ಮನೆ ಮನರಂಜನೆ ದ್ವಿಪಾದ ಕೌಂಡಿನ್ಯಾಸನ

ದ್ವಿಪಾದ ಕೌಂಡಿನ್ಯಾಸನ

0

 ದ್ವಿಪಾದ ಎಂದರೆ ಎರಡೂ ಪಾದಗಳು ಕೌಂಡಿಲ್ಯ ನೆಂಬುದು ವಸಿಷ್ಟಮುನಿಯ ವಂಶಕ್ಕೆ ಸೇರಿದ ಒಬ್ಬ ಪ್ರಖ್ಯಾತ ಮುನಿ ಅಲ್ಲದೇ ಈತನು ಆ ಗೋತ್ರಕ್ಕೆ ಮೂಲ ಪುರುಷ ಈ ಆಸನವನ್ನು ಈ ಮುನಿಯ ಹೆಸರಿಗೆ ಮೀಸಲಾಗಿದೆ.

Join Our Whatsapp Group

 ಅಭ್ಯಾಸ ಕ್ರಮ :

1. ಮೊದಲು ‘ಸಾಲಂಬಶೀರ್ಷಾಸನ’ವನ್ನು ಮಾಡಬೇಕು.

2. ಬಳಿಕ,ಉಸಿರನ್ನು ಹೊರದೂಡಿ ಎರಡು ಕಾಲುಗಳನ್ನು ನೇರವಾಗಿ ಜೊತೆಯಲ್ಲಿಯೇತಗ್ಗಿಸುತ್ತ ಅವನ್ನು ನೆಲಮಟ್ಟಕ್ಕೆ ಸಮಾಂತರ ಮಾಡಿ ಆ ಸ್ಥಿತಿಯಲ್ಲಿ ಸ್ವಲ್ಪ ಕಾಲ ನೆಲೆಸಿ ಕೆಲವು ಸಲ ಉಸಿರಾಟ ನಡೆಸಬೇಕು.

3. ಮತ್ತೆ ಉಸಿರನ್ನು ಹೊರಕ್ಕೆ ಬಿಟ್ಟು ಮುಂಡವನ್ನು ಬಲ ಪಕ್ಕಕ್ಕೆ ಸ್ವಲ್ಪ ಓರೆಯಾಗುವಂತೆ ಹೊರಳಿಸಿ ಎರಡೂ ಕಾಲುಗಳನ್ನು ಬಲ ಗಡೆಗೆ ಸರಿಸಬೇಕು. ಬಳಿಕ ಎರಡೂ ಕಾಲುಗಳನ್ನು ಜೊತೆಯಲ್ಲಿಯೇ ಬಲತೋಳಿನ ಮೇಲಿಳಿರಸಿ ಮಂಡಿಯ ಮೇಲ್ಭಾಗದ ಎಡತೊಡೆಯ ಹೊರ ಭಾಗವನ್ನು ಆದಷ್ಟು ಕಂಕುಳಿನ ಬಳಿಗೆ ಬರುವಂತೆ ಬಲಗೈ ಮೇಲ್ದೋಳಿನ ಹಿಂಬದಿಗೆ ಒದಗಿಸಿಡಬೇಕು

4. ಅನಂತರ ಸಮತೋಲನದಲ್ಲಿದ್ದು ಕೆಲವು ಸಲ ಉಸಿರಾಟ ನಡೆಸಬೇಕು. ಆ ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಅಂಗೈಗಳೆರಡನ್ನೂ ನೆಲದ ಮೇಲೆ ಒತ್ತಿಟ್ಟು ತಲೆಯನ್ನು ನೆಲದಿಂದ ಮೇಲೆತ್ತಬೇಕು.ಆಮೇಲೆ ಮುಂಡವನ್ನು ಮೇಲೆತ್ತಿ ಮುಂದೂಡಬೇಕು ಕಾಲುಗಳನ್ನು ಆಸನದಲ್ಲಿ ನೆಲಕ್ಕೆ ಹೆಚ್ಚು ಕಡಿಮೆ ಸಮಾಂತರ ಮಾಡಿ ನಿಲ್ಲಿಸುವ ಭಂಗಿಗಳೂಳಗೆ ಇದು ಕೊನೆಯ ಹಂತ ಆಗ ಮುಂಡವನ್ನು ತಿರುಚಿಡುವುದರಿಂದ ಉಸಿರಾಟವು ವೇಗವಾಗಿ ನಡೆಯುತ್ತದೆ ಈ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಕಾಲ ಅಂದರೆ 10 20 ಸೆಕೆಂಡುಗಳ ಕಾಲ ಸಮತೋಲನ ಮಾಡಿ ಅದರಲ್ಲಿ ನೆಲೆಸಬೇಕು. ಈ ಭಂಗಿಯಲ್ಲಿ ಸ್ವತಂತ್ರವಾಗಿ ನೆಲೆಸಿರುವಂತೆ ತೋರುವ ಎಡಭುಜ ಮತ್ತು ಎಡ ತೋಳುಗಳ ಮೇಲೆ ಒತ್ತಡವು ಹೆಚ್ಚಾಗಿರುತ್ತದೆ.

