ಮನೆ ಆರೋಗ್ಯ ಸೊಳ್ಳೆ ಮರಿಗಳನ್ನು ನಾಶಪಡಿಸುವ ಗುಣ

ಸೊಳ್ಳೆ ಮರಿಗಳನ್ನು ನಾಶಪಡಿಸುವ ಗುಣ

0

ಡೆಂಗ್ಯೂ ಕಾಯಿಲೆಯನ್ನು ಹರಡುವುದರಿಂದ ಎಡಿಎಸ್ ಈಜಿಪ್ಟಿ ಪ್ರಮುಖ ಪಾತ್ರ ವಹಿಸುತ್ತದೆ.ಇದೇ ರೀತಿ ಕೆಲವು ಜಾತಿಯ ಸೊಳ್ಳೆಗಳು ಹಲವಾರು ಕಾಯಿಲೆಗಳು ಹರಡಲು ಕಾರಣವಾಗಿವೆ. ಇಂತಹ ರೋಗ ಕಾರಕ ಸೊಳ್ಳೆಗಳನ್ನು ನಾಶಪಡಿಸಲು ವಿವಿಧ ಬಗೆಯ ಕೀಟ ನಾಶಕವನ್ನು ಉಪಯೋಗಿಸಲಾಗುತ್ತಿದೆ. ಇದರ ಪರಿಣಾಮವಾಗಿ ಈ ಕೀಟನಾಶಕಗಳಿಂದ ಪ್ರಕೃತಿಯಲ್ಲಿರುವ ಇತರ ಉಪಯುಕ್ತ ಕೀಟಗಳು ನಾಶವಾಗುವುದರ ಜೊತೆಗೆ ಮನುಷ್ಯರ ಆರೋಗ್ಯದ ಮೇಲೆ ಸಹಜವಾಗಿ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಇದರ ಜೊತೆಗೆ ಸೊಳ್ಳೆಗಳು ಕೀಟನಾಶಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಮತ್ತು ಸಸ್ಯ ಜನ್ಯ  ಕೀಟನಾಶಕವನ್ನು ಕಂಡು ಹಿಡಿಯುವ ಉದ್ದೇಶದಿಂದ ಸಂಶೋಧನೆಯನ್ನು ಕೈಗೊಳ್ಳಲಾಗಿದೆ.

Join Our Whatsapp Group

      ಅಳಲೇಕಾಯಿಯ ಬೀಜದ ಸತ್ವದಲ್ಲಿರುವ ಹಲವಾರು ರಾಸಾಯನಿಕ ಘಟಕಗಳಿಗೆ ಡೆಂಗ್ಯೂ ಕಾಯಿಲೆಯನ್ನು ಹರಡುವ ಸೊಳ್ಳೆಯ ಮರಿಗಳನ್ನು ನಾಶಪಡಿಸುವ ಸಾಮರ್ಥ್ಯವಿದೆ ಯೆಂದು ಕಂಡುಬಂದಿದೆ. ಈ ಸತ್ವದಿಂದ ಇತರ ಕೀಟಗಳಿಗೆ ಯಾವುದೇ ರೀತಿಯ ಹಾನಿಯಾಗದಿರುವುದು ಗಮನಾರ್ಹವಾದ ಅಂಶ.

    ಬೆಂಜಿನ್, ಹೆಕ್ಸೇನ್, ಈಥೈಲ್ ಅಸಿಟೇಟ್, ಕ್ಲೋರಫಾರಂ ಮತ್ತು ಮೆಥನಾಲ್ ದ್ರಾವಣ ಉಪಯೋಗಿಸಿ ಅಳಲೆಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವವನ್ನು ಮೂರು ಜಾತಿಯ ಸೊಳ್ಳೆಗಳ ಮೇಲೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಪರೀಕ್ಷೆಯಿಂದ ಮೆಥನಾಲ್ ದ್ರಾವಣ ಉಪಯೋಗಿಸಿ ತಯಾರಿಸಿದ ಸತ್ವ ಶೇಕಡ 100 ರಷ್ಟು ಸೊಳ್ಳೆಮರಿ ಮತ್ತು ಮೊಟ್ಟೆಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆಯೆಂದು ದೃಢಪಟ್ಟಿದೆ ಅಳಲೆಕಾಯಿಯ ಸತ್ವಕ್ಕೆ ಉತ್ತಮ ಕೀಟ ನಾಶಕ ವಾಗುವ ಎಲ್ಲಾ ಗುಣ ಲಕ್ಷಣವಿದೆ ಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಈ ಸೂಕ್ಷ್ಮಾಣು ಜೀವಿಗಳ ಮೇಲೆ ನಡೆಸಿದ ಪ್ರಯೋಗಗಳ ಫಲ :-

