ಮನೆ ರಾಜಕೀಯ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ: ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಾಸಕ ದರ್ಶನ್ ಪತ್ರ

ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ: ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಾಸಕ ದರ್ಶನ್ ಪತ್ರ

0

ಪಾಂಡವಪುರ: ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಗೃಹ ಇಲಾಖೆ ಆದೇಶಿಸಿದೆ.

Join Our Whatsapp Group

1994-95 ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕತ್ವದ ಅವಧಿಯಲ್ಲಿ ಪಟ್ಟಣದ ಮಹಾತ್ಮಗಾಂಧಿ ನಗರ,ಹನುಮಂತ ನಗರ,ಸುಭಾಷ್ ನಗರ ಹಾಗೂ ಹೇಮಾವತಿ ಬಡಾವಣೆ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನು ಮತ್ತು ಖಾಸಗಿಯವರಿಂದ ಜಮೀನು ಖರೀದಿಸಿ ಬಡಾವಣೆ ನಿರ್ಮಾಣ ಮಾಡಿ ಪಟ್ಟಣದ ಬಡ ನಿವಾಸಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಹಂಚಿಕೆಯಾಗಿ ಉಳಿದಿದ್ದ ನಿವೇಶನಳು ಮತ್ತು ಮೂಲ ಫಲಾನುಭವಿಗಳಿಗೆ ಗಮನಕ್ಕೆ ಬಾರದೆ ಕೆಲ ಪ್ರಭಾವಿ ವ್ಯಕ್ತಿಗಳು ನಿವೇಶನಳನ್ನು ಅಕ್ರಮವಾಗಿ ಕಬಳಿಸಿ ಅನ್ಯರಿಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅರ್ಹರಿಗೆ ನಿವೇಶನ ವಾಪಸ್ಸು ಕೊಡಿಸುವ ಉದ್ದೇಶದಿಂದ ಪಟ್ಟಣ ವ್ಯಾಪ್ತಿಯಲ್ಲಿ 1994-95 ರಿಂದ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ನಿವೇಶನಳ ಹಂಚಿಕೆ ಬಗ್ಗೆ ಪುರಸಭೆಯಿಂದ ಮಾಹಿತಿ ಕೇಳಿದೆ.

ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ 1976, 1997-98, 2006 ಹೀಗೆ ಹಲವಾರು ಬಾರಿ ಪಟ್ಟಣ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದಾಗ 1994 ರಿಂದ 99 ಅವಧಿಯಲ್ಲಿ ಅತಿ ಹೆಚ್ಚು 1053 ನಿವೇಶನಳನ್ನು ಹಂಚಿಕೆ ಮಾಡಲಾಗಿದೆ. ಶಾಂತಿನಗರಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಬಡಾವಣೆಗಳ ಪೈಕಿ ಮಹಾತ್ಮಗಾಂಧಿ, ಸುಭಾಷ್ ನಗರ ಮತ್ತು ಚಂದ್ರೆ ರಸ್ತೆಯಲ್ಲಿನ ಹನುಮಂತ ನಗರಗಳಲ್ಲಿ 20*30 ಅಳತೆಯ ನಿವೇಶಳನ್ನು ಪುರಸಭೆ ಅಂದಿನ ಆಡಳಿತ ಮಂಡಳಿ ಮತ್ತು ಆಶ್ರಯ ಸಮಿತಿ ಮೂಲಕ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ. ಆದರೆ ಹಂಚಿಕೆಯಾಗಿ ಉಳಿದಿದ್ದ ನೂರಾರು ನಿವೇಶಗಳನ್ನು ಬಲಾಢ್ಯರು ತಮ್ಮ ಪ್ರಭಾವದಿಂದ ನಿವೇಶನಗಳನ್ನು ಕಬಳಿಸಿ ಅದಕ್ಕೆ ಅಕ್ರಮವಾಗಿ ಖಾತೆ, ಇ-ಸ್ವತ್ತು ಮಾಡಿಸಿಕೊಂಡು ಲಕ್ಷಾಂತರ ರೂ.ಗಳಿಗೆ ಅನ್ಯರಿಗೆ ಮಾರಾಟ ಮಾಡಿರುವುದಾಗಿ ನಿವೇಶನ ಕಳೆದುಕೊಂಡ ಅರ್ಹ ಫಲಾನುಭವಿಳು ಮತ್ತು ಸಾರ್ವಜನಿಕರ ಆರೋಪಗಳು ಶಾಸಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

ಪುರಸಭೆಯ ಆಸ್ತಿಯೇ ಮಾಯ : ನಿವೇಶನ ಹಂಚಿಕೆಯಾದ ಬಳಿಕ ಹಣಕಾಸು ತೊಂದರೆಯಿಂದ ಕೆಲವರು ಮನೆ ನಿರ್ಮಿಸಲು ಸಾಧ್ಯವಾಗದೆ ಹಾಗೆಯೇ ಪಾಳು ಬಿಟ್ಟಿದ್ದರು.ಕೆಲಸ ನಿಮಿತ್ತ ಹೊರ ಊರಲ್ಲಿ ವಾಸವಿರುವ ಫಲಾನು ಭವಿಗಳು,ದುರ್ಬಲರು ಇಂತಹ ಫಲಾನುಭವಿಗಳಿಗೆ ಹಂಚಿಕೆ ಯಾಗಿದ್ದ ನಿವೇಶನಗಳ ಜತೆಗೆ ಹಂಚಿಕೆಯಾಗಿ ಉಳಿಕೆಯಾಗಿದ್ದ ನಿವೇಶನಗಳು, ಪುರಸಭೆ ಆಸ್ತಿ, ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗ ಹಾಗೂ ಸರ್ಕಾರಿ ಜಾಗಗಳಿಗೂ ಪ್ರಭಾವಿಗಳ ಪಾಲಾಗಿದ್ದು ಇವುಗಳಿಗೆ ಅಕ್ರಮವಾಗಿ ಖಾತೆ, ಇ-ಸ್ವತ್ತು ಆಗಿದೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕಾನೂನು ಕ್ರಮದ ಕೈಗೊಂಡು ಅರ್ಹರಿಗೆ ನ್ಯಾಯಾ ದೊರಕಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.