ಮನೆ ದೇವಸ್ಥಾನ ಶ್ರೀ ಸಿದ್ಧಪೀಠ

ಶ್ರೀ ಸಿದ್ಧಪೀಠ

0

     ಲಕ್ಕಯ್ಯನ ಪಾಳ್ಯ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು ಈ ಪುಣ್ಯಕ್ಷೇತ್ರ ಶ್ರೀ ಸಿದ್ಧಪೀಠ.

      ಮನೆಯವರ ನಿಂದೆನಿಗೆ ಗುರಿಯಾದರು ಒಮ್ಮೆ ಗುರೂಜಿಗಳ ಕನಸಿನಲ್ಲಿ ಒಬ್ಬ ಗುರು ಬಂದು ನೀನು ಶಿವರಾತ್ರಿಗೆ ಕಾಶಿಗೆ ಬರಬೇಕೆಂದು ಹೇಳಿದರು.ಗುರೂಜಿಗಳ ಬಳಿ ಆ ಸಮಯದಲ್ಲಿ ಹಣವಿರಲಿಲ್ಲ ಆದ್ದರಿಂದ ಹೇಗೆ ಹೋಗುವುದು ಎಂಬ ಚಿಂತೆಯಲ್ಲಿ ಕುಳಿತಾಗ ಅವರ ಸ್ನೇಹಿತರೊಬ್ಬರು ಅಲ್ಲಿಗೆ ಬಂದರು. ಅವರ ಬಡಿ ಗುರುಜಿಯವರು ನಡೆದ ವಿಷಯವನ್ನೆಲ್ಲ ತಿಳಿಸಿದರು ಸ್ನೇಹಿತರು ನಾನು ನಿನಗೆ ಕಾಶಿಗೆ ಕಾಶಿಯ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಮಾರನೇ ದಿನ ಅವರನ್ನು ಕಾಶಿಗೆ ಕೊಂಡೊಯ್ದರು.

      ಪ್ರಾತಃಕಾಲದ ವಿಧಿ ವಿಧಾನಗಳನ್ನು ಮುಗಿಸಿಕೊಂಡು ವಿಶ್ವೇಶ್ವರ ದರ್ಶನ ಮಾಡಿದರು ನಂತರ ಗಂಗಾ ನದಿ ಬಂದಾಗ ಯಾರು ಬಂದು ಗುರೂಜಿಯವರ ಕೈ ಹಿಡಿದು ಎಳೆದುಕೊಂಡು ಹೋದರು ಗುರುಜಿಯವರಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದಾಗಿ ಕಣ್ಣು ಮುಚ್ಚಿ ಬಿಟ್ಟರು.

     ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದಾಗ ಅವರ ಕನಸಿನಲ್ಲಿ ಕಂಡಂತಹ ಗುರೂಜಿಗಳು ಅವರ ಕಣ್ಣೆದುರು ನಿಂತಿದ್ದರು. ಗುರೂಜಿಗಳಿಗೆ ಬಹಳ ಆಶ್ಚರ್ಯವಾಯಿತು. ಅವರನ್ನು ನೋಡಿ ನಮಸ್ಕರಿಸಿದರು ಗುರುಗಳು ಅವರಿಗೆ ಹೇಳಿದರು ನೀನು ಹುಟ್ಟಿರುವುದು ಧರ್ಮಕಾರ್ಯ ಮಾಡುವುದಕ್ಕಾಗಿ ನೀನು ದೇವರ ಸೇವೆ ಮಾಡಬೇಕು ಎಂದರು.

      ನೀನು ಶ್ರೀ ಸಿದ್ಧಪೀಠ ಎಂಬ ಸಂಸ್ಥಾನ ಮಾಡುತ್ತೀಯಾ ಇಲ್ಲಿಂದ ಹೊರಡು ಎಂದು ಅಪ್ಪಣೆ ನೀಡಿದರು. ಧೂಪನಹಳ್ಳಿಯಲ್ಲಿ ಹಿಂದೆ ಇದ್ದಂತಹ ಮಹೇಶ್ವರಮ್ಮ ದೇವಿಯನ್ನು ಚಿಕ್ಕಂನಿಂದಲೂ ಗುರೂಜಿಯವರು ಪೂಜೆ ಸಲ್ಲಿಸುತ್ತಿದ್ದರು. ದೇವಾಲಯದಲ್ಲಿ ಕೆಲವು  ಪದ್ಧತಿಗಳು ಇತ್ತು ಅಲ್ಲಿರುವ ಸಾಂಪ್ರದಾಯಿಕ ಪ್ರಕಾರ ಎರಡು ಜನಾಂಗದವರು ಮಾತ್ರವೇ ದೇವಿಯನ್ನು ಪೂಜೆ ಮಾಡಬೇಕು ಬೇರೆಯವರು ಹೋಗಬಾರದು ಆದರಿಂದ ದೇವಸ್ಥಾನದಲ್ಲಿ ಗುರೂಜಿಯವರಿಗೆ ಪೂಜೆ ಮಾಡಲು ನಿರಾಕರಿಸುತ್ತಿದ್ದರು.

