾಸನ’ವನ್ನು ಅಭ್ಯಸಸಿದ ಬಳಿಕ ಆನಂದದಾಯಕವಾಗಿ ಪರಿಗಣಿಸುತ್ತದೆ.

 ಪರಿಣಾಮಗಳು :-

    ಈ ಆಸನದ ಭಂಗಿಯನ್ನು ಮಣಿಕಟ್ಟುಗಳಿಗೆ ಬಲ ಕೊಡುವವು,  ಮಾತ್ರವಲ್ಲದೆ ಕಿಬ್ಬಟ್ಟೆಯೋಳಗಿನ ಮಾಂಸ ಖಂಡಗಳು ಕಿಬ್ಬೊಟ್ಟೆಯ ಮೇಲಣ ಪಾದದೋತ್ತಡದಿಂದ ಒಳ್ಳೆಯ ಅಂಗಮರ್ದನದ ಲಾಭವನ್ನು ಪಡೆಯುವುವು.