ಮನೆ ಮಾನಸಿಕ ಆರೋಗ್ಯ ಆತಂಕ ಮತ್ತು ಇತರ ಖಾಯಿಲೆಗಳು

ಆತಂಕ ಮತ್ತು ಇತರ ಖಾಯಿಲೆಗಳು

0

    ಆತಂಕ ಮನೋಬೇನೆ ಒಂದು ಬಗೆಯ ಅಲ್ಪಮಟ್ಟದ ಮಾನಸಿಕ ಅಸ್ವಸ್ಥತೆ ಎಂದು ತಿಳಿದುಕೊಂಡಿರಿ.ಆತಂಕ ಎಲ್ಲಾ ಬಗೆಯ ಮಾನಸಿಕ ಖಾಯಿಲೆಗಳಲ್ಲಿ ಕಾಣಿಸಿಕೊಳ್ಳಬಹುದು.ಅಲ್ಲದೇ ಯಾವುದೇ ಶಾರೀರಿಕ ಖಾಯಿಲೆಯ ಒಂದು ಭಾಗವಾಗಬಹುದು ಮುಖ್ಯ ಅಂಗಾಂಗಗಳಾದ ಹೃದಯ, ಮಿದುಳು, ಜನಾಂಗಗಳಿಗೆ ಸಂಬಂಧಿಸಿದ ಖಾಯಿಲೆಗಳಲ್ಲಿ,ಪ್ರಾಣಾಂತಕ ಖಾಯಿಲೆ ಕ್ಯಾನ್ಸರ್ ನಲ್ಲಿ ಆತಂಕ ಸಾಮಾನ್ಯವಾಗಿ ಕಂಡುಬರುತ್ತದೆ.ಶಸ್ತ್ರಾಕ್ರಿಯಾ ಚಿಕಿತ್ಸೆಗೆ ಒಳಗಾಗುವ ರೋಗಿಗಳಲ್ಲಿ ಆತಂಕ ಹೆಚ್ಚು.

Join Our Whatsapp Group

 ದೀರ್ಘಕಾಲದ ಆತಂಕ ಮತ್ತು ಶಾರೀರಿಕ ಖಾಯಿಲೆ :

      ಆತಂಕವು ಅಧಿಕ ಹೃದಯ ಬಡಿತ, ಉಸಿರಾಟದ ತೊಂದರೆ ಮುಂತಾದ ಹಲವು ಶಾರೀರಿಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ತಿಳಿದಿರಿ ಈ ಆತಂಕ ದೀರ್ಘಕಾಲ ಮುಂದುವರೆದರೆ, ಈ ಬದಲಾವಣೆಗೂ ಕಾಯಂ ಆಗಿ. ಹೃದಯ, ಶ್ವಾಸಕೋಶ,ಜಠರ ಮುಂತಾದ ಅಂಗಾಂಗಗಳ ಮೇಲೆ ಅಹಿತ ಪರಿಣಾಮಗಳನ್ನುಂಟು ಮಾಡುತ್ತವೆ. ತತ್ಪರಿಣಾಮವಾಗಿ ಬರುವ ಖಾಯಿಲೆಗಳನ್ನು ಮನೋ ದೈಹಿಕ ಕಾಯಿಲೆಗಳೆಂದು  ಕರೆಯುತ್ತಾರೆ.ಸಾಮಾನ್ಯವಾಗಿ ಕಾಣಬರುವ ಜಠರದ ಹುಣ್ಣು ಅಧಿಕ ರಕ್ತ ಒತ್ತಡ, ಅಸ್ತಮಾ, ರಮಾಟಾಯ್ಡ್ ಕೀಲು ನೋವು, ಬೊಜ್ಜು ಮುಂತಾದವು ಮನೋ ದೈಹಿಕ ಖಾಯಿಲೆಗಳು.