    ಒಮ್ಮೆ ತಾಯಿ ಇವರ ಕನಸಿನಲ್ಲಿ ಬಂದು ನನ್ನನ್ನು ಒಂದು ವಿಗ್ರಹ ರೂಪದಲ್ಲಿ ಮನೆಯಲ್ಲಿ ಪೂಜಿಸು ನಾ ನಿನಗೆ ಅನುಗ್ರಹಿಸುತ್ತೇನೆ ಎಂದು ಹೇಳಿದರು. ಆ ಸಮಯದಲ್ಲಿ ಗುರೂಜಿಯವರ ಗುರುಗಳಾದ ಅವಧಾನಿ ಎಂಬುವರು  ವಿಗ್ರಹ ಮಾಡಿಸಲು 25000 ಹಣವನ್ನು ಕೊಟ್ಟರು ಗುರೂಜಿಯವರು ವಿಗ್ರಹ ಮಾಡಿಸಿ ತಾಯಿಯನ್ನು ಮನೆಯಲ್ಲಿ ಇಟ್ಟು ಸ್ವಲ್ಪ ದಿನಗಳ ಕಾಲ ನಂತರ ಅಲ್ಲಿ ಪೂಜೆ ಮಾಡುತ್ತಿದ್ದರು.

     ಅಲ್ಲಿಂದ ರಾಮೋಹಳ್ಳಿಗೆ ತಂದು ಅಲ್ಲಿ ಒಂದು ಮನೆಯನ್ನು ಮಾಡಿ ತಾಯಿಯನ್ನು ಪ್ರತಿಷ್ಠಾಪನೆ ಮಾಡಿ ಮೂರು ವರ್ಷಗಳ ಕಾಲ ಆ ಮನೆಯಲ್ಲಿ ಪೂಜೆಗಳು ನಡೆಯುತ್ತಿತ್ತು. ಭಕ್ತಾದಿಗಳು ಬಂದು ಅವರ ಕಷ್ಟ ಕಾರ್ಪಣ್ಯಗಳನ್ನು ದೇವಿಯ ಮುಂದಿಟ್ಟು ದೇವಿಗೆ ಸೇವೆ ಸಲ್ಲಿಸುತ್ತಿದ್ದರು.

      ಹೀಗಿರಲು ಒಂದು ದಿನ ಗುರೂಜಿಯವರಿಗೆ ದೇವಿಯಿಂದ ಒಂದು ಸಂಸ್ಥಾನ ಕಟ್ಟಲು ಅಪ್ಪಣೆಯಾಯಿತಂತೆ ಆದರೆ ಗುರೂಜಿ ಬಳಿ  ಹಣವಿಲ್ಲದಿದ್ದಿದ್ದರಿಂದ ಬಹಳ ಕಡೆ ಪ್ರಯತ್ನಪಟ್ಟು ಕೊನೆಗೆ ಒಂದು ಕಡೆ ಜಾಗ ಸಿಕ್ಕಿತು..ಆ ಸ್ಥಳದಲ್ಲಿ ಸುಮಾರು ವರ್ಷಗಳ ಹಿಂದೆ ಒಂದು ದೊಡ್ಡ ಆಲದ ಮರ ಇದ್ದ ಜಾಗ ಆಗಿತ್ತು.ಅದನ್ನು ಒಂದು ಲೇಔಟ್ ಮಾಡುವ ಉದ್ದೇಶದಿಂದ ಆಲದ ಮರ ಕಡಿದು ಲೇಔಟ್ ಮಾಡಿದ್ದರಂತೆ.

