ಮನೆ ಜ್ಯೋತಿಷ್ಯ ಪುನರ್ವಸು  ನಕ್ಷತ್ರ ಮತ್ತು ಜಾತಕ

ಪುನರ್ವಸು  ನಕ್ಷತ್ರ ಮತ್ತು ಜಾತಕ

0

ಪುನರ್ವಸು ಜಾತಕನ ರೋಗ

   ಗಳಗಂಡ  ಶ್ವಾಸನಾಳದ ಬಾವು, ಪ್ಲೂರಸಿ, ನ್ಯೂಮೋನಿಯಾ, ಉದರವಿಕಾರ,ಉದರವೃದ್ಧಿ  ಹೃದಯಾವರಣ ಪ್ರದಾಹ, ಕಿವಿಯ ಬಾವು, ಕಿವಿಯ ಕಿವು, ಅಯೋಡಿನ್ ಕೊರತೆಯಿಂದ ಗಂಟು ಶ್ವಾಸಕೋಶದ ಮೇಲ್ಭಾಗದಲ್ಲಿ ಸ್ಪಂದನ,ರಕ್ತಘಾತ,ಸ್ಪಂದನ ಸಕ್ಕರೆಯ ವೃದ್ಧಿ ಮೈಲಿ ಬೆನೆ.

Join Our Whatsapp Group

 ವಿಶೇಷ: ಸಂತಾನಕಾರಕ ಗ್ರಹ ಕುಂಡಲಿಯ ಈ ಕ್ಷೇತ್ರದಿಂದ ಗೋಚರವಶ ಬಂದಾಗ, ಜಾತಕರಿಗೆ ಸಂತಾನದಿಂದ ವಿಶೇಷ ಸಂತೋಷ ಪ್ರಾಪ್ತಿಯಾಗುತ್ತದೆ. ಈ ನಕ್ಷತ್ರ ನಭೋಮಂಡಲದಲ್ಲಿ ಗುರುವಿನ ಪ್ರಥಮ ನಕ್ಷತ್ರವಾಗಿದೆ. ಆದ್ದರಿಂದ, ಈ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ಸದಾ ಜ್ಞಾನಕ್ಷೇತ್ರದತ್ತ ಒಲವನ್ನು ತೋರುತ್ತಾರೆ. ಸದಾ ಅಧ್ಯಯನ ಮನನದಲ್ಲಿ ಸಮಯವನ್ನು ಕಳೆಯುವ ಇಂಥ ಜಾತಕರು ಪ್ರಾಪಂಚಿಕ ನಿಯಮಗಳೊಡನೆ ಸದಾ ಸಂಪರ್ಕ ಸಾಧಿಸುತ್ತಾರೆ.ಗುರುವನ್ನು ಪ್ರೌಢಾವಸ್ಥೆಯ ಗ್ರಹವೆಂದು ಹೇಳಿರುವುದರಿಂದ, ಗುರುವಿನ ನಕ್ಷತ್ರದಲ್ಲಿ ಜನಿಸಿದ ಜಾತಕರು 45 ವರ್ಷ ವಯಸ್ಸಿನ ನಂತರ ವಿಶೇಷ ಖ್ಯಾತಿ ಮತ್ತು ಸಮ್ಮಾನವನ್ನು ಪ್ರಾಪ್ತಿಹೊಂದುತ್ತಾರೆ.

     ಬುಧನ ರಾಶಿ ಮತ್ತು ಗುರುವಿನ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ಜೀವನದಲ್ಲಿ ವಿಚಾರ ಯುಕ್ತ ಕಾರ್ಯಗಳನ್ನು ಮಾಡುವವರು, ಶಿಕ್ಷಕ ಮೇಧಾವಿ, ದಂತರೋಗದಿಂದ ಪೀಡಿತ,  ಮಾವನ ಮನೆಯಿಂದ ಧನಪ್ರಾಪ್ತಿ ಹೊಂದುವವರು ಮತ್ತು ವೃದ್ಧಾವಸ್ಥೆಯಲ್ಲಿ ಭೋಗಿಸುವವರೂ ಆಗುತ್ತಾರೆ. ಇಂಥ ಜಾತಕರು ಸ್ವಚ್ಛ ವಸ್ತುಗಳ ಅಬಭಿರುಚಿಯುಳ್ಳರು, ವ್ಯಭಿಚಾರಿಗಳು, ಆಲಸಿಗಳು ಮತ್ತು ಕೈ ಕಾಲುಗಳಲ್ಲಿ ಪೀಡನೆ ಅಥವಾ ದುರ್ಘಟನೆಯಿಂದ ಪೀಡಿತರಾಗುವವರಾಗುತ್ತಾರೆ.

ಒಂದು ವೇಳೆ ಗುರು ಮತ್ತು ಬುಧರ ಈ ನಕ್ಷತ್ರ ಭಾಗದಿಂದ ಭ್ರಮಣ ಮಾಡಿದಾಗ, ಕುಂಡಲಿಯಲ್ಲಿ ಇದೇ ಗ್ರಹಗಳ ಕಾರತತ್ವದ ಅನುಸಾರ ಜಾತಕನಿಗೆ ಫಲಗಳು ಪ್ರಾಪ್ತಿಯಾಗುತ್ತವೆ. ಸೂರ್ಯನು ಈ ನಕ್ಷತ್ರದ ಮೇಲೆ ಆಷಾಡದ ಅಂತಿಮ 10 ದಿನಗಳವರೆಗೆ ಇರುತ್ತಾನೆ. ಚಂದ್ರನ್ನು ಪ್ರತಿ 27 ದಿನಗಳಿಗೊಮ್ಮೆ ಈ ನಕ್ಷತ್ರದ ಮೇಲೆ ಸುಮಾರು 20 ಗಂಟೆಗಳ ಅವಧಿಯವರೆಗೆ ಬ್ರಮಣಿಸುತ್ತಾನೆ.

ಚರಣದ ಸ್ವಾಮಿ ಫಲ :

★ ಪ್ರಥಮ ಚರಣದ ಸ್ವಾಮಿ ಗುರು ಮಂಗಳ ಜಾತಕನಿಗೆ ಸ್ವಚ್ಛಂದತಾ ಪ್ರವ್ರತ್ತಿಯನ್ನು ಪ್ರಾದಾನಿಸುತ್ತಾರೆ.

★ದ್ವಿತೀಯ ಚರಣದ ಸ್ವಾಮಿ ಗುರು ಶುಕ್ರ ಜಾತಕದಲ್ಲಿ ಕಲ್ಯಾತ್ಮಕ ಪ್ರವೃತ್ತಿ ಉಂಟು ಮಾಡುತ್ತಾರೆ.

★ ತೃತೀಯ ಚರಣದ ಸ್ವಾಮಿ ಗುರು ಬುಧ ಬೌದ್ಧಿಕ ಕ್ಷೇತ್ರದಲ್ಲಿ ಒಲವನ್ನು ವೃದ್ಧಿಸುತ್ತಾರೆ.

★  ಚತುರ್ಥ ಚರಣದ ಸ್ವಾಮಿ ಗುರು ಚಂದ್ರ ಜಾತಕನನ್ನು ಅಧಿಕ ಕಲ್ಪನಾಶೀಲನನ್ನಾಗಿ ಮಾಡುತ್ತಾರೆ.