ಮನೆ ಜ್ಯೋತಿಷ್ಯ ಪಂಚ ಫಲ ದರ್ಪಣ

ಪಂಚ ಫಲ ದರ್ಪಣ

0

 ಶುಭ ಫಲದ ಕಾರಣಗಳು

 ಗುರುವಾರ             1

 ಷಷ್ಠಿ ತಿಥಿ                1

 ಪುಷ್ಯ ನಕ್ಷತ್ರ             1

 ತೈತು ಕರಣ               1

 ವೈಶಾಖ ಮಾಸ           1

 ಉದಯಾದಿ 7:00      1

ಮಧ್ಯಾಹ್ನ

 ತಂದೆ ತಾಯಿಯ ಗೃಹ   1

      ಅಂತೂ ಒಟ್ಟಿಗೆ        —

                                      7

 ಅಶುಭ ಫಲದ ಕಾರಣಗಳು

 ಗಂಡ ಯೋಗ              1

 ಕೆಂಪು ವರ್ಣದ ವಸ್ತ್ರ    1

 ಮೇಷ ಲಗ್ನ                   1

           ಅಂತೂ ಒಟ್ಟಿಗೆ   —

                                      3

Join Our Whatsapp Group

     ಮೇಲೆ ವಿವರಿಸಿದಂತೆ ನೋಡಲಾಗಿ ಶುಭಕಾರಗಳೇ  ಹೆಚ್ಚಾಗಿವೆ ಮತ್ತು ಅಶುಭ ಫಲಗಳು ಕಡಿಮೆ ಇವೆ. ಆದ್ದರಿಂದ ಯಾವ ಶಾಂತಿಯನ್ನೂ ಮಾಡಬೇಕಾಗಿಲ್ಲವೆಂದು ನಿರ್ಣಯಿಸಿ ಹೇಳಬೇಕು.

     ಜ್ಯೋತಿಷ್ಯರು ಪ್ರಥಮ ಋತುಮತಿಯಾದ ಸ್ತ್ರೀಯಳ ಶುಭಾಶುಭ ಫಲಗಳನ್ನು ನಿರ್ಣಯಿಸುವಾಗ ಪಂಚಾಂಗದಲ್ಲಿ ವಾರ,ತಿಥಿ,ನಕ್ಷತ್ರ,ಯೋಗ,ಕರಣಗಳು,ಹೆಚ್ಚು ಕಡಿಮೆ ವೇಳೆಯನ್ನು ಅನುಭವಿಸುವುದನ್ನು ಒಳ್ಳೇ ಜಾಣತನದಿಂದ ನಿರ್ಣಯಿಸಬೇಕು. ಗ್ರಹಗಳು ಹೆಚ್ಚು ಕಾಲವನ್ನು ಅನುಭವಿಸುವ ವಾರ,ತಿಥಿ,ಯೋಗ, ಕರಣ, ನಕ್ಷತ್ರಗಳನ್ನೇ ಹುಡುಕಿ ತೆಗೆದು ನಿರ್ಣಯಿಸಬೇಕು.

       ಇನ್ನೊಂದು ಉದಾಹರಣೆಯಿಂದ ಸ್ತ್ರೀಯಳು ಪ್ರಥಮ ಋತುಮತಿಯಾದ ಶುಭಾ ಶುಭ ಫಲವನ್ನು ನೋಡುವುದು ಹೇಗೆಂದರೆ ತಿಥಿಗೆ ಒಂದು ಗುಣ, ನಕ್ಷತ್ರಕ್ಕೆ 4 ಗುಣ,ವಾರಕ್ಕೆ 6 ಗುಣ,ಮಾಸಕ್ಕೆ ಎಂಟು ಗುಣ, ಧರಿಸಿಕೊಂಡಿದ್ದ ವಷ್ಟಕ್ಕೆ 100 ಗುಣಗಳನ್ನು ಹಿಡಿಯಬೇಕು.ತಾತ್ಪರ್ಯವೆಂದರೆ ಪ್ರಥಮ ಋತುಮತಿಯಾದ ತಿಥಿಯ ಪಲಕಿಂತಲೂ ನಕ್ಷತ್ರ ಫಲ ಹೆಚ್ಚಿನದು ನಕ್ಷತ್ರ ಪಲಕ್ಕಿಂತಲೂ ವಾರ ಫಲ ಹೆಚ್ಚಿನದು. ವಾರಪಲ  ಕ್ಕಿಂತಲೂ, ಮಾಸ ಫಲ ಹೆಚ್ಚಿನ ಫಲವು,ಮಾಸ ಪಾಲಕ್ಕಿಂತಲೂ ಧರಿಸಿಕೊಂಡಿದ ವಸ್ತ್ರಪಲ್ಲವೂ ವಿಶೇಷ ತೀರ ಹೆಚ್ಚಿನ ಶುಭಾ ಶುಭ ಫಲವನ್ನು ನಿರ್ವಹಿಸುವದು. ಆದ್ದರಿಂದ ಇಲ್ಲಿ ಋತುವಾದ ಸ್ತ್ರೀಯಳು ಧರಿಸಿಕೊಂಡ ವಸ್ತ್ರದ ವಿಚಾರವನ್ನು ಮುಖ್ಯ ಮುಖ್ಯವಾಗಿ ನೋಡಿಕೊಳ್ಳಬೇಕು.