      ಆದರೆ ಅಲ್ಲಿರುವ ಎಲ್ಲಾ ಸೈಟ್ ಗಳು ಮಾರಾಟ ಆದರೂ, ಈ ಜಾಗ ಮಾತ್ರ ಹಾಗೆ ಉಳಿದಿತ್ತು. ಆ ಸಂದರ್ಭದಲ್ಲಿ ಗುರೂಜಿಯವರು ಆ ಜಾಗದ ಮಾಲೀಕರಿಗೆ ದೇವಸ್ಥಾನ ಕಟ್ಟಲು ಈ ಜಾಗವನ್ನು ಕೇಳಿದಾಗ ಮಾಲೀಕರು ಒಪ್ಪಿಕೊಂಡು ಈ ಜಾಗವನ್ನು ದೇವಸ್ಥಾನಕ್ಕೆ ಕೊಟ್ಟರಂತೆ. ತದನಂತರ ಅಲ್ಲಿ ದೇವಸ್ಥಾನ ನಿರ್ಮಾಣ ಮಾಡಿಸಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಾ ಬಂದು ಒಂದು ವರ್ಷದ ನಂತರ ಶ್ರೀ ಸಿದ್ಧಪೀಠ ಎಂಬ ಹೆಸರು ಇಟ್ಟಿರುತ್ತಾರೆ.

      ಶುದ್ಧ  ಶುಕ್ಲಪಕ್ಷ ಜೇಷ್ಠ ನವಮಿ ಶ್ರೀ ಮಹೇಶ್ವರಮ್ಮ ನವರ ತಾಯಿ ಹುಟ್ಟಿದ ದಿನ ದಿನಕ್ಕೆ ದೇವಸ್ಥಾನದಲ್ಲಿ ಉತ್ಸವವನ್ನು ಮಾಡಬೇಕೆಂದು ವಿಜೃಂಭಣೆಯಿಂದ ಎಲ್ಲಾ ತಯಾರಿಗಳು ನಡೆದಿರುತ್ತದೆ. ತದನಂತರ ತಾಯಿ ಗುರೂಜಿಗಳಿಗೆ ಕನಸಿನಲ್ಲಿ ಬಂದು ಇಲ್ಲಿ ದೇವಸ್ಥಾನ ಕಟ್ಟಿರುವುದು ನಿಮಿತ್ತ. ನಾನು ಇಲ್ಲಿ ಸುಮಾರು 2000  ವರ್ಷಗಳಿಗಳ ಹಿಂದೆ  ಈ ಜಾಗದಲ್ಲಿ ನಿಲ್ಲಿಸಿದ್ದೇನೆ ಅಂತ ಹೇಳಿದಾಗ ಗುರುಗಳಿಗೆ ಆಶ್ಚರ್ಯವಾಗಿ ತಾಯಿಯನ್ನು ಕೇಳುತ್ತಾರೆ.

     ತಾಯಿ ನೀನು ಇರುವ ಸ್ಥಳ ಯಾವುದು ತಿಳಿಸೆಂದು ಕೇಳಿದಾಗ ಅದಕ್ಕೆ ನಾನು ಹುಟ್ಟಿದ ದಿನವೇ ತಿಳಿಸುತ್ತೇನೆ ಎಂದು ಹೇಳುತ್ತಾಳೆ.

    ಹೀಗೆ ಅವಳ ಹುಟ್ಟಿದ ದಿನದಂದು ಉತ್ಸವಮೂರ್ತಿಯನ್ನು ತೆಗೆದುಕೊಂಡು ಮೆರವಣಿಗೆ ಮಾಡಿಸಿ, ದೇವಾಲಯದ ಹಿಂದೆ ಹೋದಾಗ ಆ ಹಿಂಭಾಗದಲ್ಲಿ ಉತ್ಸವಮೂರ್ತಿಯ ಒಂದು ಜಾಗದಲ್ಲಿ ನಿಂತುಬಿಡುತ್ತದೆ. ಯಾಕೆಂದರೆ ನೋಡಿದಾಗ ಅಲ್ಲಿ ಸುಮಾರು ಆರು ಅಡಿ ಎತ್ತರದ ಮೂರು ಅಡಿ ಹಗಲ ಇರುವಂತಹ ಒಂದು ವೃತ್ತ ಕಾಣುತ್ತದೆ. ಗುರುಜಿಯವರಿಗೆ ಅನುಮಾನ ಬಂದು ಹುತ್ತಕ್ಕೆ 70 ಲೀಟರ್ ಹಾಲಿನಿಂದ ಅಭಿಷೇಕ ಮಾಡಿ ಹುತ್ತವನ್ನು ಕೆಡವಿಸಿ ನೋಡಿದಾಗ ಮೂರು ಅಡಿ ಒಳಗೆ ಕಣಜದ ಒಳಗೆ ತಾಯಿಯ ವಿಗ್ರಹಗಳಿದ್ದವು.

