ಮನೆ ಕಾನೂನು ಜಿಲ್ಲಾ ನ್ಯಾಯಾಧೀಶರ ಆಪ್ತ ಸಮಾಲೋಚನೆ, ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ರಚಿಸಿದ ಕೇರಳ ಹೈಕೋರ್ಟ್

ಜಿಲ್ಲಾ ನ್ಯಾಯಾಧೀಶರ ಆಪ್ತ ಸಮಾಲೋಚನೆ, ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ರಚಿಸಿದ ಕೇರಳ ಹೈಕೋರ್ಟ್

0

ಜಿಲ್ಲಾ ನ್ಯಾಯಾಧೀಶರ ಹಾಗೂ ನ್ಯಾಯಾಂಗ ಅಧಿಕಾರಿಗಳ ಕಲ್ಯಾಣ, ಕ್ಷೇಮಕ್ಕಾಗಿ ಆಪ್ತ ಸಮಾಲೋಚನೆ ನಡೆಸುವುದರ ಜೊತೆಗೆ ಅವರ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿಯೊಂದನ್ನು ಕೇರಳ ಹೈಕೋರ್ಟ್‌ ರಚಿಸಿದೆ.

Join Our Whatsapp Group

ಅವರ ಸಮಸ್ಯೆಗಳ ತ್ವರಿತ ಪರುಹಾರಕ್ಕಾಗಿ ಇಮೇಲ್‌ ಐಡಿ judicare@kerala.gov.in ಕೂಡ ರೂಪಿಸಲಾಗಿದ್ದು ದೂರು ಪರಿಹಾರಕ್ಕೆ ಅನುಕೂಲವಾಗುವಂತೆ ಹದಿನಾಲ್ಕು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ನ್ಯಾಯಾಂಗ ಅಧಿಕಾರಿಗಳ ಆಪ್ತ ಸಮಾಲೋಚನೆಗಾಗಿ ಪ್ರತ್ಯೇಕವಾಗಿ ಕೌಟುಂಬಿಕ ನ್ಯಾಯಾಲಯದ ಸಲಹೆಗಾರರ ​​ಸಮಿತಿ  ಒಳಗೊಂಡಿರುವ ನ್ಯಾಯಾಂಗ ಸಮಾಲೋಚನೆ ಕೇಂದ್ರವನ್ನು (ಜೆಸಿಸಿ) ಕೂಡ ಹೈಕೋರ್ಟ್ ಸ್ಥಾಪಿಸಿದೆ.

ಅಲ್ಲದೆ, ಅಧಿಕಾರಿಗಳು ಅಗತ್ಯವಿದ್ದಾಗ ಆಪ್ತ ಸಮಾಲೋಚನೆ ಸೇವೆ ಪಡೆಯಲೆಂದು ಮೊಬೈಲ್ ಸಂಖ್ಯೆ (7306425961) ಒದಗಿಸಲಾಗಿದೆ.

ನ್ಯಾಯಾಂಗ ಅಧಿಕಾರಿಗಳ ಒಟ್ಟಾರೆ ಆರೋಗ್ಯದ ಮೇಲ್ವಿಚಾರಣೆಗಾಗಿ ಸಮಿತಿ ವರ್ಷಕ್ಕೆ ಎರಡು ಬಾರಿ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸಲಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ನ್ಯಾಯಾಂಗ ಅಧಿಕಾರಿಗಳ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡಲು ಈ ಯೋಜನೆ ವಿನ್ಯಾಸಗೊಳಿಸಲಾಗಿದ್ದು ಆರೋಗ್ಯ ತಪಾಸಣೆ ಸಂಯೋಜಕರಾಗಿ ಕೆಇಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಹಿಸಲಿದ್ದಾರೆ.