 ಋತುದೋಷ ಶಾಂತಿಗೆ ವಾರದ ಅಧಿಪತಿ ದೇವತೆಗಳು :

 ಶ್ಲೋಕ : ಶಿವೋದುರ್ಗಾ ಗುಹೋ ವಿಷ್ಣುಃ ಬ್ರಹ್ಮೇಂದ್ರಃ ಕಾಲ ಸಂಜ್ಞಿಕಃ |

 ಸೂರ್ಯಾದೀನಾಂ  ಕ್ರದೇವತೆ ಸ್ವಾಮಿನ ಪರಿಕೀರ್ತಿತಾಃ ||

 ಅರ್ಥ: ರವಿವಾರಕ್ಕೆ ಶಿವ,ಸೋಮವಾರಕ್ಕೆ ಪಾರ್ವತಿ, ಮಂಗಳವಾರಕ್ಕೆ ಷಣ್ಮುಖ, ಬುಧವಾರಕ್ಕೆ ವಿಷ್ಣು, ಗುರುವಾರಕ್ಕೆ ಬ್ರಹ್ಮ,ಶುಕ್ರವಾರಕ್ಕೆ ಇಂದ್ರ ಹಾಗೂ ಶನಿವಾರಕ್ಕೆ ಯಮ ಹೀಗೆ ಅಧಿದೇವತೆಗಳಾಗುತ್ತಾರೆ.

  ಋತು ದೋಷಃ ತಿಥಿಗಳಿಗೆ ಅಧಿದೇವತೆಗಳು :

 ಶ್ಲೋಕ :

 ತಿಥೀಶಾವಹ್ನಿ ಧಾತ್ರಾಂಬಾ ಹೇರಂಬೋರಗ ಷಣ್ಮುಖಾಃ ||

 ರವೀಶಾಂಬಾ ಯಮೋವಿಶ್ವೆ ಹರಿಸ್ಮರ ಶಿವೇಂದವಃ ||

 ಅಮಾವಾಸ್ಯಾ ತಿಥೇರೀಶಾಃ ಪಿತರಃ ಸಂಪ್ರಕೀರ್ತಿತಾಃ ||

 ಅರ್ಥ: ಪ್ರತಿಪದಕ್ಕೆ ಅಗ್ನಿ,ದ್ವಿತೀಯಕ್ಕೆ ಬ್ರಹ್ಮ, ತೃತಿಯಕ್ಕೆ ಪಾರ್ವತಿ,ಚೌತಿಗೆ ಗಣೇಶ,ಪಂಚಮಿಗೆ ಸರ್ಪ, ಷಷ್ಟಿಗೆ ಷಣ್ಮುಖ,ಸಪ್ತಮಿಗೆ ಸೂರ್ಯ,ಅಷ್ಟಮಿಗೆ ಶಿವ, ನವಮಿಗೆ ಪಾರ್ವತಿ, ದಶಮಿಗೆ ಯಮ ,ಏಕಾದಶಿಗೆ ವಿಶ್ವಕರ್ಮ,ದ್ವಾದಸಿಗೆ ವಿಷ್ಣುತ್ರ ಯೋದಶಿಗೆ ಕಾಮದೇವ,ಚತುರ್ದಶಿಗೆ ಶಿವ, ಪೂರ್ಣಮೆಗೆ ಚಂದ್ರ ಅಮಾವಾಸ್ಯೆಯ ಮನೆಯ ದೇವರುಗಳು ಈ ಪ್ರಕಾರ ಅಧಿಪತಿಗಳಾಗಿರುವರು.