ಮನೆ ಆರೋಗ್ಯ ಅಳಲೆಕಾಯಿ: ಪ್ಲಾಸ್ಮೋಡಿಯಂ ಕ್ರಿಮಿಯನ್ನು ನಾಶಪಡಿಸುವ ಗುಣ

ಅಳಲೆಕಾಯಿ: ಪ್ಲಾಸ್ಮೋಡಿಯಂ ಕ್ರಿಮಿಯನ್ನು ನಾಶಪಡಿಸುವ ಗುಣ

0

 ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಂ: ಎಂಬುದು ಪ್ರೊಟೊಜೊವನ ಗುಂಪಿಗೆ ಸೇರಿದ ಕ್ರಿಮಿ, ಈ ಕ್ರಿಮಿ ಸೊಳ್ಳೆಗಳ ಮೂಲಕ ಪ್ರಾರ ಪ್ರಸಾರವಾಗಿ ಮಲೇರಿಯಾ ರೋಗವನ್ನುಂಟು ಮಾಡುತ್ತದೆ.ನೀರು ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವ ಮತ್ತು ಅಸಿಟೋನ್ ದ್ರಾವಣ ಉಪಯೋಗಿಸಿ  ಅಳಲೆಕಾಯಿ ಬೀಜದಿಂದ ತಯಾರಿಸಿದ ಸತ್ವ, ಈ ಎರಡು ಸತ್ವಗಳಿಗೆ ಈ ಕ್ರಿಮಿಯನ್ನು ನಾಶಪಡಿಸುವ ಗುಣ ಇದೆಯೆಂದು ಕಂಡುಬಂದಿದೆ.

Join Our Whatsapp Group

 ಮೃದ್ವಂಗಿ ನಾಟಕ ಗುಣ :

        ಮೃದ್ವಂಗಿಗಳಲ್ಲಿ ಪ್ರಸ್ತುತ ಈ ವೃದ್ವಂಗಿ ಅಪಾಯಕಾರಿ ಮೃದ್ವಂಗಿ. ಇದರಲ್ಲಿ ಮನುಷ್ಯರಿಗೆ ಮತ್ತು ಸಾಕು ಪ್ರಾಣಿಗಳಿಗೆ ಕಾಯಿಲೆ ಯುಂಟು ಮಾಡುವ ಹಲವು ಪರೋಪ ಜೀವಿಗಳ ಪ್ರಾಥಮಿಕ ಹಂತದ ಬೆಳವಣಿಗೆಯಾಗುತ್ತದೆ.ನಂತರದಲ್ಲಿ ಮನುಷ್ಯನಿಗೆ ಹರಡುತ್ತದೆ. ಮನುಷ್ಯರನ್ನು ಮತ್ತು ಸಾಕು ಪ್ರಾಣಿಗಳನ್ನು ಪರೋಪ ಜೀವಿಗಳ ದಾಳಿಯಿಂದ ರಚಿಸಬೇಕಾದರೆ ಈ ಬಗೆಯ ಮೃದ್ವಂಗಿಯನ್ನು ನಾಶಪಡಿಸಬೇಕಾಗುತ್ತದೆ.

     ಎಥನಾಲ್ ದ್ರಾವಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ್ದ ಸತ್ವವನ್ನು ಮತ್ತು ಚೂರ್ಣಕ್ಕೆ ಮೃದ್ವಂಗಿಯನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ ಈ ಆಳಲೆ ಕಾಯಿಯ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ  ಟ್ಯಾನಿಕ್ ಆಮ್ಲ ಕಾರಣವೆಂದು ಮತ್ತು ಇದು ನರಮಂಡಳಕ್ಕೆ ಅವಶ್ಯವಿರುವ ಅಸಿಟೈಲ್ ಖೊಲಿನ್  ಎಸ್ಪಿರೇಸ್ ಎಂಬ ಕಿಣ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಮೃದ್ವಂಗಿ ಸಾಯುವಂತೆ ಮಾಡುತ್ತದೆ.

 ಲಿಷ್ ಮನ್ ರೋಗಕಾರಕ ಜೀವಿ ನಾಶಕ ಗುಣ :

       ಲಿಷ್ ಮನ್ ರೋಗ, ಇದು ಲಿಷ್ ಮಾನಿಯ ಎಂಬ ಪ್ರೊಟೊಜೋವ ಗುಂಪಿಗೆ ಸೇರಿದ ಪರಾವಲಂಬಿ ಜೀವಿಯಿಂದ ಉಂಟಾಗುತ್ತದೆ. ಈ ರೋಗಕಾರಕ ಜೀವಿಗಳು ನಾಯಿ ಮತ್ತು ಇಲಿಗಳ ರಕ್ತದಲ್ಲಿ ಆಶಯ ಪಡೆದಿರುತ್ತವೆ. ಮುಸುಕಿನ ನೊಣಗಳು ಪ್ರಾಣಿಗಳಿಂದ ಈ ಜೀವಿಗಳನ್ನು ಹೊತ್ತು ತಂದು ಮನುಷ್ಯರಿಗೆ ಹರಡುತ್ತವೆ.ಈ ಜೀವಿಯಿಂದ ಉಂಟಾಗುವ ರೋಗದಲ್ಲಿ ಹಲವು ಪ್ರಕಾರಗಳಿವೆ.ಕಾಲ ಅಜಾರ್ ಕಾಯಿಲೆಯ ನಂತರ ಕುಂಡು ಬರುವ ಚರ್ಮದ ರೋಗ, ಮೂಡಲ ಹುಣ್ಣು ಮತ್ತು ಚರ್ಮದ ಲೋಳ್ವದರದ ಹುಣ್ಣು ಮುಂತಾದವುಗಳು. ಇಂತಹ ರೋಗಕಾರಕ ಜೀವಿಯನ್ನು ನಾಶಪಡಿಸುವ ಸಾಮರ್ಥ್ಯ ಅಳಲೆಕಾಯಿ ಸತ್ವಕ್ಕೆ ಇದೆಯೆಂದು ವರದಿಯಾಗಿದೆ.