ಮನೆ ಆರೋಗ್ಯ ರೋಗನಾಶಕ ಗುರಿ

ರೋಗನಾಶಕ ಗುರಿ

0

1. ಎಳೆಯ ಮಕ್ಕಳಿಗೆ ಹಾಲು ಕೊಡುವಾಗ ಕಡಿಮೆ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿ ಕೊಟ್ಟರೆ ರೋಗನಾಶಕ ಶಕ್ತಿ ವೃದ್ಧಿಸುವುದು.ಇದೊಂದು ರಕ್ತವನ್ನು ಶುದ್ದಿಗೊಳಿಸುವ ಹಾಗೂ ವೃದ್ಧಿಸುವ ಟಾನಿಕ್ ಆಗಿದೆ.

Join Our Whatsapp Group

2. ಅರಿಶಿನ ಪುಡಿಗೆ ಕ್ರಿಮಿನಾಶಕ, ರೋಗನಿವಾರಕ ಗುಣ ಹೆಚ್ಚಾಗಿ ಇದೆ.

3. ಪರಂಗಿಹಾಲು,ಜೇನುತುಪ್ಪ, ತುಳಸಿರಸ ಇವುಗಳಲ್ಲಿಯೂ ರೋಗನಿವಾರಕ ಗುಣ ಇದೆ.

4. ನೇರಳೆ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಕ್ರಿಮಿಗಳು ಗಾಯಗಳ ಮೇಲೆ ಕೂಡದಂತೆ ತಡೆಯುವ ಶಕ್ತಿ ಇದೆ.

5. ವಿಳೆದೆಲೆ, ಸುಣ್ಣದಲ್ಲೂ ರೋಗ ಹಾಗೂ ಕ್ರಿಮಿನಾಶಕ ಗುಣ ಇದೆ.

 ವೀರ್ಯಾಸ್ಖನ ಆಗುತ್ತಿದ್ದರೆ :

1. ಸೋರೆಕಾಯಿಯನ್ನು ಅಡಿಗೆಯಲ್ಲಿ ಹೆಚ್ಚಾಗಿ ಉಪಯೋಗಿಸಿರುವುದರಿಂದ ವೀರ್ಯ ವೃದ್ಧಿ ಆಗುವುದರ ಜೊತೆಗೆ ವೀರ್ಯಸ್ಖಲನ ನಿಲ್ಲುವುದು.

2. ಗೋಡಂಬಿ ಹಲ್ವ ದಿನವೂ ತಿನ್ನುತ್ತಿದ್ದರೆ ವೀರ್ಯಸ್ಖಲನ ನಿಲ್ಲುವುದರೊಂದಿಗೆ ವೀರ ವೃದ್ಧಿ ಆಗಿ ರತಿಸುಖ ದೊರೆಯುವುದು.

3. ಸಪೋಟ ಹಣ್ಣನ್ನು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದಲೂ ವೀರ್ಯವೃದ್ದಿಯೊಂದಿಗೆ ವೀರ್ಯಸ್ಖಲನ ನೀಡುವುದು.

 ವೀರ್ಯ ವೃದ್ಧಿ :

1. ಮಾವಿನ ಹಣ್ಣನ್ನು ದಿನವೂ ಮಿತವಾಗಿ ಸೇವಿಸುವುದರಿಂದ ವೀರ್ಯವೃದ್ಧಿ ಆಗುವುದಲ್ಲದೆ ಆರೋಗ್ಯ ಸುಧಾರಿಸುವುದು.

2. ಮಾವಿನ ಹಣ್ಣಿನ ಸೀಕರಣೆ ಮಾಡಿಕೊಂಡು, ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಶ್ರಮಶಕ್ತಿ ಹೆಚ್ಚುವುದರ ಜೊತೆಗೆ ಪುಂಸತ್ವ ವೃದ್ಧಿಸುವುದು.

3. ಬಾಳೆಹಣ್ಣನ್ನು ದಿನವೂ ಸೇವಿಸುವುದರಿಂದ ವೀರ್ಯ ವೃದ್ಧಿಸುವುದರ ಜೊತೆಗೆ ಶಾರೀರಿಕ ಆರೋಗ್ಯ ಸುಧಾರಿಸುವುದು.

4. ಒಂದು ಕಪ್ ಎಳೆನೀರಿಗೆ ಜೇನುತುಪ್ಪ ಸೇರಿಕೊಂಡು ಸೇವಿಸುತ್ತಿದ್ದರೆ ವೀರ್ಯ ವೃದ್ಧಿಯೊಂದಿಗೆ ಸಂಭೋಗ ಶಕ್ತಿ ಹೆಚ್ಚಿ, ಆರೋಗ್ಯ ಸುಧಾರಿಸುವುದು.

5. ಉದ್ದಿನಬೇಳೆಯನ್ನು ಕೆಂಪಗೆ ಹುರಿದು, ಹಾಲಿನಲ್ಲಿ ಬೇಯಿಸಿ ಏಲಕ್ಕಿಪುಡಿ, ಒಣ ದ್ರಾಕ್ಷಿ ಸಕ್ಕರೆ ಬೆರೆಸಿ ಮಾಡಿದ ಪಾಯಸ ತಿನ್ನುತ್ತಿದ್ದರೆ ವೀರ್ಯ ವೃದ್ಧಿಸುವುದು.

6. ಹುರಿಗಡಲೆಯನ್ನು ದಿನವೂ ಮಿತವಾಗಿ ಬಳಸುತ್ತಿದ್ದರೆ ವೀರ್ಯವೃದ್ಧಿಸುವುದು.

7. ಕರ್ಜೂರವನ್ನು ಸಣ್ಣಗೆ ಚೂರು ಮಾಡಿ, ಹುರಿಗಡಲೆ ಹಿಟ್ಟಿನೊಂದಿಗೆ ಸೇರಿಸಿ, ದಿನವೂ ಸೇವಿಸುತ್ತಿದ್ದರೆ ದೇಹದ ತೂಕ ಹೆಚ್ಚುವುದರ ಜೊತೆಗೆ ವೀರ್ಯ ವೃದ್ಧಿಯೂ ಆಗುವುದು.

8. ಒಣಖರ್ಜೂರ,ಬಾದಾಮಿ ಬೀಜವನ್ನು ಹಾಲಿನಲ್ಲಿ ಅರೆದು ಜೇನುತುಪ್ಪ ಸೇರಿಸಿ, ದಿನವೂಒಂದು ಬಾರಿ ಎರಡು ಟೀ ಸ್ಪೂನಿನಷ್ಟು ಸೇವಿಸುತ್ತಾ ಬಂದರೆ ವೀರ್ಯವೃದ್ದಿಯೊಂದಿಗೆ ಲೈಂಗಿಕ ಶಕ್ತಿ ಹೆಚ್ಚಿಸುವುದು.