     ಅಲ್ಲಿಂದ ಹೊರಗೆ ತೆಗೆದ ಅಭಿಷೇಕ ಮಾಡಿಸಿ ಊರಿನ ಹಿರಿಯರಲ್ಲಿ ಅದನ್ನು ತೋರಿಸಿ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿದ್ದರು 200 ವರ್ಷಗಳ ಹಿಂದೆ ದೇವಾಲಯದ ಜಾಗದಲ್ಲಿ ಒಂದು ಗ್ರಾಮದಲ್ಲಿ ಮಹೇಶ್ವರಮ್ಮ ಚೌಡೇಶ್ವರಮ್ಮ ತಾಯಿ ಪೂಜೆ ನಡೆಯುತ್ತಿತ್ತಂತೆ.ತಾಯಿಯರು ಹೇಗೆ ಹುತ್ತದಲ್ಲಿ ಹೋದರೆ ಎಂಬುದಕ್ಕೆ ಇತಿಹಾಸವಿದೆ.

     ಈ ಹಿಂದೆ ಈ ದೇವಾಲಯವಿದ್ದ ಜಾಗದಲ್ಲಿ ಒಂದು ದೊಡ್ಡ ಕಾಡು ಇದ್ದು ಅಲ್ಲಿ ಒಂದೇ ಒಂದು ಮನೆ ಇತ್ತಂತೆ. ಅಲ್ಲಿ ಇಬ್ಬರು ದಂಪತಿಗಳು ವಾಸವಾಗಿದ್ದರು ಅವರಿಗೆ ನಾಲ್ಕು ಜನ ಮಕ್ಕಳಿದ್ದರು. ಆ ನಾಲ್ಕು ಜನ ಮಕ್ಕಳಿಗೆ ಕಾಯಿಲೆ ಬಂದು ಮೃತಪಟ್ಟಿರುತ್ತಾರೆ. ತದನಂತರ ದಂಪತಿಗಳು ನಾವು ಇಲ್ಲಿಂದ ಪ್ರಯೋಜನ ಇಲ್ಲ ಎಂದು ಕಾಶಿ ಹೊರಡುತ್ತಾರೆ.

      ಆ ಮನೆಯ ಹಾಳು ಬಿದ್ದು ಅಲ್ಲಿಂದ ದೇವಿಯ ವಿಗ್ರಹಗಳು ಭೂಮಿಯಲ್ಲಿ ಹೂತುಹೋಗಿ ಮುಂದಿನ ತಲೆಮಾರಿನವರು ಅದನ್ನು ತೆಗೆದು ಅದಕ್ಕೆ ಒಂದು ಸಣ್ಣ ದೇವಾಲಯ ಕಟ್ಟಿ ಪೂಜೆ ನಡೆಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ದೇವರ ವಿಗ್ರಹಗಳನ್ನು ಒಬ್ಬ ಕಳ್ಳನ್ನು ಕದ್ದು ತೆಗೆದುಕೊಂಡು ಹೋಗುವಾಗ ಜೋರಾದ ಸಿಡಿಲು ಬಂದು ಆ ಕಳ್ಳನು ಭೂಮಿಯಲ್ಲಿ ವಿಗ್ರಹವನ್ನು ಮುಚ್ಚಿಟ್ಟಿರುತ್ತಾನೆ.

