ಮನೆ ಆರೋಗ್ಯ ಸಂಧಿವಾತ ರೋಗವನ್ನು ವಾಸಿ ಮಾಡುವ ಗುಣ

ಸಂಧಿವಾತ ರೋಗವನ್ನು ವಾಸಿ ಮಾಡುವ ಗುಣ

0
ಪರ್ಮಾಲ್ಡಿಹೈಡ್, ಫ್ರಿಯುಂಡ್ಸ್ ಅಡ್ಜುವೆಂಟ್, ಅಸಿಟಿಕ್ ಆಮ್ಲ ಮತ್ತು ಕ್ಲೋರೋಜೆನ್ ಉಂಟು ಮಾಡುವ ಸಂಧಿವಾತ ರೋಗವನ್ನು ವಾಸಿ ಮಾಡುವ ಗುಣ ಎಥನಾಲ್ ಹಾಗೂ ಎಥನಾಲ್ ಮತ್ತು ನೀರಿನಲ್ಲಿ ಮಿಶ್ರಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ  ಸತ್ವಕ್ಕೆ ಇದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ 

ಸ್ಥಾನದ ಕ್ಯಾನ್ಸರ್ ವಾಸಿ ಮಾಡುವ ಗುಣ :

Join Our Whatsapp Group

 ಸ್ತ್ರೀಯರಲ್ಲಿ ಕಂಡುಬರುವ ಕ್ಯಾನ್ಸರ್ ರೋಗಗಳಲ್ಲಿ,ಸ್ಥಾನದ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.ಇದರ ಚಿಕಿತ್ಸೆಗೆ ಕೆಲವರು ಪರ್ಯಾಯ ಹೋಮಿಯೋಪತಿ ಪದ್ದತಿಯನ್ನು ಆಯ್ಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಅಳಲೇಕಾಯಿಂದ ಹೋಮಿಯೋಪತಿ ಪದ್ಧತಿ  ಪ್ರಕಾರ ತಯಾರಿಸಿದ ಸತ್ವವನ್ನು ಪ್ರಯೋಗ ಶಾಲೆಯಲ್ಲಿ ಬೆಳೆಸಿದ ಸ್ಥಾನದ ಕ್ಯಾನ್ಸರ್ ಕೋಶಗಳ ಮೇಲೆ ಉಪಯೋಗಿಸಿ ಪರಿಣಾಮವನ್ನು ಪರಿಶೀಸಿದಾಗ, ಸತ್ವಕ್ಕೆ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯವಿದೆಯೆಂದು ಕಂಡುಬಂದಿದೆ.ಆದರೆ ರೋಗಿಗಳ ಮೇಲೆ ಕೈಗೊಳ್ಳುವಂತಹ ಉನ್ನತ ಮಟ್ಟದ ಸಂಶೋಧನೆಯ ಅಗತ್ಯವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಹೃದಯವನ್ನು ಕಾಪಾಡುವ ಗುಣ :
ಎಥನಾಲ್ ದ್ರಾವಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವವನ್ನು ಇಲಿಗಳ ಪ್ರತಿ ಕಿಲೋ ಗ್ರಾಂ ದೇಹದ ತೂಕಕ್ಕೆ 500 ಮಿ. ಗ್ರಾಂ ಪ್ರಮಾಣದ ಸತ್ವವನ್ನು ಸೇವಿಸಲು ಕೊಟ್ಟು ಇಲ್ಲಿಯನ್ನು ಸಜ್ಜುಗೊಳಿಸಲಾಯಿತು. ಇಂತಹ ಇಲಿಗಳಿಗೆ ಹೃದಯವನ್ನು ಹಾನಿಗೊಳಿಸುವಂತಹ ರಾಸಾಯನಿಕವನ್ನು ನೀಡಲಾಯಿತು. ನಂತರ ಇಲಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ,ಅಳಲೇಕಾಯಿ ಸತ್ವ ಸೇವಿಸಿದ ಇಲಿಗಳಲ್ಲಿ ರಾಸಾಯನಿಕದಿಂದ ಹೃದಯಕ್ಕೆ ಯಾವುದೇ ರೀತಿಯ ಹಾನಿಯಾಗದಿರುವುದು ಕಂಡುಬಂದಿದೆ. ಇಂತಹುದೇ ಉಪಯೋಗ ಅಳಲೆಕಾಯಿಯ ಸಿಪ್ಪೆಯಿಂದ ತಯಾರಿಸಿದ ಸತ್ವಕ್ಕೂ ಇದೆಯೆಂದು ವರದಿಯಾಗಿದೆ.ಒಟ್ಟಾರೆ ಅಳಲೆಕಾಯಿಯ ತತ್ವಕ್ಕೆ ಹೃದಯವನ್ನು ಕಾಪಾಡುವ ಗುಣವಿದೆಯೆಂದು ದೃಢಪಟ್ಟಿದೆ.

ಜಂತು ಹುಳು ನಾಶಪಡಿಸುವ ಗುಣ :
ಪ್ರಸ್ತುತ ಜಂತುಹುಳು ಕುರಿ ಮತ್ತು ಮೇಕೆಯ ಕರುಳಿನಲ್ಲಿ ಆಶ್ರಯ ಪಡೆದು ಜೀವಿಸುವ ಪರೋಪ ಜೀವಿ. ರಕ್ತನಾಳಗಳಿಂದ ರಕ್ತ ಹೀರಿ ಬದುಕಿರುವುದರಿಂದ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ರಕ್ತ ಹೀನತೆ ಉಂಟಾಗುತ್ತದೆ. ಇವುಗಳ ಉಪಟಳ ಹೆಚ್ಚಾದಾಗ ಮೈಊತ ಬಂದು ಸಾವಿಗೀಡಾಗುವ ಸಂಭವವಿರುತ್ತದೆ.ಈ ಪರೋಪ ಜೀವಿಗಳಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೀಡಾಗುತ್ತಾರೆ. ಈ ಆಪರೋಪ ಜೀವಿಯನ್ನು ಹತೊಟ್ಟಿಯಲ್ಲಿಡಲು ಕೆಲವು ರಾಸಾಯನಿಕ ಔಷಧಿಗಳನ್ನು ಉಪಯೋಗಿಸಲಾಗುತ್ತಿದೆ ಈ ಪರೋಪ ಜೀವಿ ಅಂತ ಔಷಧಿಗಳು ಪ್ರತಿರೋಧವನ್ನು ಬೆಳೆಸಿಕೊಂಡಿರುವುದರಿಂದ, ಪರಿಣಾಮಕಾರಿಯಾದ ಪರಿಸರ ಸ್ನೇಹಿ ಹಾಗೂ ಸಸ್ಯಜನ್ಯ ಔಷಧಿಗಳನ್ನು ಹುಡುಕುವ ಹಿನ್ನೆಲೆಯಿಂದ ಪ್ರಸ್ತುತ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಈಥೈಲ್ ಅಸಿಟೇಟ್ ಅಸಿಟೋನ್ ಮೇಥನಾಲ್ ದ್ರಾವಣ ಉಪಯೋಗಿಸಿ ಅಳಲೇಕಾಯಿ ಮರದ ಎಲೆ ಮತ್ತು ಕಾಯಿಯಿಂದ ತಯಾರಿಸಿದ ಸತ್ವಕ್ಕೆ ಜಂತುಹುಳುವನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ದೃಢಪಟ್ಟಿದೆ.