ಮನೆ ರಾಜ್ಯ ಕೇರಳ ಲಾಟರಿಯಲ್ಲಿ 25 ಕೋಟಿ ಗೆದ್ದ ಪಾಂಡವಪುರದ ಯುವಕ

ಕೇರಳ ಲಾಟರಿಯಲ್ಲಿ 25 ಕೋಟಿ ಗೆದ್ದ ಪಾಂಡವಪುರದ ಯುವಕ

0

ಪಾಂಡವಪುರ: ದೇವರು ಒಮ್ಮೆ ಕೈಹಿಡಿದರೆ ಸಾಕು ಸಾಯೋವರೆಗೂ ಬದುಕಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆ ಇದೆ.ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಸ್ಕೂಟರ್ ಮೆಕ್ಯಾನಿಕ್ ಒಬ್ಬನಿಗೆ ಕೇರಳ ರಾಜ್ಯದ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದಿದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

Join Our Whatsapp Group


ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆ ರಸ್ತೆಯ ನಿವಾಸಿ ಆಲ್ತಾಫ್ ಪಾಷ ಲಾಟರಿಯಿಂದ ಕೋಟ್ಯಾಧಿಪತಿಯಾದ ಅದೃಷ್ಟವಂತ.ಇತ್ತೀಚೆಗೆ ಕಾರ್ಯನಿಮಿತ್ತ ಕೇರಳಕ್ಕೆ ತೆರಳಿದ ವೇಳೆ ಕೇರಳ ರಾಜ್ಯದ ೫೦೦ ರೂ. ಮೌಲ್ಯದ ಲಾಟರಿ ಖರೀದಿಸಿದ್ದ ಅಲ್ತಾಫ್ ಫಾಷ ಅವರಿಗೆ ಅ.೯ ರಂದು ಅಲ್ಲಿನ ಸರ್ಕಾರ ನಡೆಸಿದ ಲಾಟರಿ ಡ್ರಾನಲ್ಲಿ ಬಂಪರ್ ಬಹುಮಾನವಾಗಿ ಬರೋಬ್ಬರಿ ೨೫ ಕೋಟಿ ಹೊಡೆದಿದೆ. ಪಟ್ಟಣದ ಮಂಡ್ಯ ರಸ್ತೆಯ ವೆಂಕಟೇಶ್ವರ ಕಾಂಫ್ಲೆಕ್ಸ್ ಪಕ್ಕದಲ್ಲಿ ಸಣ್ಣ ಪೆಟ್ಟಿಗೆಯಲ್ಲಿ ಗ್ಯಾರೇಜ್ ನಡೆಸಿಕೊಂಡು ಗಳಿಸಿದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಮ್ಯಾಕನಿಕ್‌ಗೆ ಅದೃಷ್ಟದ ಬಾಗಿಲು ತೆಗೆದಿದ್ದು ಕೋಟ್ಯಾಧಿಪತಿಗಳ ಸಾಲಿನಲ್ಲಿ ಬಂದು ನಿಂತಿದ್ದಾರೆ.


೨೫ ಕೋಟಿ ಬಂಪರ್ ಬಹುಮಾನದಲ್ಲಿ ಆದಾಯ ತೆರಿಗೆ ಇನ್ನಿತರ ಎಲ್ಲಾ ರೀತಿಯ ಟ್ಯಾಕ್ಸ್ಗಳು ಕಡಿತವಾಗಿ ೧೨.೮ ಕೋಟಿ ಹಣ ಅಲ್ತಾಫ್‌ಗೆ ಕೈ ಸೇರಲಿದೆ. ಕೇರಳದಲ್ಲಿ ಪ್ರತಿವರ್ಷ ಓಣಂ ಮತ್ತು ತಿರು ಓಣಂ ಪ್ರಯುಕ್ತ ವಿಶೇಷ ಲಾಟರಿ ಟಿಕೆಟ್ ಮರಾಟ ಮಾಡಲಾಗುತ್ತದೆ.ಅದರಂತೆ ಕಳೆದ ತಿಂಗಳು ಅಲ್ತಾಫ್ ಓಣಂ ವಿಶೇಷ ಲಾಟರಿ ಟಿಕೆಟ್ ಖರೀದಿಸಿದ್ದರು. ಲಾಟರಿ ವಿಜೇತರಿಗೆ ಬಂಪರ್ ಬಹುಮಾನ ೨೫ ಕೋಟಿ, ೨೦ ಮಂದಿಗೆ ತಲಾ ಒಂದು ಕೋಟಿ ೨೦ ಮಂದಿಗೆ ತಲಾ ೫೦ ಲಕ್ಷ ಸೇರಿದಂತೆ ಒಟ್ಟಾರೆ ೧೨೫ ಕೋಟಿ ಬಹುಮಾನ ನೀಡಲಾಗುತ್ತದೆ. ವಿಶೇಷ ಎಂದರೆ ಆಕಸ್ಮಿಕವಾಗಿ ಖರೀದಿಸಿದ ಅಲ್ತಾಫ್ ಬಂಪರ್ ಬಹುಮಾನ ವಿಜೇತರಾಗಿ ೨೫ ಕೋಟಿ ಬಹುಮಾನ ಪಡೆದುಕೊಂಡಿದ್ದಾರೆ.
ಬಹುಮಾನಕ್ಕಾಗಿ ಕೇರಳಕ್ಕೆ ತೆರಳಿದ ಕುಟುಂಬ:ಲಾಟರಿಯಲ್ಲಿ ೨೫ ಕೋಟಿ ಬಹುಮಾನ ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಲೇ ಅಲ್ತಾಫ್ ಕುಟುಂಬ ಸಮೇತ ಕೆರಳಕ್ಕೆ ತೆರಳಿದ್ದಾರೆ.ಫೋನ್ ಕರೆ ಮೂಲಕ ಮಾತನಾಡಿದ್ದ ಅವರು,ಲಾಟರಿ ಹೊಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ.ದೇವರ ದಯೆಯಿಂದ ಲಾಟರಿ ಮೂಲಕ ಹಣ ಬಂದಿದೆ.


ಈ ಹಣದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ನನ್ನ ಕನಸು ಈಡೇರಲಿದೆ.ಜತೆಗೆ ವಾಸಕ್ಕೊಂದು ಮನೆ ಮಕ್ಕಳಿಗೆ ಭವಿಷ್ಯ ಹಾಗೂ ಒಂದಷ್ಟು ಹಣವನ್ನು ವ್ಯವಹಾರಕ್ಕೆ ಬಳಸಿಕೊಳ್ಳುತ್ತೇನೆ.ಕೊಟ್ಟವರ ಸಾಲ ತೀರಿಸಿ ನೆಮ್ಮದಿ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸ್ನೇಹಿತರು,ಹಿತೈಷಿಗಳಿಂದ ಶುಭಾಶಯ:ಕಷ್ಟಪಟ್ಟು ದುಡಿದ ಹಣ ಹೊಟ್ಟೆ ಬಟ್ಟೆ ಸರಿಯಾಗುತ್ತಿತ್ತು. ಇದರಲ್ಲಿ ಸಾಲ ಮತ್ತು ಅದಕ್ಕೆ ಬಡ್ಡಿ ಕಟ್ಟಬೇಕಿತ್ತು.ಕಷ್ಟದಲ್ಲಿದ್ದ ವ್ಯಕ್ತಿಗೆ ದೇವರೇ ಸಹಾಯ ಮಾಡಿದ್ದಾನೆ. ಮುಂದಿನ ಜೀವನ ಸುಖಕರ ವಾಗಿರಲಿ ಎಂದೂ ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.