       ಆಗ ಅದು ಭೂಮಿಯ ಒಳಗೆ ಹೋಗಿರುತ್ತದೆ  ಹಿಂದೆ ಅಲ್ಲಿ ದೇವಸ್ಥಾನವಿದ್ದ ಪುರಾವೆಗಳು ಇಂದಿಗೂ ನೋಡಬಹುದು. ಸಿದ್ದಪೀಠದಲ್ಲಿ ಗಣಪತಿ ಪೂಜೆ,ಮಹಾಲಕ್ಷ್ಮಿವ್ರತ,ಶಿವರಾತ್ರಿ ಮಹೋತ್ಸವ. ವೈಕುಂಠ ಏಕಾದಶಿ,ವೆಂಕಟೇಶ್ವರ ಕಲ್ಯಾಣೋತ್ಸವ ಅಯ್ಯಪ್ಪ ಸ್ವಾಮಿ  ಪೂಜೆ ಇಲ್ಲಿಂದಲೇ ಇರುಮುಡಿ ಹೊತ್ತು ಶಬರಿಮಲೆ ಹೋಗುತ್ತಾರೆ .ಪೂಜೆ ಮನೆಗೆ ಹೋಗುತ್ತಾರೆ ಈ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ಬೆಳ್ಳಿಯ ವಿಗ್ರಹ ಇಟ್ಟು ರಥೋತ್ಸವ ಇಲ್ಲಿ ನೆರವೇರಿಸುತ್ತಾರೆ ತಾಯಿಯ ಉತ್ಸಹಗಳು ನಡೆಸಿಕೊಂಡು ಬಂದಿರುತ್ತಾರೆ.

    ಈ ಕ್ಷೇತ್ರದ ಎರಡು ಹೋರಿಗಳು ಗೋಶಾಲೆಯಿಂದ ದಾನವಾಗಿ ಬಂದಂತಹ ಹೋರಿಗಳನ್ನು ಇಲ್ಲಿ ಸಾಕುತ್ತಿದ್ದಾರೆ.ಒಂದರ ಹೆಸರು ಮಂಜುನಾಥ ಇನ್ನೊಂದು ಹೆಸರು ನಂದೀಶ್ವರ.ಎಂದು ಹೆಸರಿಟ್ಟು ದೇವಿಗೆ ಪ್ರಸಾದ ನೈವೇದ್ಯ ಆದನಂತರ. ನಂದೀಶ್ವರನಿಗೆ ಕೊಟ್ಟು ಅವರು ತಿಂದ ಬಳಿಕ ಪ್ರಸಾದ ರೀತಿಯಲ್ಲಿ ಭಕ್ತಾದಿಗಳಿಗೆ ಕೊಡುತ್ತಾ ಬಂದಿದ್ದಾರೆ.

      ದೇವಿಯ ಪ್ರತಿಷ್ಠಾಪನೆ ಮಾಡುವ ಮೊದಲು ಹೋರಿಗಳನ್ನು ಮೇಯಲು ಬಿಟ್ಟಾಗ ಆ ಹುತ್ತದ ಬಳಿಗೆ ಹೋಗಿ ಇರುತ್ತಿದ್ದವಂತೆ,  ದೇವತೆಗಳು ಮನುಷ್ಯರಿಗಿಂತ ಪ್ರಾಣಿಗಳ ಜೊತೆ ಮಾತನಾಡುತ್ತಾರಂತೆ, ಗುರೂಜಿಯವರಿಗೆ ಅನುಮಾನ ಬಂದು ಏನು ಇರಬಹುದು ಎಂದು ಯೋಚಿಸುತ್ತಿದ್ದಂತೆ. ಅನಂತರ ತಾಯಿ ಹೇಳಿದ ಮೇಲೆ ಅವುಗಳನ್ನು ಹಲ್ಲಿ ಕೂರುತ್ತಿದ್ದ ಕಾರಣ ಏನೆಂದು ಅರ್ಥವಾಯಿತು. ಸಿದ್ಧ ಪೀಠದ ಆಧಿದೇವತೆ ಚೌಡೇಶ್ವರಿ ತಾಯಿ ಅವಳ ಪ್ರೇರಣೆ ಯಂತೆ ಉದ್ಭವ ಮೂರ್ತಿಯಾಗಿ ಕಾಣಿಸಿಕೊಂಡು ಈ ಕ್ಷೇತ್ರದಲ್ಲಿ ನಿಂತಿದ್ದಾಳೆ. 2021 ಆಗಸ್ಟ್ 15ರಂದು ಪ್ರತಿಷ್ಠಾಪನೆ  ಮಾಡಲಾಯಿತು. ಹಲವಾರು ರಾಜ್ಯಗಳಿಂದ ಭಕ್ತಾದಿಗಳು ಬಂದು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ.