ಮನೆ ಜ್ಯೋತಿಷ್ಯ ಮುಟ್ಟಾದ ಸ್ತ್ರೀಯಳನ್ನು ಕೂಡುವ ರಾತ್ರಿಗಳು

ಮುಟ್ಟಾದ ಸ್ತ್ರೀಯಳನ್ನು ಕೂಡುವ ರಾತ್ರಿಗಳು

0

 ಶ್ಲೋಕ :

 ಋತುಃ ಸ್ವಾಭಾವಿಕಃ ಸ್ತ್ರಿಣಾಂ ರಾತ್ರಯಃ ಷೋಡಶ  ಸ್ಮೃತಾಃ

 ತಾಸಾಮಾದ್ಯಾಶ್ಚತುಸ್ರಸ್ತು ನಿಂದಿತೈಕಾದಶೀಚಯಾ

ತಸ್ಮಾತ್ ತ್ರಿರಾತ್ರಂ ಚಾಂಡಾಲೀಂ ಪುಷ್ಟಿತಾಂ ಪರಿವರ್ಜಯೇತ್,||

 ಅರ್ಥ: ಸ್ತ್ರೀಯರಿಗೆ ಋತು ಧರ್ಮದ ಸಂಬಂಧವು ಮುಟ್ಟಾದ ದಿನದಿಂದ 16 ರಾತ್ರಿ ಮಾತ್ರ ಇರುತ್ತದೆ ಈ 16 ರಾತ್ರಿಗಳಲ್ಲಿ ಮಾತ್ರವೇ ಗರ್ಭ ನಿಲ್ಲುವುದು 16  ದಿನಗಳ ನಂತರ ಗರ್ಭ ನಿಲ್ಲುವುದಿಲ್ಲ ಈ 16 ರಾತ್ರಿಯಲಿ ಮೊದಲನೆಯ ಮೂರು ರಾತ್ರಿಗಳಲ್ಲಿ ರಸಜ್ವಾಲೆಯಾದ ಸ್ತ್ರೀಗಳು ಚಾಂಡಲಿನಿ ಎನಿಸುವಳು.4 11 13 ರಾತ್ರಿಗಳು ನಿಂದಿತ ಅಥವಾ ವರ್ಜಿತವಿರುತ್ತದೆ ಸಂಘ ಮಾಡಬಾರದು ಉಳಿದ ಅಂತೂ, ಆ ಆರು  ರಾತ್ರಿಗಳಲ್ಲಿ ಸ್ತ್ರೀ ಸಂಘ ಮಾಡಬಾರದು ಉಳಿದ ಹತ್ತು ರಾತ್ರಿಗಳು  ಸ್ತ್ರೀಯರನ್ನು ಕೂಡಲು ಪ್ರಸಿಕ್ತವಿರುತ್ತದೆಂದು ಮನುಸ್ಕೃತಿಯಲ್ಲಿ ಹೇಳಲಾಗಿದೆ.ಇದು ಸ್ತ್ರೀ ಪುರುಷರ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು.

 ಸಂತಾನ ಫಲ ವಿಚಾರವು :

     ಶ್ರವಣಾ, ಧನಿಷ್ಟಾ ಮೂಲಾ ನಕ್ಷತ್ರಗಳಲ್ಲಿ ಸ್ತ್ರೀಯಳು ಪ್ರಥಮ ರಜಸ್ಟಲೆಯಾದರೆ ಆ ಸ್ತ್ರೀಯಳಿಗೆ  ಐದು ಮಕ್ಕಳು ಆಗುವವು. ರೋಹಿಣಿ ನಕ್ಷತ್ರದಲ್ಲಿ ಏಳು ಮಕ್ಕಳು ಅಶ್ವಿನಿ ಸ್ವಾತಿ ವಿಶಾಖಾ, ಅನುರಾಧಗಳಲ್ಲಿ ಪ್ರಥಮ ಋತುಮತಿಯಾದರೆ ಎಂಟು ಮಕ್ಕಳು ರೇವತಿ ನಕ್ಷತ್ರದಲ್ಲಾದರೆ ಒಂಬತ್ತು ಮಕ್ಕಳು, ಮೃಗಶಿರ, ಉತ್ತರ, ಹಸ್ತ,,ಚಿತ್ತಾ, ಉತ್ತರಾಷಾಢ ಶತತಾರ, ಉತ್ತರ ಭಾದ್ರಪದ ನಕ್ಷತ್ರದಲ್ಲಾದರೆ 10 ಮಕ್ಕಳು ಜನಿಸುತ್ತವೆಯೆಂದು ನಕ್ಷತ್ರಗಳ ಫಲವು ಹೇಳುತ್ತದೆ.ಇದರಲ್ಲಿ ಗ್ರಹಗಳ ಯೋಗದಿಂದ ಸ್ವಲ್ಪು ಹೆಚ್ಚು ಕಡಿಮೆ ಯಾಗುವದುಂಟು ಇದೂ ಅಲ್ಲದೆ, ಇತ್ತೀಚಿನ ದಿನಗಳಲ್ಲಿ  ಜನಸಂಖ್ಯಾ ಹೆಚ್ಚಳದ ದುಷ್ಪರಿಣಾಮಗಳನ್ನು ಇಂದಿನ ಆಧುನಿಕ ಸ್ತ್ರೀಯರು ಪುರುಷರೆಲ್ಲರೂ ತಿಳಿದುಕೊಂಡಿದ್ದಾರೆ.ಸರ್ಕಾರವೂಸಹಿತ ಜನಸಂಖ್ಯಾ ನಿಯಂತ್ರಣದ ಬಗ್ಗೆ ಸಾಕಷ್ಟು ಪ್ರಚಾರ ಮಾಡುತ್ತಿರುವುದರಿಂದ ಸ್ತ್ರೀ ಪುರುಷರು ಮಕ್ಕಳನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಸಂಖ್ಯೆಯಲ್ಲಿ ಬಯಸಿದಿದ್ದಾರೆ.ಸಣ್ಣ ಕುಟುಂಬದ ಸುಖದ ಸಂಸಾರ ಎಂಬ  ನೀತಿಯನ್ನು ಅರಿತುಕೊಂಡು ಸಂತಾನ ನಿಯಂತ್ರಣಕ್ಕಾಗಿ ಎಷ್ಟು ಪ್ರಕಾರದಿಂದ ಸಾಧ್ಯವೊ ಅಷ್ಟು ವಿಧಗಳನ್ನು ತಮ್ಮ ಸಂಸಾರದಲ್ಲಿ ಅನುಸರಿಸುತ್ತಿದ್ದಾರೆ.ಇದರಿಂದ ಪ್ರತಿಯೊಬ್ಬರಿಗೂ ಎರಡು ಅಥವಾ ಮೂರು ಮಕ್ಕಳನ್ನು ಮಾತ್ರ ಹೆಚ್ಚು ಕುಟುಂಬದ ಯೋಜನೆಗೆ ಒಳಗಾಗುತ್ತಾರೆ ಇದು ಸ್ತ್ರೀ ಪುರುಷರಿಬ್ಬರ ಆರೋಗ್ಯಕ್ಕೂ ಒಳ್ಳೆಯದು ರಾಷ್ಟ್ರದ ಅಭಿವೃದ್ಧಿಗೂ ಒಳ್ಳೆಯದು.