ಮನೆ ಜ್ಯೋತಿಷ್ಯ ಉದಾಹರಣೆ ಜಾತಕ -7

ಉದಾಹರಣೆ ಜಾತಕ -7

0

   ಬ್ರಾಡಿಕಾರ್ಡಿಯಾ ಹೃದಯವ್ಯಾದಿ ಇದೆ. ಬಲ ಹೃಕ್ತುಕ್ಷಿ ಕೆಟ್ಟಿದೆ. ನಂತರ ಇವರ ಹೃದಯ ಬಡಿತ  ಹೃದಯ ತಾಪಾಸಣೆ 32ರಷ್ಟು ಇತ್ತು. ಇದರಿಂದ ಇವರಿಗೆ ಹೆಚ್ಚು ನಡೆಯಲು ಮತ್ತು ಮಾತನಾಡಲು ಆಗುತ್ತಿರಲಿಲ್ಲ. ಆಮ್ಲ ಜನಕ ಕೊರತೆಯಿಂದ ತೊಂದರೆಯಾಗಿದೆ. ನಾನು ಇವರಿಗೆ ಸೂರ್ಯ ನಮಸ್ಕಾರ ಮತ್ತು ಪ್ರತಿದಿನ ಅದಿತ್ಯ ಹೃದಯ ಸ್ತೋತ್ರವನ್ನು ಪಠಿಸಲು ಹೇಳಿದೆ. ಒಂದು ತಿಂಗಳ ನಂತರ ಅವರ ಹೃದಯ ಬಡಿತವು 40ಕ್ಕೆ ಬಂದಿದೆ. ಇದರಿಂದ ಇವರು ಅಪಾಯದಿಂದ ಪಾರಾಗಿದ್ದಾರೆ. ಆದರೂ  60ರವರೆಗೆ  ಮುಟ್ಟಬೇಕು.

Join Our Whatsapp Group

      ಇವರ ಜಾತಕ ಪರಿಶೀಲಿಸಿದಾಗ ರವಿಗೆ ಕುಜ, ಗುರು, ಶನಿ ಮತ್ತು ಕೇತುವಿನ ದೃಷ್ಟಿಯಿದೆ ರವಿ ಉಚ್ಛಸ್ಥಾನದಲ್ಲಿದ್ದರೂ ಸಹ ಪೀಡಿತ.ಇವರಿಗೆ ಆಮ್ಲಜನಕ ತೊಂದರೆಯೂ ಇದೆ. ಏಕೆಂದರೆ ಮೀನಾರಾಶಿ, ಪೀಡಿತ, ರಕ್ತ ಮಲಿನ ಭಾಗ ಬಲ ಹೃತ್ ಕುಕ್ಷಿಯು ಬಂದ್ ಆಗಿದೆ. ಕಾರಣ ಕುಜ ರಕ್ತ  ಕಾರಕನಾಗಿ ಶನಿ ಮತ್ತು ಕೇತುವಿನ ಸಂಬಂಧ ಬಂದಿರುವುದರಿಂದ ಅಲ್ಲಿ ತಡೆಯಾಗಿದೆ.

 ಉದಾಹರಣೆ ಜಾತಕ 8 :-

     ಈ ಜಾತಕಿಯು ಹಲವು ವರ್ಷಗಳಿಂದ ರಕ್ತದೊತ್ತಡದಿಂದ ಬಾಧೆಪಡುತ್ತಿದ್ದರು.ಈಗ ಕೆಲವು ವರ್ಷಗಳಿಂದ ಹೃದಯದ ಬಡಿತ ಕಡಿಮೆಯಾಗಿತ್ತು. ಆದರೆ ಈಗ ಕೆಲವು ತಿಂಗಳಿನಿಂದ ಹೃದಯದ ಬಡಿತದಲ್ಲಿ ಏರುಪೇರಾಗಿ ಸುಸ್ತು,ಬೆನ್ನು ಮೂಳೆ ಜಾರಿತ್ತು. ಪೂರ್ಣ ವಿಶ್ರಾಂತಿ ಪಡೆದರು.ಕೆಲವು ದಿನದ ಹಿಂದೆ ಸುಸ್ತಾಗಿ ತಲೆತಿರುಗಿ, ವಾಂತಿ ಬರಲು ಆರಂಭಿಸಿತು. ವೈದ್ಯರ ತಪಾಸಣೆಯಂತೆ ಅವರಿಗೆ ಹೃದಯ ಬಡಿತವು ಆಕಸ್ಮಿಕವಾಗಿ ಮೂವತ್ತಕ್ಕೆ ಇಳಿದು ತೊಂದರೆ ಪಡುತ್ತಿದ್ದರು. ಅವರಿಗೆ ‘ಫೇಸ್ ಮೇಕರ್’ ಹಾಕಿಕೊಳ್ಳಲು ವೈದ್ಯರು ಸಲಹೆ ನೀಡಿ 22ರ ಜೂನ್ 2013ರಲ್ಲಿ ‘ಫೇಸ್ ಮೇಕರ್’ ಅಳವಡಿಸಿದರು. ಈಗ ಹೃದಯದ ಬಡಿತ ಸ್ಥಿರವಾಗಿದೆ ಆರೋಗ್ಯವಾಗಿದ್ದಾರೆ .

      ಜಾತಕದಲ್ಲಿ ಇವರಿಗೆ ಸಿಂಹ ರಾಶಿ ಪೀಡಿತವಾಗಿದೆ.ಸಿಂಹದಲ್ಲಿ ಶನಿ ವಕ್ರ. ಬುಧ ಮತ್ತು ಶುಕ್ರದಿಂದ ಪೀಡಿತರಾಗಿ ರಾಹುಕೇತುಗಳ ಸಂಬಂಧ ಪಡೆದಿರುವುದರಿಂದ ಹೃದಯದ ಕ್ರಿಯೆಯು ಸರಿಯಾಗಿಲ್ಲ ಇದರಿಂದ ಇವರಿಗೆ ಚಂದ್ರದಶೆ ಶನಿಭುಕ್ತಿಯಲ್ಲಿ  ಪೇಸ್ ಮೇಕರ್ ಅಳವಡಿಸಿದರು.