5. ತರುವಾಯ ಮಂಡಿಗಳನ್ನು ಭಾಗಿಸಿ ತಲೆಯನ್ನು ನೆಲದ ಮೇಲೆ ಒರಗಿಸಿ ಮತ್ತೆ ‘ಸಾಲಂಬಶಿರ್ಷಾಸನ’  2ದಲ್ಲಿ  ಮೇಲಿರಬೇಕು ಈ ಆಸನದ ಭಂಗಿಯಲ್ಲಿ ಸ್ವಲ್ಪಕಾಲ ನೆಲೆಸಿ, ಈ ಭಂಗಿಯನ್ನು ಎಡಗಡೆಗೂ ಮೇಲೆ ವಿವರಿಸಿದ ಕ್ರಮವನ್ನನು ಸರಿಸಿ ಅಭ್ಯಸಸಬೇಕು .ಇದರಲ್ಲಿ ‘ಎಡ’, ‘ಬಲ’ ಪಾದಗಳಿರುವೆಡೆಯಲ್ಲಿ ಕ್ರಮವಾಗಿ ‘ಬಲ’ ‘ಎಡ’ ಪಾದಗಳನ್ನು ಅಳವಡಿಸಿ ಅದರಂತೆ ನಡೆಯಬೇಕು. ಇಲ್ಲಿ ಬಲತೊಡೆಯು ಎಡಗೈ ಮೇಲ್ದೋಳಿನ ಹಿಂಬದಿಯಲ್ಲಿ ಒರಗಿರುತ್ತದೆ.  ಎರಡೂ ಕಡೆಯ ಭಂಗಿಗಳಲ್ಲಿ ನೆಲೆಸುವ ಕಾಲ ಸಮವಾಗಿರಬೇಕು ಇದಾದ ಮೇಲೆ ಮತ್ತೆ ಶಾಲಾ ಸಾಲಂಬಶಿರ್ಷಾಸನ ಕ್ಕೆ ಬರಬೇಕು.

6. ಈ ಆಸನದ ಭಂಗಿಯನ್ನು ಕೊನೆಮಾಡಲು ಕಾಲುಗಳನ್ನು ನೆಲದ ಮೇಲಿಳಿಸಿ ಬಳಿಕ ವಿಶ್ರಮಿಸಿಕೊಳ್ಳಬೇಕು.ಇಲ್ಲವೆ‘ಊರ್ಧ್ವಧನುರಾಸನ’ವನ್ನು ಮಾಡಿ ಮುಗಿಸಿ “ತಾಡಾಸನಕ್ಕೆಬಂದು ನಿಲ್ಲಬೇಕು.‘ವಿಪರೀತ

ಚಕ್ರಾಸನ’ದಿಂದ ಅಭ್ಯಾಸಿಯು ನೈಪುಣ್ಯವನ್ನು ಗಳಿಸಿದಾಗ  ಈ ಆಸನದಿಂದಾಗುವ ಊರ್ಧ್ವ ಅಂಗಸಾಧನೆಯು ಧನುರಾಸನವನ್ನು ಅಭ್ಯಸಿದ ಬಳಿಕ ಮನೋಲ್ಲಾಸನದ ವ್ಯಾಯಾಮಕ್ಕಾಗಿ ಪರಿಣಮಿಸುತ್ತದೆ

 ಪರಿಣಾಮಗಳು

    ಈ ಆಸನದ ಭಂಗಿಯು ಕಿಬ್ಬೊಟ್ಟೆಯ ಅಂಗಗಳಿಗೆ ಲವಲವಿಕೆಯನ್ನು ನೀಡುತ್ತದೆ, ಮಲಕೋಶವು ತನ್ನ ಕಾರ್ಯ ವನ್ನು ಸರಿಯಾಗಿ ನಡೆಯುವಂತೆ ಮಾಡುತ್ತಲ್ಲದೆ ಅದರಲ್ಲಿ ವಿಷ ಜೀವಾಣು ಉತ್ಪತ್ತಿಯಾಗುತ್ತದೆ ತಡೆಗಟ್ಟುತ್ತದೆ ಈ ಆಸನದಲ್ಲಿ ಕಾಲುಗಳನ್ನು ಚಾಚಿ ಸಮತೋಲನ ಸ್ಥಿತಿಯಲ್ಲಿಡುವುದಕ್ಕೆ ಸಾಕಷ್ಟು ಅಭ್ಯಾಸದ ಅನುಭವಬೇಕು ಅಲ್ಲದೆ ಈ ಆಸನ ಅಭ್ಯಾಸದಿಂದ ಬೆನ್ನೆಲುಬು, ಪಕ್ಕಕಾಗುವ ಚಲನ ವಲನಗಳ ಮೂಲಕ ಹೆಚ್ಚು ಸ್ಥಿತಿ ಸ್ಥಾಪಕತ್ವವನ್ನು ಗಳಿಸುತ್ತದೆ ಮತ್ತು ತೋಳುಗಳು ಹೆಚ್ಚು ಬಲಗೊಳ್ಳುತ್ತವೆ.