 ಚಿಕಿತ್ಸೆ

1. ಮನೋಚಿಕಿತ್ಸೆ : ನಮ್ಮ ಮನಸ್ಸಿನಲ್ಲಾಗುವಾಗ ಘರ್ಷಣೆಗಳು, ಅಭದ್ರತೆಯ ಭಾವನೆಗಳು ಆತಂಕಕ್ಕೆ ಮೂಲ ಎಂದು ಅರಿತಿರಿ ಹಲವು ಸಾರಿ, ಆತಂಕದಿಂದ ಬಳಲುತ್ತಿರುವ ವ್ಯಕ್ತಿಗೆ ಈ ಮಾನಸಿಕ ಘರ್ಷಣೆಗಳ ಅರಿವು ಇರುವುದಿಲ್ಲ.ಆದ್ದರಿಂದ ಆತಂಕದ ಚಿಹ್ನೆಗಳಿಗೆ ಕಾರಣ.ಅಸ್ತಿತ್ವದಲ್ಲಿ ಇರದ ಶರೀರ ಖಾಯಿಲೆ ಎಂದು ಆತ ಭಾವಿಸುತ್ತಾನೆ. ಸರಿಯಾದ ಔಷಧ ತಿಂದರೆ ವಾಸಿಯಾಗಿ ಬಿಡುತ್ತ ಎಂದು ಆತ ಆಶಿಸುತ್ತಾನೆ.ಆದರೆ ಈ ಮಾನಸಿಕ ಘರ್ಷಣೆಗಳನ್ನು ಗುರುತಿಸಿ ಅರ್ಥ ಮಾಡಿಕೊಳ್ಳುವ ತನಕ,ಅಭದ್ರತೆಯ ಭಾವನೆಗಳಿಗೆ ಸೂಕ್ತ ಪರಿಹಾರ ಹುಡುಕುವ ತನಕ,ವ್ಯಕ್ತಿ ತನ್ನ ಬಲಾ ಬಲಗಳನ್ನು ತಿಳಿದುಕೊಂಡು ತಕ್ಕ ಹೊಂದಾಣಿಕೆಯನ್ನು ಮಾಡಿಕೊಳ್ಳುವ ತನಕ, ಆತಂಕದ ಮನೋಬೇನೆ ಗುಣವಾಗುವುದಿಲ್ಲ. ಚಿಕಿತ್ಸೆ ಮಾಡುವಾಗ, ಮಾನಸಿಕ ತಜ್ಞರು ವ್ಯಕ್ತಿಯೊಡನೆ ವಿವರವಾಗಿ ಮಾತನಾಡಿ. ಈ ಎಲ್ಲಾ ವಿಚಾರಗಳ ಬಗ್ಗೆ ಕೂಲಂಕುಶವಾಗಿ ಪ್ರಶ್ನಿಸಿ, ಆತಂಕಕ್ಕೆ ಕಾರಣವಾದ ಅಂಶಗಳನ್ನು ಆತ ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ.ಮನಸ್ಸಿನ ಘರ್ಷಣೆಗಳಿಗೆ ಒಂದು ಪರಿಹಾರ ಹುಡುಕಲು, ತನ್ನಲ್ಲಿ ಭರವಸೆ ಮಾಡಿ ಮೂಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.ಇದನ್ನು ಮನೋಚಿಕಿತ್ಸೆ.

2. ಸಮೂಹ ಚಿಕಿತ್ಸೆ : ಆತಂಕದಿಂದ ಬಳಲುತ್ತಿರುವ ಸುಮಾರು ಎಂಟು 10 ಮಂದಿ ಒಟ್ಟಿಗೆ ಕುಳಿತು, ತಮ್ಮ ಆತಂಕಕ್ಕೆ ಕಾರಣವಿರಬಹುದಾದ ಅಂಶಗಳ ಬಗ್ಗೆ ಆಳವಾಗಿ ಚರ್ಚಿಸುತ್ತಾರೆ. ತಜ್ಞ ಚಿಕಿತ್ಸಕರ  ಮಾರ್ಗದರ್ಶನದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ ಈ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ.ಇದನ್ನು ಸಮೂಹ ಚಿಕಿತ್ಸೆ ಎಂದು ಕರೆಯಲಾಗಿದೆ ಈ ಬಗೆಯ ಚಿಕಿತ್ಸೆ ಮಿತವ್ಯಯಕಾರಿ. ಅಲ್ಲದೆ ವ್ಯಕ್ತಿಗೆ ತಾನು ಇನ್ನೊಬ್ಬರಿಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತದೆ.

