ಮನೆ ಜ್ಯೋತಿಷ್ಯ ಚರಣದ ಸ್ವಾಮಿ ಫಲ

ಚರಣದ ಸ್ವಾಮಿ ಫಲ

0

ಪ್ರಥಮ ಚರಣದ ಸ್ವಾಮಿ ರಾಹು ಗುರು ಜಾತಕನನ್ನು ಬಹಿರ್ಮುಖಿಯನ್ನಾಗಿ ಮಾಡುತ್ತಾರೆ.

Join Our Whatsapp Group

ದ್ವಿತೀಯ ಚರಣದ ಸ್ವಾಮಿ ರಾಹು ಶನಿ ಜಾತಕರಿಗೆ ಗಂಭೀರತೆಯನ್ನು ಪ್ರಧಾನಿಸುತ್ತಾರೆ.      ತೃತೀಯ ಚರಣದ ಸ್ವಾಮಿ ರಾಹು ಶನಿ ಜಾತಕನಿಗೆ ಹೊಸ ಹೊಸ ಸಂಶೋಧನೆಗಳ ಅಥವಾ ಆಂದೋಲನದ ಪ್ರವೃತ್ತಿಯನ್ನು ಪ್ರಾದಾನಿಸುತ್ತಾರೆ.

ಚತುರ್ಥ ಚರಣದ ಸ್ವಾಮಿ ರಾಹು ಗುರು ಭೌದ್ಧಿಕತೆಯಲ್ಲಿ ಕುರೂರತೆ ಉಂಟು ಮಾಡಿ,ಭಾವಾತ್ಮಕ ಪ್ರವೃತ್ತಿಯಲ್ಲಿ ವೃದ್ಧಿ ಮಾಡುತ್ತಾರೆ.

 ಆರ್ದ್ರ ನಕ್ಷತ್ರದಲ್ಲಿ ಕಾರ್ಯಾ ಮತ್ತು ಅನ್ಯ ಅಂಶಗಳು :

    ಈ ನಕ್ಷತ್ರದಲ್ಲಿ ಜ್ವರ ಬಂದರೆ ಒಂದು ತಿಂಗಳು ಕಷ್ಟವಾಗುತ್ತದೆ.ಶಾಸ್ತ್ರದ ಪ್ರಕಾರ ಶಾಂತಿ ಮಾಡಿದರೆ ಒಂದು ತಿಂಗಳಲ್ಲಿ ಆರೋಗ್ಯವಾಗುತ್ತದೆ.ಈ ನಕ್ಷತ್ರದಲ್ಲಿ ಉತ್ಪಾತ ಕಂಡರೆ ಸುಭಿಕ್ಷೆಯಾಗುತ್ತದೆ.ಚಂದ್ರ ಸೂರ್ಯರಿಗೆ ಪರಿವೇಶ ಉಂಟಾದರೂ ಕಾಮನಬಿಲ್ಲು ಮಾಡಿದರೂ ಮಳೆಯಾಗುತ್ತದೆ.ಕನ್ಯೆ ಋತುಮತಿ ಯಾದರೆ ದುಃಖ ಪಡುತ್ತಾಳೆ. ಶತ್ರುಗಳನ್ನು ಸೆರೆ ಹಿಡಿಯುವುದು, ಬೆಂಕಿಯಲ್ಲಿ ಮಾಡತಕ್ಕ ಕಾರ್ಯಗಳು, ಹಾಲು ಕರೆಯುವುದು, ಅಸ್ತ್ರ ವಿದ್ಯಾಭ್ಯಾಸ ಗರಡಿ ಸಾಧನೆ,ಕಳ್ಳರ ಪತ್ತೆ,ಪಿಶಾಚಿ ಬಿಡಿಸುವುದು ಸ್ಮಶಾನದ ಪ್ರವೇಶ,ಶಿವಪ್ರತಿಷ್ಠೆ ಶಾಬರಮಂತ್ರ ಸಾಧನೆ ಪ್ರಯೋಗ, ಇಂಥ ದಾರುಣ ಕಾರ್ಯಗಳು ಸಫಲವಾಗುತ್ತವೆ.

     ಜಾತಕರು ವ್ಯಾಪಾರದಲ್ಲಿ ಹಣ, ಕಳೆದುಕೊಳ್ಳಬಹುದು.ಕೊಂಡು ಮಾರುವುದರಲ್ಲಿ ಬುದ್ಧಿವಂತರು. ಮಾಡಿದ ಉಪಕಾರವನ್ನು ಮರೆಯುತ್ತಾರೆ.ಒಂದನೇ ಚರಣದಲ್ಲಿ ಜನಿಸಿದ ಜಾತಕರು ದಯವಂತರು, ಗುಣವಂತರು, ಎರಡನೇ ಚರಣದಲ್ಲಿ ಕಲ್ಲು ಕೆಲಸ ಮಾಡಿಸುವವರು. ಮೂರನೇ ಚರಣದಲ್ಲಿ ಅಲಸಿ ಮುಂಗೋಪಿ ಮತ್ತು ನಾಲ್ಕನೇ ಚರಣದಲ್ಲಿ ಬುದ್ಧಿವಂತ ಮತ್ತು ದೂರಾಲೋಚನೆ ಮಾಡುವವರು. ಜನ್ಮಾದಿಯಲ್ಲಿ ರಾಹುದೆಶೆ ಹದಿನೆಂಟು ವರ್ಷ ; ವರ್ಷ ಬುಕ್ತಿ ಎರಡು ತಿಂಗಳು 12 ದಿನ. 1, 7, 18,19, 50,ನೇ ವರ್ಷಗಳಲ್ಲಿ ಅಪಮೃತ್ಯು. ಇದೆಲ್ಲದರಿಂದ ಪಾರಾದರೆ 71 ವರ್ಷ ಪಾರಾಮಾಯುಷ್ಯವಾಗುತ್ತದೆ.