‘ವಾಮದೇವ’ ಎಂಬುದೂ ಸಹ ಒಬ್ಬ ಮಹರ್ಷಿಯ ಹೆಸರು. ಅಲ್ಲದೆ ತ್ರಿಮೂರ್ತಿಗಳಲ್ಲಿ ‘ಲಯ’ದ ಕಾರ್ಯವನ್ನು ಕೈಗೊಂಡ ಶಿವನಿಗೂ ಈ ಹೆಸರಿದೆ ಪಂಚಮುಖನಾದ ಈಶ್ವರನ ಸಂದ್ಯೋಜಾತ ವಾಮದೇವ, ಅಘೋರ ತತ್ಪುರುಷ, ಈಶಾನ ಎಂಬ ಈ ಮುಖದಲ್ಲಿ ‘ವಾಸುದೇವ’ ವೂ ಒಂದು.
ಅಭ್ಯಾಸ ಕ್ರಮ
1. ಮೊದಲು ‘ಬುದ್ಧಕೋನಾಸನ’ದ ಭಂಗಿಯಲ್ಲಿ ಕುಳಿತುಕೊಳ್ಳಬೇಕು.
2. ಬಳಿಕ,ಬಲಗೈಯನ್ನು ಬಲ ಬಲತೊಡೆಯ ಮೀನ ಖಂಡಗಳ ಮಧ್ಯಭಾಗದಲ್ಲಿ ತೋರಿಸಿ. ಬಲಪಾದದ ಬೆರಳುಗಳನ್ನು ನೆಲದ ಮೇಲಿಟ್ಟು ಹಿಮ್ಮಡಿಗಳನ್ನು ಮೇಲೆತ್ತಿ ಪಾದಗಳನ್ನು ಗುದಗುಹ್ಯಸ್ಥಾನಗಳ ಮಧ್ಯಭಾಗಕ್ಕೆ ತಂದಿಡಬೇಕು.ಈಗ ಕೈಯನ್ನು ತೆಗೆದು ಹಿಮ್ಮಡಿಯನ್ನು ಮುಂದೂಡಿ ಸರಿಸಿ, ಬಲಮಂಡಿಯನ್ನು ನೆಲದ ಮೇಲೆ ಊರಿಡಬೇಕು. ಆಗ ಬಲಪಾದವು ಮೂಲ ಬಂಧಾಸನದಲ್ಲಿರುತ್ತದೆ.
3. ಆಮೇಲೆ, ಎಡಪಾದವನ್ನು ಬಲತೊಡೆಯ ಮೂಲಕ್ಕೆ ಸೇರಿಸಿ ‘ಪದ್ಮಾಸನ’ದ ಭಂಗಿಗೆ ತರಬೇಕು.
4. ಆ ಬಳಿಕ, ಎಡತೋಳನ್ನು ಭುಜದಿಂದ ಬೆನ್ನಹಿಂಭಾಗಕ್ಕೆ ತೂಗಿಟ್ಟು ಉಸಿರನ್ನು ಹೊರ ದೂಡುತ್ತ,ಎಡಗಾಲಿ ನುಂಗುಟವನ್ನು ಹಿಡಿದು, ಬಲಗೈಯಿಂದ ಎಡಪಾದದ ಮುಂಭಾಗವನ್ನು ಬಿಗಿಯಾಗಿ ಗಢಙಹಿಡಿದುಕೊಳ್ಳಬೇಕು.
5. ಅನಂತರ ಕತ್ತನ್ನು ಬಲಭಾಗಕ್ಕೆ ತಿರುಗಿಸಿ ಆಳವಾಗಿ ಉಸಿರಾಟವನ್ನು ನಡೆಸುತ್ತ 30 ಸೆಕೆಂಡುಗಳ ಕಾಲ ಸಮತೋಲಿತ ಸ್ಥಿತಿಯಲ್ಲಿ ನಿಲ್ಲಿಸಬೇಕು.
6. ಈ ಭಂಗಿಯಲ್ಲಿ ಸ್ಥಿತಿಯನ್ನು ಸಡಿಲಿಸಿ, ‘ಬುದ್ಧಕೋನಾಸನ’ದ ಸ್ಥಿತಿಗೆ ಹಿಂದಿರುಗಿ ಮೇಲೆ ವಿವರಿಸಿದ ಅಭ್ಯಾಸ ಕ್ರಮವನ್ನುನುಸರಿಸಿಯೇ ಇನ್ನೊಂದು ಕಡೆಯೂ ಇದೇ ವಿಧವಾದ ಭಂಗಿಯನ್ನುನು ಗೊಳಿಸಿ, ಅದರಲ್ಲಿಯೂ ಅಷ್ಟೇ ಕಾಲ ನೆಲೆಸಬೇಕು. ವಿವರಣೆಯಲ್ಲಿ ಬಲ ಮತ್ತು ‘ಎಡ’ ಎಂಬ ಪದಗಳಿಗೆ ಕ್ರಮವಾಗಿ ‘ಎಡ’ ಮತ್ತು ‘ಬಲ’ ಪಾದಗಳಿಟ್ಟು ಅದರಂತೆ ನಡೆಸಬೇಕು.
ಪರಿಣಾಮಗಳು
ಈ ಭಂಗಿಯು ಕಾಲುಗಳಲ್ಲಿಯ ಪೆಡುಸುತನವನ್ನು ನೀಗಿಸಿ,ಅವುಗಳಲ್ಲಿಯ ನೋವನ್ನು ಕಳೆಯುತ್ತದೆ, ಅಲ್ಲದೆ ಇದು ಜನೇಂದ್ರಿಯಗಳನ್ನು ಆರೋಗ್ಯ ಸ್ಥಿತಿಯಲ್ಲಿಡುವುದಕ್ಕೆ ನೆರವಾಗುತ್ತದೆ.