ಮನೆ ಮನೆ ಮದ್ದು ತುಟಿ ಒಡೆದಿರುವಾಗ

ತುಟಿ ಒಡೆದಿರುವಾಗ

0

1. ಹಾಲಿನ ಕೆನೆಯನ್ನು ತುಟಿಗೆ ಹಚ್ಚಿಕೊಂಡು ದಿನವೂ ನಿಧಾನವಾಗಿ ಸವರುತ್ತಿದ್ದರೆ ತುಟಿ ಒಡೆಯುವುದು ನಿಲ್ಲುವುದು.

Join Our Whatsapp Group

2. ಬೆಣ್ಣೆಯಲ್ಲಿ ಒಂದಿಷ್ಟು ಉಪ್ಪಿನ ಪುಡಿ ಬೆರೆಸಿ ತುಟಿಗಳಿಗೆ ಲೇಪಿಸುವುದರಿಂದಲೂ ತುಟಿ ಒಡೆಯುವುದು ನಿಲ್ಲುವುದಲ್ಲದೆ ಮೃದುತ್ವ ಹೆಚ್ಚುವುದು

 ಅತಿಸಾರ :

1. ದಂಟಿನ ಸೊಪ್ಪನ್ನು ಅಡಿಗೆಯಲ್ಲಿ ಚೆನ್ನಾಗಿ ಬಳಸುವುದರಿಂದ ಅತಿಸಾರ ರೋಗ ಶೀಘ್ರದಲ್ಲೇಯೇ ನಿವಾರಣೆ ಆಗುವುದು.

2. ಚೆನ್ನಾಗಿ ಒಣಗಿಸಿದ ಓಮು ಕಾಳುಗಳನ್ನು ಚೂರ್ಣಗೊಳಿಸಿ, ಒಂದು ಟೀ ಸ್ಪೂನ್ ನಷ್ಟು ಚೂರ್ಣವನ್ನು ಬಟ್ಟಲು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಅತಿಸಾರ ಕಾಯಿಲೆ ದೂರ ಆಗುವುದು.

3. ಮಜ್ಜಿಗೆಯಲ್ಲಿ ಹುಣಸೆ ಗೊಜ್ಜನ್ನು ಬೆರೆಸಿ, ತುಂಬಾ ಮಾಗಿದ ಬಾಳೆಹಣ್ಣು ಗೊಟಾಕಾಯಿ ಕುಡಿಯುವುದರಿಂದಲೂ ಅತಿಸಾರ ರೋಗ ನಿವಾರಣೆ ಆಗುವುದು.

4. ತುರಿದ ಸೇಬುಹಣ್ಣನ್ನು ಹಾಲಿನಲ್ಲಿ ಚೆನ್ನಾಗಿ ಬೆರೆಸಿ, ದಿನವೂ ಮೂರು ಬಾರಿ ಒಂದೆರಡು ದಿನಗಳು ಸೇವಿಸುತ್ತಿದ್ದರೆ ಅತಿಸರ ರೋಗಬಾರದು.