1. ಮಾವಿನ ಹಣ್ಣಿನ ಸೀಕರ್ಣೆಯನ್ನು ಸೇವಿಸು ವುದರಿಂದ ಕಣ್ಣಿನ ಆರೋಗ್ಯ ಸ್ಥಿರಗೊಳ್ಳುವುದು.
2. ಬಾಳೆಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿಂದರೆ ಕಣ್ಣು ಉರಿ ಕಡಿಮೆ ಆಗುವುದು.
3. ನೇತ್ರ ರೋಗಿಗಳಿಗೆ ಬಾಳೆಹಣ್ಣಿನ ಸೇವನೆ ತುಂಬಾ ಪರಿಣಾಮಕಾರಿ.
4. ನೆಲ್ಲಿಕಾಯಿಯ ರಸವನ್ನು ದಿನವು ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರ ಆಗುವುದು.
5. ಅಗಸೆ ಸೊಪ್ಪಿನ ಪಲ್ಯದಿಂದ ಕಣ್ಣಿನ ದೃಷ್ಟಿ ದೋಷ ದೂರ ಆಗುವುದು.
6. ಊಟದ ಜೊತೆಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುತ್ತಿದ್ದರೆ ಕಣ್ಣುನೋವು ಕಡಿಮೆ ಆಗುವುದು.
7. ಕೆಂಪು ಮೂಲಂಗಿಯ ಕೋಸುಂಬರಿಯ ತುರಿಯನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ಗಣನೀಯ ರೀತಿಯಲ್ಲಿ ನಿವಾರಣೆ ಆಗುವುದು.
8. ಹಸಿಮೂಲಂಗಿಯ ಸೇವನೆಯಿಂದ ನೇತ್ರ ರೋಗವನ್ನು ದೂರ ಮಾಡಬಹುದು.
9. ಹಸಿ ಮೂಲಂಗಿಯ ಚೂರುಗಳಿಗೆ ಮೆಣಸುಕಾಳಿನ ಪುಡಿ, ಉಪ್ಪು ನಿಂಬೆರಸ ಬೆರೆಸಿ ತಿಂದರೆ ದೃಷ್ಟಿ ಮಾಂದ್ಯತೆ ನಿವಾರಣೆ ಆಗುವುದು.
10. ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ದೂರ ಆಗುವುದು.
11. ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಕಣ್ಣುಗಳ ಉರಿ ಕಡಿಮೆಯಾಗುವುದು.
12. ಉಪ್ಪಿನ ಹರಳನ್ನು ಎದೆ ಹಾಲಿನಲ್ಲಿ ಕರಗಿಸಿ, ಕಣ್ಣಿಗೆ ಹಚ್ಚಿಕೊಂಡರೆ ಕಣ್ಣು ಉರಿ ಕಡಿಮೆಯಾಗುವುದು.
13. ಕಣ್ಣು ಕೆಂಪಗಾದಾಗ, ಕಣ್ಣು ಚುಚ್ಚುತ್ತಿರುವಾಗಲೂ ಈ ಚಿಕಿತ್ಸೆಯನ್ನು ಅನುಸರಿಸಬಹುದು.
14. ಗಾಳಿಯ ಕಾಲದಲ್ಲಿ ಕಣ್ಣು ನೋವು ಬಂದರೆ ಅರಸಿನದ ಒದ್ದೆ ಬಟ್ಟೆಯನ್ನು ಕಣ್ಣಿಗೆ ಕಟ್ಟಿಕೊಳ್ಳುವುದರಿಂದ ನೋವು ಕಡಿಮೆ ಆಗುವುದು.
15. ದಿನವೂ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ನೇತ್ರ ರೋಗ ಸಂಭವಿಸುವುದು ವಿರಳ
16. ನವಿಲು ಕೋಸನ್ನು ಹಸಿಯಾಗಿ ತುರಿದು, ಕೋಸಂಬರಿ ಮಾಡಿ ತಿನ್ನುವುದರಿಂದ ಕಣ್ಣುಗಳ ಆರೋಗ್ಯ ಸುಧಾರಿಸುವುದು.
17. ಗರಿಕೆ ಹುಲ್ಲಿನ ರಸವನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ, ತಲೆಗೆ ಹಚ್ಚಿಕೊಂಡು, ಒಂದೆರಡು ಗಂಟೆಗಳ ಕಾಲ ಎಳೆ ಬಿಸಿಲಿನಲ್ಲಿ ನೆನೆಯಲು ಬಿಟ್ಟು, ಅನಂತರ ಸ್ಥಾನ ಮಾಡುವುದರಿಂದ ನೇತ್ರ ರೋಗದ ನಿವಾರಣೆಯಾಗುವುದು.
18. ಕಣ್ಣು ಕೆಂಪಗಾದಾಗ ಗರಿಕೆ ಹುಲ್ಲಿನ ಶೋಧಿಸಿದ ರಸವನ್ನು ಕಣ್ಣಿಗೆ ತೊಟ್ಟು ತೊಟ್ಟಾಗಿ ಬಿಡುವುದರಿಂದ ಕಣ್ಣುಗಳಲ್ಲಿ ಅಡರಿಂದ ಕೆಂಪು ಕಾಣದಾಗುವುದು.
19. ಬೇವಿನ ಸೊಪ್ಪಿನ ರಸವನ್ನು ಕಣ್ಣಿಗೆ ತೊಟ್ಟು ತೊಟ್ಟಾಗಿ ಬಿಡುತ್ತಿದ್ದರೆ ದೃಷ್ಟಿ ಮಾಂದ್ಯತೆ ದೂರ ಆಗುವುದು.
20. ದಿನವೂ ಒಂದೆರಡು ಬಾರಿ ಪ್ರತಿ ಕಣ್ಣಿಗೂ ಎದೆಹಾಲನ್ನು ತೊಡಗಿಸುತ್ತಿದ್ದರೆ ಕಣ್ಣು ಚುಚ್ಚುವುದು ಕಡಿಮೆಯಾಗುವುದು.