3. ನಳವಳಿಕೆ ಚಿಕಿತ್ಸೆ : ನಡವಳಿಕೆ ತಜ್ಞರ ಪ್ರಕಾರ ಆತಂಕವು,,ವ್ಯಕ್ತಿಯು ತಪ್ಪಾಗಿ ಕಲಿತ ನಡವಳಿಕೆ. ಪ್ರಾರಂಭದಲ್ಲಿ ಒಂದು ವಸ್ತು ಅಥವಾ ಸನ್ನಿವೇಶ ಆತಂಕವನ್ನುಂಟು ಮಾಡುತ್ತದೆ.ನಂತರ ಅದೇ ವಸ್ತುವಿಗೆ ಅಥವಾ ಸನ್ನಿವೇಶಕ್ಕೆ ಅಥವಾ ಅವನಿಗೆ ಸಂಬಂಧಿಸಿದ್ದ ಇನ್ಯಾವುದೇ ವಸ್ತುವಿನ ತಮ್ಮ ದೇಹದ ಆತಂಕವನ್ನು ಪ್ರದರ್ಶಿಸಲು ಪ್ರಾರಂಭಿಸುತ್ತದೆ. ಈ ಅಹಿತ. ಬೇಡದ ನಡವಳಿಕೆಯನ್ನು ಅದು ತೋರದಂತೆ ಮಾಡಬೇಕು.ಸೂಕ್ತ ತರಬೇತಿಯಿಂದ ಇದು ಸಾಧ್ಯ ಇದೇ ನಡವಳಿಕೆ ಚಿಕಿತ್ಸೆ.ಆತಂಕದ ಚಿಕಿತ್ಸೆಗೆ ಸಾಮಾನ್ಯ ವಾಗಿ ಉಪಯೋಗಿಸುವ ನಡವಳಿಕೆ ಚಿಕಿತ್ಸೆ ಎಂದರೆ ಆರಾಮ ಚಿಂತೆಯಲ್ಲಿ ನಮ್ಮ ಶರೀರದ ಅಂಗಾಂಗಗಳೆಲ್ಲಾ ಪೂರ್ಣ ಸಡಿಲಗೊಂಡು, ಆರಾಮವಾಗಿರುವಂತೆ ತರಬೇತಿ ಕೊಡಲಾಗುತ್ತದೆ.ಆನಂತರ ವ್ಯಕ್ತಿ ಆತಂಕಕಾರಿ ಸನ್ನಿವೇಶದಲ್ಲೂ ಸಮಾಧಾನವಾಗಿರಲು ಸಾಧ್ಯವಾಗುತ್ತದೆ.

4. ಔಷಧಗಳು : ಆತಂಕವನ್ನು ಕಡಿಮೆ ಮಾಡಬಲ್ಲ  ಸಮಾಧಾನಕರಕ ಔಷಧಗಳಿವೆ ಇವನ್ನು ವೈದ್ಯರ ಸಲಹೆ, ಮಾರ್ಗದರ್ಶನದಲ್ಲಿ ಅವನು ಸೇವಿಸಬೇಕು ಪರಿಣಾಮಕಾರಿ ಗುಣ ಕಾಣಲು, ಈ ಔಷಧಗಳನ್ನು ಸೇವಿಸುವುದರ ಜೊತೆಗೆ ಮನೋಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು. ಈ ಔಷಧಗಳನ್ನು ವೈದ್ಯರ ಅನುಮತಿ ಇಲ್ಲದೆ ಬಹಳ ಕಾಲ ಸೇವಿಸುವುದು ಸರಿಯಲ್ಲ 5.  ಇತರ ಚಿಕಿತ್ಸೆಗಳು : ಸಂಗೀತ,ನೃತ್ಯ, ಕಲೆ,ನಮ್ಮ ಮನಸ್ಸಿಗೆ ಶಾಂತಿ ಸಮಾಧಾನವನ್ನು ತರಬಲ್ಲವಾದ್ದರಿಂದ ಆತಂಕದ ಚಿಕಿತ್ಸೆಯಲ್ಲಿ ಅವನು ಬಳಸಲಾಗುತ್ತಿದೆ.ಯೋಗ ಅಭ್ಯಾಸ,ಧ್ಯಾನ (ಟಿ, ಎಂ, ವಿಪಶ್ಯನ. ಯೋಗ ನಿದ್ರೆ  ಸುದರ್ಶನ ಕ್ರಿಯಾಯೋಗ, ಎಸ್ ಎಸ್ ವೈ ಇಂತ್ಯಾದಿ)ದಿಂದ ಆತಂಕವು ಕಡಿಮೆಯಾಗುವುದೆಂದು ಹೇಳಲಾಗಿದೆ.