ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಯಶಸ್ವಿಯಾದ ಹಿನ್ನೆಲೆಯಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಬಿ.ಪ್ರಭುಗೌಡ ಅವರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹುಣಸೂರಿನ ವೀರನಹೊಸಳ್ಳಿಯಲ್ಲಿ ಗಜಪಡೆ ಪಯಣದ ಮೂಲಕ ಅರಮನೆಗೆ ಆಗಮಿಸಿ, ಸುಮಾರು ಒಂದೂವರೆ ತಿಂಗಳು 14 ಆನೆಗಳು ನಿತ್ಯ ಎಲ್ಲ ಹಂತದ ತಾಲೀಮಿನಲ್ಲಿ ಭಾಗವಹಿಸಿ, ದಸರಾ ಮಹೋತ್ಸವ ಯಶಸ್ವಿಗೊಳಿಸಿದ್ದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳಿಗೆ ಯಾವುದೇ ತೊಂದರೆಯಾಗದೇ ಹಾಗೂ ಆನೆಗಳಿಂದ ಯಾವುದೇ ಅಪಾಯದ ಸನ್ನಿವೇಶ ಎದುರಾಗದೇ, ಜಂಬೂ ಸವಾರಿ ಮೆರವಣಿಗೆ ನಡೆದಿದೆ. ದಸರಾದಲ್ಲಿ 11 ಆನೆಗಳು ಕೂಡ ಶಾಂತವಾಗಿ ಯಶಸ್ವಿಗೊಳಿಸಿದ್ದರಿಂದ ಡಿಸಿಎಫ್ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿದರು.