ಮನೆ ರಾಜ್ಯ ಶ್ರೀರಂಗಪಟ್ಟಣ ದಸರಾ: ಶ್ರೀರಂಗನಾಥ ದೇಗುಲದ ಎದುರು 800 ಮಂದಿ ಯೋಗಾಸನ

ಶ್ರೀರಂಗಪಟ್ಟಣ ದಸರಾ: ಶ್ರೀರಂಗನಾಥ ದೇಗುಲದ ಎದುರು 800 ಮಂದಿ ಯೋಗಾಸನ

0

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀ ರಂಗವೇದಿಕೆಯಲ್ಲಿ ಶ್ರೀರಂಗಪಟ್ಟಣ ದಸರಾ-2024 ರ ಅಂಗವಾಗಿ ನಡೆದ ಯೋಗ ದಸರಾ ‘ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

Join Our Whatsapp Group

ಮಂಡ್ಯ,ಮೈಸೂರು ಭಾಗದಿಂದಲೂ ಆಗಮಿಸಿದ್ದ ಯೋಗ ಪಟುಗಳು ಯೋಗ ಪ್ರದರ್ಶನವನ್ನು ನೀಡಿ ಗಮನ ಸೆಳೆದರು.

ಯೋಗದಿಂದ ಮನುಷ್ಯನ ವಯಸ್ಸು ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯೋಗ ಚಟುವಟಿಕೆ ಉದ್ಘಾಟಿಸಿ ಪಾಂಡವಪುರ ಉಪವಿಭಾಗಾಧಿಕಾರಿ  ಶಿವಮೂರ್ತಿ ಸಲಹೆ ನೀಡಿದರು.ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ರಂಗಸ್ವಾಮಿ, ಶ್ರೀರಂಗಪಟ್ಟಣ ಪುರಸಭೆ ಮುಖ್ಯಧಿಕಾರಿ ರಾಜಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್ ಹೆಚ್, ಎಸ್.ಪಿ.ವೈ. ಎಸ್.ಎಸ್ ನ ಜಿಲ್ಲಾ ಸಂಚಾಲಕ ಶಂಕರ್ ನಾರಾಯಣಶಾಸ್ತ್ರೀ, ಮಂಡ್ಯ ವಿವೇಕಾನಂದ ಯೋಗ ಕೇಂದ್ರದ ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುಮಾರು 800 ಮಂದಿ ಭಾಗವಹಿಸಿ ಸೂರ್ಯ ನಮಸ್ಕಾರ, ಭುಜಂಗಾಸನ, ವಜ್ರಾಸನ, ತಡಾಸನ, ಅರ್ಧಚಕ್ರಾಸನ, ಉಷ್ಟ್ರಾಸನ, ಧನುರಾಸನ, ಶವಾಸನ, ಪ್ರಣಾಯಾಮ, ಧ್ಯಾನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಮಕ್ಕಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಂಗಪಟ್ಟರ ದಸರಾದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.

ಒಂದು ಗಂಟೆಗೂ ಹೆಚ್ಚು ಕಾಲ ಪ್ರದರ್ಶನ ನಡೆಯಿತು. ಇದೇ ಸಂದರ್ಭದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ   ಡಾ ಕಲಾದರ್,  ಪತಂಜಲಿ ಸಂಸ್ಥೆಯ ಯೋಗ ಶಿಕ್ಷಕ ರವಿ ವಿ. ವಿ, ಯೋಗ ಶಿಕ್ಷಕ ಚಂದ್ರು, ಬಂಡೂರಿನ  ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯೆ ಶೋಭಾ ಆರ್ ಜೆ ಅವರನ್ನು ಸನ್ಮಾನಿಸಲಾಯಿತು.