 ಅಳಲೆಕಾಯಿಯನ್ನು ಒಂದನ್ನೇ ಉಪಯೋಗಿಸಿ ನಡೆಸಿದ ಪ್ರಯೋಗಗಳನ್ನು ಆಯ್ಕೆ ಮಾಡಿದೆ.

 ಶಿಲೀಂದ್ರ ನಾಶಕ ಗುಣ :

 ನೀರು ಮತ್ತು ಈಥೈಲ್ ಅಸಿಟೇಟ್ ದ್ರಾವಣ ಉಪಯೋಗಿಸಿ ಅಳಲೆಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವಕ್ಕೆ ಹಲವು ಬಗೆಯ ಶಿಲೀಂಧ್ರಗಳನ್ನು ನಾಶಪಡಿಸುವ ಸಾಮರ್ಥ್ಯವಿದೆ ಯೆಂದು ತಿಳಿದು ಬಂದಿದೆ.

  ಅಳಲೆಕಾಯಿಯಿಂದ ತಯಾರಿಸಿದ ತತ್ವಕ್ಕೆ ಚರ್ಮರೋಗವನ್ನುಂಟು ಮಾಡುವ ಸಿಲೀಂಧ್ರಗಳನ್ನು ನಾಶಪಡಿಸುವ ಗುಣವಿದೆಯೆಂದು ವರದಿಯಾಗಿದೆ.

 ಬ್ಯಾಕ್ಟೀರಿಯ ನಾಶಕ ಗುಣ

 ನೀರು, ಎಥನಾಲ್ ಮತ್ತು ಮೇಥನಾಲ್ ದ್ರಾವಣ ಉಪಯೋಗಿಸಿ  ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಭೇದಿಗೆ,ರಕ್ತ ಭೇದಿಗೆ, ಹೊಟ್ಟೆ ಹುಣ್ಣಿಗೆ ಕಾರಣವಾದ ಹಲವಾರು ಬಗೆಯ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.

    ಈಥೈಲ್ ಅಸಿಟೇಟ ದ್ರಾವಣ ಉಪಯೋಗಿಸಿ ಅಳಲೆಕಾಯಿಂದ ತಯಾರಿಸಿದ ಸತ್ವಕ್ಕೆ ಗೋವಿನಲ್ಲಿ ಕೆಜ್ಜಲ ಬಾವಿಗೆ ಕಾರಣವಾದ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯವಿದೆ ಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ.

       ಕರುಳಿನಲ್ಲಿ ಆಶ್ರಯ ಪಡೆದು ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯ ಬುಟನಾಲ್ ದ್ರಾವಣ ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ವರದಿಯಾಗಿದೆ.

    ಹಲ್ಲಿನ ಮೇಲೆ ಕರೆಕಟ್ಟಲು ಕಾರಣವಾದ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಗುಣ ಅಳಲೆ ಕಾಯಿಯ ಸತ್ವಕ್ಕೆ ಇದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಅಳಲೆಕಾಯಿಯ ಸತ್ವ ಉಪಯೋಗಿಸಿ ಬಾಯಿ ಮುಕ್ಕಳಿಸುವ ದ್ರಾವಣವನ್ನು ತಯಾರಿಸಿ ಬಾಯಿಯ ರಕ್ಷಣೆಗೆ, ಅದರಲ್ಲೂ ಮುಖ್ಯವಾಗಿ ಹಲ್ಲಿನ ಮೇಲೆ ಕರೆ ಕಟ್ಟುವುದನ್ನು ತಡೆಯಬಹುದೆಂಬ ಅಭಿಪ್ರಾಯಕ್ಕೆ ಬರಲಾಗಿದೆ.